ದುನಿಯಾ ವಿಜಯ್ ಜರಾಸಂಧ ವಯಸ್ಕರಿಗೆ ಮಾತ್ರ
ದುನಿಯಾ ವಿಜಯ್ ಹಾಗೂ ಪ್ರಣೀತಾ ಮುಖ್ಯಭೂಮಿಕೆಯಲ್ಲಿರುವ 'ಜರಾಸಂಧ' ಚಿತ್ರ ವಯಸ್ಕರಿಗೆ ಮಾತ್ರ. ಶಶಾಂಕ್ ನಿರ್ದೇಶನದ ಈ ಚಿತ್ರಕ್ಕೆ ಪ್ರಾದೇಶಿಕ ಸೆನ್ಸಾರ್ ಮಂಡಳಿ 'ಎ' ಸರ್ಟಿಫಿಕೇಟ್ ನೀಡಿದೆ. "ಚಿತ್ರವನ್ನು ವೀಕ್ಷಿಸಿದ ಸೆನ್ಸಾರ್ ಮಂಡಳಿ ಮುಕ್ತಕಂಠದಿಂದ ಶ್ಲಾಘಿಸಿತು. ಚಿತ್ರದ ಕಥಾವಸ್ತು, ತೆರೆಗೆ ತಂದಿರುವ ರೀತಿಯನ್ನು ಇಷ್ಟಪಟ್ಟಿದೆ" ಎಂದಿದ್ದಾರೆ ಚಿತ್ರದ ನಿರ್ಮಾಪಕರು.
'ಜರಾಸಂಧ' ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಗುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ 'ಎ' ಸರ್ಟಿಫಿಕೇಟ್ ಬಂದಿರುವ ಬಗ್ಗೆ ಸ್ವಲ್ಪ ಬೇಸರ ತಂದಿದೆ ಎಂದಿದ್ದಾರೆ ಶಶಾಂಕ್. ಚಿತ್ರಕತೆಯಲ್ಲಿ ಕೆಲವೊಂದು ಸ್ಫೋಟಕ ಹಾಗೂ ಕ್ರಾಂತಿಕಾರಕ ಸನ್ನಿವೇಶಗಳಿರುವ ಕಾರಣ 'ಎ' ಪ್ರಮಾಣ ಪತ್ರ ನೀಡಲಾಗಿದೆ. ಸೆನ್ಸಾರ್ ಮಂಡಳಿಯ ಸದಸ್ಯರು ಚಿತ್ರದಲ್ಲಿನ ತಾಂತ್ರಿಕತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ತಮಗೆ ತೀವ್ರ ಸಂತಸ ತಂದಿದೆ ಎಂದಿದ್ದಾರೆ ಶಶಾಂಕ.
ಚಿತ್ರದ ಹಾಡುಗಳು ಈಗಾಗಲೆ ಹಿಟ್ ಹಾಗಿದ್ದು ಜರಾಸಂಧನ ಬಗ್ಗೆ ಮೆಚ್ಚುಗೆ ಮಾತುಗಳು ಕೇಳಿಬರುತ್ತಿವೆ. ಬಾಕ್ಸಾಫೀಸಲ್ಲಿ ಹಿಟ್ ಆಗಿಲಿದೆ ಎಂಬ ವಿಶ್ವಾಸವನ್ನು ಚಿತ್ರದ ನಿರ್ಮಾಪಕ ಗಂಗಾಧರ ವ್ಯಕ್ತಪಡಿಸಿದ್ದಾರೆ. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರಿಗೆ ಚಿತ್ರ ಇಷ್ಟವಾಗಲಿದೆ ಎಂದಿದ್ದಾರೆ ಗಂಗಾಧರ್. (ಏಜೆನ್ಸೀಸ್)


Click it and Unblock the Notifications











