ದರ್ಶನ್, ನಿಖಿತಾ ಇದೀಗ ಟ್ರಾಕ್ಟರ್ ನಲ್ಲಿ 'ಸ್ನೇಹಿತರು'

ಅದ್ಹೇಗೋ ನಿಖಿತಾರನ್ನು ಒಪ್ಪಿಸಿ, ದರ್ಶನ್ ಜೊತೆ ನಿಲ್ಲಿಸಿ ಚಿತ್ರೀಕರಣ ಮಾಡುವಲ್ಲಿ ನಿರ್ದೇಶಕ ರಾಮ್ ನಾರಾಯಣ್ ಯಶಸ್ವಿಯಾಗಿದ್ದಾರೆ. ಜೊತೆಗೆ ಖುಷಿಯಾಗಿದ್ದಾರೆ. ಅವರಿಬ್ಬರಿಂದಾಗಿ ಚಿತ್ರಕ್ಕೆ ಒಂದಷ್ಟು ಲಾಭವಾಗುವುದು ಖಂಡಿತ ಎನ್ನಲಾಗುತ್ತಿದೆ. ಈ ಲೆಕ್ಕಾಚಾರ ತಪ್ಪುವ ಸಂಭವ ತೀರಾ ಕಡಿಮೆಯಿದೆ.
ಈ ಚಿತ್ರದ ಆ ಹಾಡು ಪೂರ್ತಿಯಾಗಿ ಚಿತ್ರೀಕರಣ ನಡೆದಿರುವುದು ಟ್ರ್ಯಾಕ್ಟರಿನಲ್ಲಿ ಅನ್ನೋದು ವಿಶೇಷ. "ಬಾಲಿವುಡ್ ನಟಿಯರೇ ಐಟಂ ಸಾಂಗುಗಳಿಗೆ ಹೆಜ್ಜೆ ಹಾಕುತ್ತಿರುವಾಗ ನಾನೇನು ಮಹಾ ಎಂದು ಪ್ರಶ್ನಿಸಿ 'ಸ್ನೇಹಿತರು' ಚಿತ್ರದ ಐಟಂ ಹಾಡಿಗೆ ಕುಣಿದಿದ್ದಾರೆ ನಿಖಿತಾ. ಮೇ ತಿಂಗಳಿನಲ್ಲಿ ಸ್ನೇಹಿತರು ಚಿತ್ರ ಬಿಡುಗಡೆ ಆಗಲಿದೆಯಂತೆ. (ಒನ್ ಇಂಡಿಯಾ ಕನ್ನಡ)
English summary
Challenging Star Darshan and Actress Nikita Thukral steps together for a Item Song in Snehitaru Movie.


Click it and Unblock the Notifications