ರಜನಿಕಾಂತ್ ಚಿತ್ರಕ್ಕೆ ನಾಯಕಿಯಾಗಿ ಐಂದ್ರಿತಾ ರೇ

ಕೆ. ಮಂಜು ನಿರ್ಮಾಣದ ದುನಿಯಾ ವಿಜಯ್ ಚಿತ್ರ 'ರಜನಿಕಾಂತ್'ಗೆ ನಾಯಕಿ ಯಾರೆಂಬುದು ಪ್ರಶ್ನೆಯಾಗಿಯೇ ಉಳಿದಿತ್ತು. ಅದಕ್ಕೀಗ ಉತ್ತರ ದೊರೆತಿದೆ. ಜಂಗ್ಲಿ ಚಿತ್ರದಲ್ಲಿ ವಿಜಯ್ ಜೋಡಿಯಾಗಿದ್ದ ನಟಿ ಐಂದ್ರಿತಾ ರೇ. ಈಗಾಗಲೇ ವಿಜಯ್-ಐಂದ್ರಿತಾ ಜೋಡಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದೆ.

ವಿಜಯ್ ಬಹುನಿರೀಕ್ಷೆಯ ಜರಾಸಂಧ 'ಠುಸ್' ಅಂದಮೇಲೆ ದುನಿಯಾ ವಿಜಯ್ ಈಗ 'ರಜನಿಕಾಂತ್' ಜಪ ಮಾಡುತ್ತಿದ್ದಾರೆ. ವಿಜಿಗೆ ಕೈಯಲ್ಲಿ ಸಾಕಷ್ಟು ಚಿತ್ರಗಳಿದ್ದರೂ ಜರಾಸಂಧ ಚಿತ್ರದ ಸೋಲಿನಿಂದ ಸಂಭಾವನೆ ಏರಿಸಿಕೊಳ್ಳುವುದಕ್ಕೆ ತೊಂದರೆ ಆಗಿದ್ದಂತೂ ಹೌದು. ಜರಾಸಂಧ ಕ್ಲಿಕ್ ಆಗಿದ್ದರೆ ವಿಜಯ್ ಸಂಭಾವನೆ 2 ಕೋಟಿ ರು. ದಾಟುತ್ತಿತ್ತು ಎಂಬ ಸುದ್ದಿ ಬಂದಿದೆ.

ಪ್ರದೀಪ್ ರಾಜ್ ನಿರ್ದೇಶನದಲ್ಲಿ ದುನಿಯಾ ವಿಜಯ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಾಕಷ್ಟು ಸ್ಟೈಲಿಶ್ ಪಾತ್ರ ಇದು ಎಂಬ ಗುಟ್ಟು, ಮಂಜು ಅವರಿಂದ ರಟ್ಟಾಗಿದೆ. ಬಿರುಸಿನಿಂದ ಚಿತ್ರೀಕರಣ ಮುಗಿಸುತ್ತಿರುವ ಈ ಚಿತ್ರ, ಕೆ. ಮಂಜು ಮನಸ್ಸು ಮಾಡಿದರೆ ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಗೆ ಬರಬಹುದು. ಸದ್ಯಕ್ಕಂತೂ ಮಂಜು ಚಿತ್ರ 'ಶೈಲೂ' ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ರಜನಿಕಾಂತ್ ನನ್ನು ಯಾವಾಗ ತೆರೆಯಮೇಲೆ ತೋರಿಸುತ್ತಾರೋ! (ಒನ್ ಇಂಡಿಯಾ ಕನ್ನಡ)

More from Filmibeat

English summary
K Manju Production kannada movie Rajinikanth. Finally, Aindrita Ray selected as heroine for hero Diniya Vijay. 
 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X