ಪ್ರೇಮ್ ಶಿವರಾಜ್ ಕುಮಾರ್ ಸಂಗಮದಲ್ಲಿ ಜಂಗಮ
ಜೋಗಿ ಆಯ್ತು ಜೋಗಯ್ಯ ಆಯ್ತು ಮುಂದೇನು? ಇದಕ್ಕೆ ಉತ್ತರ 'ಜಂಗಮ'. ಹೌದು ಸ್ವತಃ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಪ್ರೇಮ್ ಮತ್ತು ಶಿವಣ್ಣ ಸಂಗಮದಲ್ಲಿ 'ಜಂಗಮ' ಬರಲಿದೆ. ಇದು ಜೋಗಿ ಮೂರನೇ ಭಾಗ. ಸದ್ಯಕ್ಕೆ ಚಿತ್ರಕತೆ ಸಿದ್ಧತೆಯಲ್ಲಿರುವುದಾಗಿ ಶಿವಣ್ಣ ತಿಳಿಸಿದ್ದಾರೆ. ಜೋಗಯ್ಯ ಚಿತ್ರ ವಿಮರ್ಶೆ ಓದಿ.
ಚಿತ್ರವನ್ನು ಯಾರು ನಿರ್ಮಿಸಲಿದ್ದಾರೆ? ಪಾತ್ರವರ್ಗದಲ್ಲಿ ಯಾರ್ಯಾರು ಇರುತ್ತಾರೆ ಎಂಬುದು ಇನ್ನಷ್ಟೆ ನಿರ್ಧಾರವಾಗಬೇಕಿದೆ. ಸದ್ಯಕ್ಕೆ ಚಿತ್ರದ ಟೈಟಲ್ ಅಷ್ಟೆ ಪಕ್ಕಾ ಆಗಿದೆ. ಶುಕ್ರವಾರ (ಆ.19) ಶಿವಣ್ಣ ಮಾನನಾಡುತ್ತಾ ಬೆಂಗಳೂರು ಈ ವಿಷಯವನ್ನು ತಿಳಿಸಿದರು.
'ಜೋಗಿ' ಹಾಗೂ 'ಜೋಗಯ್ಯ' ಚಿತ್ರಗಳಂತೆ 'ಜಂಗಮ'ದಲ್ಲೂ ಲವ್, ಸೆಂಟಿಮೆಂಟ್, ಥ್ರಿಲ್, ಆಕ್ಷನ್ ಇರುತ್ತದೆ. ಈಗಷ್ಟೆ 'ಜೋಗಯ್ಯ' ಬಿಡುಗಡೆಯಾಗಿದ್ದು ಈ ಚಿತ್ರದ ಸಕ್ಸಸ್ ಮೇಲೆ 'ಜಂಗಮ'ದ ಸಿದ್ಧತೆಗಳು ನಡೆಯಲಿವೆ. ಹೆಚ್ಚಿನ ಮಾಹಿತಿಗಾಗಿ ದಟ್ಸ್‌ಕನ್ನಡದಲ್ಲಿ ನಿರೀಕ್ಷಿಸುತ್ತಿರಿ. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
The sequel to Prem's latest Kannada film Jogayya titled as Jangama. The film will star Shivarajkumar in lead role. More details of the movie are awaited.
ಜೋಗಯ್ಯ ಚಿತ್ರವಿಮರ್ಶೆ ಶಿವರಾಜ್ ಕುಮಾರ್ ಹ್ಯಾಟ್ರಿಕ್ ಹೀರೋ ಪ್ರೇಮ್ ವಿ ಹರಿಕೃಷ್ಣ jogayya movie review shiva rajkumar director prem v harikrishna


Click it and Unblock the Notifications












