For Quick Alerts
  ALLOW NOTIFICATIONS  
  For Daily Alerts

  ಹೀಗೂ ಉಂಟೆ;'ನೀನ್ಯಾರೇ; ರಸಗುಲ್ಲ ಹನಿಗಳು

  By Staff
  |

  ಹೀಗೂ ಉಂಟೆ

  'ಏನಾಗಲಿ ಮುಂದೆ ಸಾಗು ನೀ ಎಂಬ ವಾಕ್ಯದಂತೆ ನಡೆಯುತ್ತಿರುವವರು ಮದನ್‌ಪಟೇಲ್. ಚಿತ್ರ ತಯಾರಿಕೆಯಲ್ಲಿ ಏಳು-ಬೀಳು ಸಾಮಾನ್ಯ. ಯಾವುದಕ್ಕೂ ಅಂಜದೆ ಚಿತ್ರ ನಿರ್ಮಾಣವೇ ನನ್ನ ಗುರಿ ಎಂದು ಚಿತ್ರದ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುವ ಮದನ್‌ಪಟೇಲ್ ನಿರ್ಮಾಣದ ಹೀಗೂ ಉಂಟೆ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟಿವಿ9 ಸುದ್ದಿ ವಾಹಿನಿಯ ಜನಪ್ರಿಯ ಕಾರ್ಯಕ್ರಮ 'ಹೀಗೂ ಉಂಟೆ' ಹೆಸರನ್ನು ಈ ಚಿತ್ರಕ್ಕೆ ಇಟ್ಟಿರುವುದರಿಂದ ಜನರಲ್ಲಿ ಸಹಜ ಕುತೂಹಲ ಮೂಡಿದೆ. ಗಾರ್ಮೆಂಟ್ ಲೋಕದ ಕರ್ಮಕಾಂಡದ ಸುತ್ತ ಕಥೆ ಸುತ್ತುತ್ತದೆ ಎನ್ನಲಾಗಿದೆ.

  ಚಿತ್ರ ಸಮಾಜಮುಖಿಯಾಗಿರಬೇಕೆಂಬ ಇರಾದೆ ನಿರ್ಮಾಪಕರದು ಹಾಗಾಗಿ ಗಾರ್ಮೆಂಟ್ ದುನಿಯಾದಲ್ಲಿ ನಡೆಯುವ ಅವ್ಯವಸ್ಥೆಗಳನ್ನು ಚಿತ್ರದ ಮೂಲಕ ತೋರಿಸುತ್ತಿದ್ದಾರೆ ಹಾಗೂ ಅಲ್ಲಿನ ಸಮಸ್ಯೆಗಳಿಗೆ ಪರಿಹಾರವನ್ನು ಸೂಚಿಸಿದ್ದಾರೆ. ಮೀಡಿಯಾ ಇಂಟರ್ ನ್ಯಾಷನಲ್ ಸಂಸ್ಥೆ ಮೂಲಕ ಪಟೇಲ್ ಅವರು ಚಿತ್ರವನ್ನು ನಿರ್ಮಿಸಿದಲ್ಲದೆ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಆದಿಮಹೇಶ್‌ಪಟೇಲ್ ಸಂಗೀತ, ಜೆ.ಜಿ.ಕೃಷ್ಣ ಛಾಯಾಗ್ರಹಣ, ಆರ್.ಡಿ.ರವಿ ಸಂಕಲನ, ಆನಂದ್ ಗೀತರಚನೆ, ಜಂಪರ್ ಕೃಷ್ಣ, ಸಂಪತ್‌ರಾಜ್ ನೃತ್ಯ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಮದನ್‌ಪಟೇಲ್, ಕಂಚನ್, ಅರವಿಂದ್, ನಿಶಿತಾಗೌಡ, ವನಿತಾ, ಮಧುಗೋಮತಿ, ಜೈಆಕಾಶ್, ರಕ್ಷಾ, ರವಿತೇಜ, ಆರ್ಯ, ಪ್ರಕಾಶ್, ಸಂತೋಷ್, ದೇವಿಕಾ, ಅಭೀಷೇಕ್ ಮುಂತಾದವರಿದ್ದಾರೆ.
  ********
  'ನೀನ್ಯಾರೇ
  ಶಶಿ ಎಂಬ ನಾಮಾಂಕಿತದಿಂದ ಚಿತ್ರವನ್ನು ಆರಂಭಿಸಿ ಚಿತ್ರೀಕರಣದ ನಡುವೆ ಸಿಂದೇಶ್ ಎಂದು ಮರು ನಾಮಕರಣ ಮಾಡಿಕೊಂಡ ಸಿಂದೇಶ್ ನಿರ್ದೇಶನದ ನೀನ್ಯಾರೇ ಚಿತ್ರಕ್ಕೆ ಮೊದಲಪ್ರತಿ ಸಿದ್ದವಾಗಿದ್ದು ಸದ್ಯದಲ್ಲೇ ಸೆನ್ಸಾರ್ ಮುಂದೆ ಕಾಣಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ. ಈ ಚಿತ್ರ ವಿ.ಮನೋಹರ್ ಸಂಗೀತ ಸಂಯೋಜನೆಯ ನೂರನೇ ಚಿತ್ರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಲಹರಿ ಸಂಸ್ಥೆ ಹೊರತಂದಿರುವ ಚಿತ್ರದ ಧ್ವನಿಸುರುಳಿಗಳಿಗೆ ಉತ್ತಮ ಪ್ರತಿಕ್ರಿಯೆ ದೊರೆಕ್ಕಿದೆ. ಮೊದಲು ಮುದ್ರಣಗೊಂಡ ಚಿತ್ರದ ಧ್ವನಿಸುರುಳಿಗಳು ಮುಗಿದು ರಿಪಿಟ್‌ಆರ್ಡರ್ ಬಂದಿದೆ ಎಂದು ತಿಳಿಸಿರುವ ಲಹರಿ ವೇಲು ಚಿತ್ರದ ಬಿಡುಗಡೆಗೂ ಮುನ್ನ ಧ್ವನಿಸುರುಳಿಗಳು ಇಷ್ಟು ಯಶಸ್ಸು ಕಂಡಿರುವುದು ನನಗೆ ಸಂತಸ ತಂದಿದೆ ಎನ್ನುತ್ತಾರೆ.

  ಅಂಬಾಭವಾನಿ ಮೂವೀ ಮೇಕರ್ಸ್ ಲಾಂಛನದಲ್ಲಿ ವರದಾರೆಡ್ಡಿ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ಸಿಂದೇಶ್ ಅವರೇ ಕತೆ, ಚಿತ್ರಕತೆ, ಸಂಭಾಷಣೆ ಬರೆದಿದ್ದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ವಿಷ್ಣುವರ್ಧನ್ ಕ್ಯಾಮೆರಾ, ವಿ.ಮನೋಹರ್ ಸಂಗೀತ, ರವಿವರ್ಮ ಸಾಹಸ, ಗೋವರ್ಧನ್ ಸಂಕಲನ, ಶಿವುಹೊಳಲು ಸಹನಿರ್ದೇಶನ ಹಾಗೂ ಹೊಸಹಳ್ಳಿ ಸುಧೀಂದ್ರ ಅವರ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಸೂರಜ್, ಸಂಭ್ರಮ, ಹೇಮಗಂಗಾ, ಚಿತ್ರಾಶೆಣೈ, ಓಂಪ್ರಕಾಶ್‌ರಾವ್, ಶರತ್‌ಬಾಬು, ತುಳಸಿಶಿವಮಣಿ, ವಿಶ್ವ, ಪವನ್ ಮುಂತಾದವರಿದ್ದಾರೆ.

  ******
  ವಿದೇಶದಲ್ಲಿ ರಸಗುಲ್ಲ
  ರಸಗುಲ್ಲ ಸವಿಯಲು ಸ್ವದೇಶವಾದರೇನು, ವಿದೇಶವಾದರೇನು ಅದರ ರುಚಿ ಮಾತ್ರ ಒಂದೇ. ಎಷ್ಟೇ ಆದರೂ ಭಾರತೀಯ ತಿನಿಸುಗಳು ವಿದೇಶಿಗರಿಗೆ ಪ್ರಾಣವಲ್ಲವೆ. ಆದರೆ ಇಲ್ಲಿ ತಿನ್ನುವ ರಸಗುಲ್ಲದ ಬಗ್ಗೆ ಹೇಳುವುದಕ್ಕಿಂತ ನೋಡುವ ರಸಗುಲ್ಲದ ವಿವರಣೆ ನೀಡುವುದು ಸೂಕ್ತ. ದೇವಿಪದ್ಮಾವತಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಂಜನಾ ಅವರು ನಿರ್ಮಿಸಿ ಗೋವರ್ಧನ್ ನಿರ್ದೇಶಿಸುತ್ತಿರುವ ಈ ವಿಶಿಷ್ಟ ಶೀರ್ಷಿಕೆಯ ಕಥಾನಕಕ್ಕೆ ವಿದೇಶದಲ್ಲಿ ಮೂರುಗೀತೆಗಳು ಚಿತ್ರೀಕೃತವಾಗಿದೆ.
  ಸಾಹಿತಿ ಸೂ.ರುದ್ರಮೂರ್ತಿಶಾಸ್ತ್ರಿ ರಚಿಸಿರುವ

  ಮೋಹಕತಾರೆ ನೀ ಪ್ರೇಮದಧಾರೆ ...ಪ್ರೇಮಕ್ಕೆ ಎಂದು ಆಕಾಶವೇ ಮೇರೆ'
  'ಮನಸು ಮಿಡಿದಿದೆ, ಕನಸು ಕರೆದಿದೆ ನಿನಗೆ ಕಾಯುತ್ತಿದೆ ಬಾರೊ ಹಾಗೂ ಈ ದಿನ ಸುಖಾಗಮನ ಬಾ.. ಬಳಿ ಇದೇ ಸುದಿನ '
  ಗೀತೆಗಳನ್ನು ಛಾಯಾಗ್ರಾಹಕ ದಿವಾಕರ್‌ರಾವ್ ಅವರು ಬ್ಯಾಂಕಾಕ್, ಪಟ್ಟಾಯ ಹಾಗೂ ಪುಕ್ಕಟ್‌ನ ಸುಂದರ ಪರಿಸರದಲ್ಲಿ ಸೆರೆಹಿಡಿದಿದ್ದಾರೆ, ನಾಯಕ ಪಿಯೂಶ್ ಹಾಗೂ ಕಾಶೀಷ್‌ರೀಟಾ ಈ ಹಾಡುಗಳ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

  'ರಸಗುಲ್ಲ ಚಿತ್ರಕ್ಕೆ ನಿರ್ದೇಶಕರೇ ಕತೆ, ಚಿತ್ರಕತೆ ಬರೆದಿದ್ದು ಸಂಗೀತ ನಿರ್ದೇಶನದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ರುದ್ರಮೂರ್ತಿ ಶಾಸ್ತ್ರಿ ಅವರ ಗೀತರಚನೆ ಹಾಗೂ ಸಂಭಾಷಣೆ, ದಿವಾಕರ್‌ರಾವ್ ಛಾಯಾಗ್ರಹಣ, ಪಿ.ಆರ್.ಸೌಂದರರಾಜ್ ಸಂಕಲನ, ಲೀಲಾಮನೋಹರ್ ನಿರ್ಮಾಣನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ಪಿಯೂಷ್, ಆನಂದ್, ಕಶೀಷ್‌ರೀಟಾ, ಆರ್ಯ, ಮನೋಜ್ ಮುಂತಾದವರಿದ್ದಾರೆ.

  (ದಟ್ಸ್ ಕನ್ನಡ ಸಿನಿವಾರ್ತೆ)

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X