ಇದೇ ತಿಂಗಳಲ್ಲಿ 'ಜುಗಾರಿ' ತೆರೆಗೆ
ಸಿ.ಎಂ ಅಸೋಸಿಯೆಟ್ಸ್ ಲಾಂಛನದಲ್ಲಿ ನಿರ್ಮಾಣವಾಗಿರುವ 'ಜುಗಾರಿ ಚಿತ್ರ ಇದೇ ತಿಂಗಳು ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಜಿ.ಆರ್.ರಮೇಶ್ ತಿಳಿಸಿದ್ದಾರೆ.ನಿರ್ಮಾಪಕ ರಮೇಶ್ ಚಿತ್ರದ ಕಥೆಗಾರರೂ ಹೌದು. 'ನನಗೆ ಚಿಕ್ಕಂದಿನಿಂದಲ್ಲೇ ಪತ್ರಿಕೆಗಳನ್ನು ಓದುವ ಹವ್ಯಾಸ. ಪತಿಕೆಗಳಲ್ಲಿ ಓದಿ ತಿಳಿದ ವಿಷಯಗಳೇ ಕಥೆ ಬರೆಯಲು ಸ್ಪೂರ್ತಿಯಾಯಿತು ಎನ್ನುತ್ತಾರೆ ಅವರು.
ಖ್ಯಾತ ಹಾಸ್ಯ ನಟ ನರಸಿಂಹರಾಜು ಅವರ ಮೊಮ್ಮಕ್ಕಳು ಈ ಚಿತ್ರದಿಂದ ಬೆಳ್ಳಿತೆರೆಗೆ ಪರಿಚಿತರಾಗುತ್ತಿದ್ದಾರೆ. ಅವರ ಮೊಮ್ಮಗ ಎಸ್.ಡಿ.ಅರವಿಂದ್ ಈ ಚಿತ್ರದ ನಿರ್ದೇಶಕರಾದರೆ, ಅರವಿಂದರ ಸಹೋದರ ಅವಿನಾಶ್ ದಿವಾಕರ್ 'ಜುಗಾರಿಯಲ್ಲಿ ನಾಯಕನಾಗಿ ನಟಿಸಿದ್ದಾರೆ.
ನಿರ್ದೇಶಕರೇ ಚಿತ್ರಕಥೆ ಬರೆದಿರುವ ಈ ಚಿತ್ರಕ್ಕೆ ಅರ್ಜುನ್ ಅವರ ಸಂಗೀತವಿದೆ. ಅನಂತ್ ಅರಸ್ ಕ್ಯಾಮೆರಾ, ಶ್ರೀ ಸಂಕಲನ, ರವಿವರ್ಮ ಸಾಹಸ, ನಾರಾಯಣಸ್ವಾಮಿ, ಕೆ.ಕಲ್ಯಾಣ್ ಹಾಗೂ ಎಸ್.ಡಿ.ಅರವಿಂದ್ ಗೀತರಚನೆಯಿರುವ 'ಜುಗಾರಿಯ ತಾರಾಬಳಗದಲ್ಲಿ ಅವಿನಾಶ್ ದಿವಾಕರ್, ಹರ್ಷಿಕಾ ಪೂಣಚ್ಛ, ಅವಿನಾಶ್, ಸರತ್ ಲೋಹಿತಾಶ್ವಾ, ಬಿ.ಸುರೇಶ್, ಧರ್ಮ, ಮೋಹನ್ ಜುನೇಜಾ, ಗಿರಿಜಾ ಲೋಕೇಶ್, ಅಚ್ಯುತ್‌ಕುಮಾರ್ ಮುಂತಾದವರಿದ್ದಾರೆ.


Click it and Unblock the Notifications











