ಬ್ಲ್ಯಾಕ್, ಬೆಳ್ಳಿತೆರೆಗೆ ಮಹೇಂದರ್ ಇಟ್ಟ ದೃಷ್ಟಿಬೊಟ್ಟು
ಟೆಕ್ಕಿ ಮಹೇಂದರ್ ನಿರ್ದೇಶನ, ನಿರ್ಮಾಣದ 'ಬ್ಲ್ಯಾಕ್' ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಶೇ.75ರಷ್ಟು ಬಂಡವಾಳ ಹೂಡಿರುವ ಮಹೇಂದರ್ ಈ ಚಿತ್ರದ ಪಾತ್ರವೊಂದನ್ನು ಪೋಷಿಸುತ್ತಿದ್ದಾರೆ. 'ಬ್ಲ್ಯಾಕ್" ಪಕ್ಕಾ ಮನರಂಜನಾತ್ಮಕ ಚಿತ್ರ. ಈ ಚಿತ್ರ ಪ್ರೇಕ್ಷಕರಿಗೆ ಖಂಡಿತ ಇಷ್ಟವಾಗುತ್ತದೆ ಎನ್ನುತ್ತಾರೆ ಮಹೇಂದರ್.
ಇದೇ ಮೊದಲ ಬಾರಿಗೆ ಧಾರವಾಡದ ರಂಗಭೂಮಿ ಕಲಾವಿದೆ 72 ವರ್ಷದ ವಾಣಿ ಸರಸ್ವತಿ ಐಟಂ ಹಾಡೊಂದನ್ನು ಬ್ಲ್ಯಾಕ್ ಚಿತ್ರಕ್ಕಾಗಿ ಹಾಡಿದ್ದಾರೆ. ಆ ಹಾಡಿಗೆ ಸಾಹಿತ್ಯವನ್ನೂ ವಾಣಿ ಸರಸ್ವತಿ ಅವರೆ ರಚಿಸಿದ್ದಾರೆ. ಈ ಚಿತ್ರದ ಸಂಗೀತ ನಿರ್ದೇಶಕರು ಸಿ ಆರ್ ಬಾಬ್ಬಿ ಎಂಬ ಮಹಿಳೆ. ಹಾಡುಗಳ ಧ್ವನಿ ಮುದ್ರಣ ಕಾರ್ಯ ಕರಿಸುಬ್ಬು ಸ್ಟುಡಿಯೋದಲ್ಲಿ(ಬಾಲಾಜಿ ಡಿಜಿಟಲ್ ಸ್ಟುಡಿಯೋ) ನಡೆಯುತ್ತ್ತಿದೆ.
ಈ ಚಿತ್ರಕ್ಕೆ ವಿಶೇಷ ಕಂಠದ ಅಗತ್ಯ ಇದೆ ಎಂದರಿತ ಬಾಬ್ಬಿ ಅವರು ಕರಿಸುಬ್ಬು ಅವರಿಂದಲೇ ಹಾಡಿಸಿದ್ದಾರೆ! ಚಿತ್ರದಲ್ಲಿ ಒಟ್ಟು ಐದು ಹಾಡುಗಳಿವೆಯಂತೆ. ಕರಿಸುಬ್ಬು ಜೊತೆಗೆ ಚೈತ್ರಾ, ಕವಿತಾ ಕೃಷ್ಣಮೂರ್ತಿ ಮತ್ತು ಹೇಮಂತ್ ಸಹ ಕಂಠದಾನ ಮಾಡಿದ್ದಾರೆ. ಚಿತ್ರದ ಸಹ ನಿರ್ಮಾಪಕ ವಾಸು ರೆಡ್ಡಿ.ಬ್ಲ್ಯಾಕ್ ಚಿತ್ರ ಜನವರಿ 2009ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರಗಳಲ್ಲಿ ಇಣುಕಲಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications