»   » ಯಾರದು ಎನ್ನುತ್ತಾ ವಿನೋದ್ ರಾಜ್ ಆಗಮನ

ಯಾರದು ಎನ್ನುತ್ತಾ ವಿನೋದ್ ರಾಜ್ ಆಗಮನ

Subscribe to Filmibeat Kannada
Vinod Raj
ಹಿರಿಯ ನಟಿ ಡಾ.ಲೀಲಾವತಿ ಅವರ ಪುತ್ರ ವಿನೋದ್ ರಾಜ್ ರ ಹೊಸ ಚಿತ್ರ ಸೆಟ್ಟೇರಿದೆ. 'ಯಾರದು' ಎಂದು ಕೇಳುವ ಮೂಲಕ ವಿನೋದ್ ಸಾಕಷ್ಟು ಕುತೂಹಲವನ್ನು ಮೂಡಿಸಿದ್ದಾರೆ. ಶ್ರೀಮತಿ ಲೀಲಾವತಿ ಕಂಬೈನ್ಸ್ ಮೂಲಕ ಲೀಲಾವತಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.

ಶ್ರೀನಿವಾಸ್ ಕೌಶಿಕ್ ನಿರ್ದೇಶಿಸುತ್ತಿರುವ ಈ ಚಿತ್ರದ ಹಾಡುಗಳ ಧ್ವನಿಮುದ್ರಣ ಕರಿಸುಬ್ಬು ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಭರದಿಂದ ಸಾಗುತ್ತಿದೆ.ಚಿತ್ರದ ಪೂಜಾಕಾರ್ಯಕ್ರಮಕ್ಕೆ ಲೀಲಾವತಿ ತಮ್ಮ ಪುತ್ರ ವಿನೋದ್ ರಾಜ್ ಜೊತೆ ಆಗಮಿಸಿದ್ದರು. ಡ್ಯಾನ್ಸ್ ಸ್ಟಾರ್ ವಿನೋದ್ ರಾಜ್ ಚಿತ್ರಗಳನ್ನುಎದುರು ನೋಡುವ ಪ್ರೇಕ್ಷಕರ ಮುಂದೆ ಬಹಳ ದಿನಗಳ ನಂತರ ಅವರು ಬರುತ್ತ್ತಿರುವುದು ಸಂತೋಷದ ವಿಚಾರ.

ಯಾರದು ಚಿತ್ರಕ್ಕೆ ನಾಗೇಶ್ ಆಚಾರ್ಯ ಛಾಯಾಗ್ರಹಣ ಹಾಗೂ ಅಖಿಲ್ ಜಿ ಸಂಗೀತ ನಿರ್ದೇಶಿಸುತ್ತಿದ್ದಾರೆ. ವಿನೋದ್ ರಾಜ್ ಗೆ ಜೊಡಿಯಾಗಿ ಅಶ್ವಿನಿ ನಟಿಸಲಿದ್ದಾರೆ. ಡಾ.ಲೀಲಾವತಿ, ಅನುಶ್ರೀ, ಸುಬ್ರಹ್ಮಣಿ, ಸುಮನ್, ಪವನ್, ಮಂಜು,ಶಾಂತಕುಮಾರ್, ಸದಾಶಿವ ಬ್ರಹ್ಮಾವರ ಮುಂತಾದರ ದಂಡು ತಾರಾಬಳಗದಲ್ಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಹಳೇ ಕತೆಗೆ ಸುಣ್ಣಬಣ್ಣ :'ಶುಕ್ರ'ದೆಸೆ ನಿರೀಕ್ಷೆಯಲ್ಲಿ ವಿನೋದ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada