twitter
    For Quick Alerts
    ALLOW NOTIFICATIONS  
    For Daily Alerts

    ಗಲ್ಲಾಪೆಟ್ಟಿಗೆಯಲ್ಲಿ ಪಲ್ಟಿ ಹೊಡೆದ ಕನ್ನಡದ ಚಿತ್ರಗಳು

    |
    <ul id="pagination-digg"><li class="previous"><a href="/news/19-flop-movies-kannada-2011-autopsy-aid0189.html">« Previous</a>

    ಕನಸುಗಾರ ರವಿಚಂದ್ರನ್ ಅಭಿನಯದ ಮಲ್ಲಿಕಾರ್ಜುನ, ದುನಿಯಾ ವಿಜಯ್, ರಮ್ಯಾ ಅಭಿನಯದ ಜಾನಿ ಮೇರಾ ನಾಮ್, ಪ್ರೀತಿ ಮೇರಾ ಕಾಮ್ ಚಿತ್ರಗಳು ಮೊದಲವಾರ ಉತ್ತಮ ಪ್ರದರ್ಶನ ಕಂಡರೂ ಮುಂದಿನ ದಿನಕ್ಕೆ ಯಶಸ್ವಿಯಾಗಲಿಲ್ಲ. ಯಶ್ ಅಭಿನಯದ ರಾಜಧಾನಿ, ಕಲಾಸಾಮ್ರಾಟ್ ತನ್ನ ಪುತ್ರ ಪಂಕಜ್ ಗಾಗಿ ನಿರ್ಮಿಸಿ, ನಿರ್ದೇಶಿಸಿದ ದುಷ್ಟ ಚಿತ್ರದ ಕಥೆ ಕೂಡ ಹಾಗೆ.

    ಇನ್ನು ನಮಿತ ಅಭಿನಯದ ನಮಿತಾ ಐ ಲವ್ ಯು ಚಿತ್ರಕ್ಕೆ ಟಿಕೆಟ್ ಜೊತೆ ಅನಾಸಿನ್ ಫ್ರೀ ಕೊಡುತ್ತೇನೆ ಅಂದರೂ ಪ್ರೇಕ್ಷಕರು ಅತ್ತ ಮುಖ ಮಾಡಿಲ್ಲ. ನೆನಪಿರಲಿ ಪ್ರೇಮ್ ಅಭಿನಯದ I am sorry ಮತ್ತೆ ಬನ್ನಿ ಪ್ರೀತ್ಸೋಣ ಚಿತ್ರ ಮರು ಬಿಡುಗಡೆ ಭಾಗ್ಯ ಕಂಡಿದೆ. ಅವರ ಅಭಿನಯದ ಧನ್ ಧನಾ ಧನ್ ಚಿತ್ರದ ಡಿಫರೆಂಟ್ ಲುಕ್ ಗೆ ಪ್ರೇಕ್ಷಕರು ಕ್ಯಾರೆ ಅನ್ನಲಿಲ್ಲ.

    ಉಪೇಂದ್ರ ಅಭಿನಯದ ಶ್ರೀಮತಿ ಚಿತ್ರ ಯಶಸ್ವಿಯಾಗಲಿಲ್ಲ. ಚನ್ನಮ್ಮ ಐಪಿಎಸ್, ಗಿನ್ನೆಶ್ ದಾಖಲೆಯ ಅವಧಿಯಲ್ಲಿ ಚಿತ್ರೀಕರಣಗೊಂಡ ಸುದೀಪ್ ಅಭಿನಯದ ಪೋಲೀಸ್ ಸ್ಟೋರಿ 3, ನವೀನ ಕೃಷ್ಣ ಅಭಿನಯದ ಯೋಗರಾಜ್, ದಿಗಂತ್ ಅಭಿನಯದ ಮಿಸ್ಟರ್ ಡುಪ್ಲಿಕೇಟ್, ಶ್ರೀನಗರ ಕಿಟ್ಟಿ ಅಭಿನಯದ ಪಂಚಾಮೃತ, ವೀರೇಂದ್ರ ಬಾಬು ನಿರ್ದೇಶಿಸಿ ಪ್ರಮುಖ ಭೂಮಿಕೆಯಲ್ಲಿದ್ದ ಸ್ವಯಂ ಕೃಷಿ, ಕೋಮಲ್ ಅಭಿನಯದ ಮರ್ಯಾದೆ ರಾಮಣ್ಣ ಸೋಲಿನ ಪಟ್ಟಿಗೆ ಸೇರಿದ ಇತರ ಚಿತ್ರಗಳು.

    ಒಂದೇ ದಿನ ಬಿಡುಗಡೆಗೊಂಡ ದಿಗಂತ್ ಅಭಿನಯದ ಪುತ್ರ ಮತ್ತು ತಾರೆ ಚಿತ್ರಗಳು ನೆಲಕಚ್ಚಿದ ಜೊತೆಗೆ ಎಲ್ಲಾ ಕಡೆಯಿಂದ ತೀವ್ರ ಟೀಕೆಗೆ ಗುರಿಯಾಯಿತು. ಮತ್ತೆ ದಿಗಂತ್ ಅಭಿನಯದ ಕಾಂಚಾಣ ಮತ್ತು ದೀಪಕ್, ಆಯೇಶಾ ಅಭಿನಯದ ಓಬವ್ವ ಚಿತ್ರಗಳು ಸೋತರೆ, ಗೋಲ್ಡನ್ ಸ್ಟಾರ್ ಅಭಿನಯದ ಬಹು ನಿರೀಕ್ಷಿತ ಮದುವೆಮನೆ ಕೂಡಾ ಫ್ಲಾಪ್ ಆಯಿತು. ಜಗ್ಗೇಶ್ ಅಭಿನಯದ ಬಾಡಿಗಾರ್ಡ್ ಚಿತ್ರಕ್ಕೆ ಗುರುರಾಘವೇಂದ್ರರ ಆಶೀರ್ವಾದ ಇರಲಿಲ್ಲವೇನೋ?

    ನಿರ್ಮಾಪಕ ಶೈಲೇಂದ್ರ ಬಾಬು ತಮ್ಮ ಮಗನಿಗಾಗಿ ನಿರ್ಮಿಸಿದ ಆಟ ಚಿತ್ರ ಮೂರೇ ವಾರದಲ್ಲಿ ಚಿತ್ರಮಂದಿರದಿಂದ ಕಾಲ್ಕಿತ್ತಿತು. ಈ ವರ್ಷದ ಇನ್ನೊಂದು ಅಭಿನಯದ ಚಿತ್ರ ಶಶಾಂಕ್ ನಿರ್ದೇಶನದ, ದುನಿಯಾ ವಿಜಯ್ ಅಭಿನಯದ ಜರಾಸಂದ ಚಿತ್ರ ಕೂಡ ಪ್ರೇಕ್ಷಕರ ಮನಸೆಳೆಯಲಿಲ್ಲ. ಇನ್ನು ಈ ತಿಂಗಳು ಬಿಡುಗಡೆಗೊಂಡ ವಿಷ್ಣುವರ್ಧನ ಮತ್ತು ಶೈಲೂ ಚಿತ್ರಗಳು ಉತ್ತಮ ಪ್ರದರ್ಶನ ಕಾಣುತ್ತಿದೆ.

    ಆದರೆ 2011 ರಲ್ಲಿ ಯದ್ವಾತದ್ವ ಪ್ರಚಾರ ಪಡೆದುಕೊಂಡಿದ್ದ ಚಿತ್ರವೆಂದರೆ ಜೋಗಿ ಪ್ರೇಮ್ ನಿರ್ದೇಶನದ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ಜೋಗಯ್ಯ ಚಿತ್ರ. ಚಿತ್ರದ ಮಹೂರ್ತದಿಂದ ಬಿಡುಗಡೆಗೊಳ್ಳು ವವರೆಗೂ ಉತ್ತಮ ಪ್ರಚಾರ ಕಂಡಿದ್ದ ಈ ಚಿತ್ರ ಡಾ. ರಾಜ್ ಅಭಿನಯದ ಮಯೂರ ಚಿತ್ರದ ನಂತರ ಇದೇ ಮೊದಲ ಬಾರಿಗೆ ಕೆಂಪೇಗೌಡ ರಸ್ತೆಯಲ್ಲಿ ಎರಡೆರಡು ಚಿತ್ರಮಂದಿರದಲ್ಲಿ ಬಿಡುಗಡೆ ಗೊಂಡಿತ್ತು.

    ಆದರೆ ಪ್ರೇಮ್ ನಿರ್ದೇಶನ ಪ್ರೇಕ್ಷಕರಿಗೆ ಇಷ್ಟವಾಗಲಿಲ್ಲ. ಅದ್ದೂರಿ ಒಪನಿಂಗ್ ಪಡೆದುಕೊಂಡಿದ್ದ ಈ ಚಿತ್ರ ಸೆಕೆಂಡ್ ಶೋ ನಲ್ಲೆ ಖಾಲಿ ಹೊಡೆಯಲಾರಂಭಿಸಿತು. ಹಾಗಾಗಿ 2011ರ 'Biggest Disaster' ಅಂದರೆ ಜೋಗಯ್ಯ ಚಿತ್ರ. ಆದರೂ ಪ್ರೇಮ್ ತನ್ನ ಚಿತ್ರಕ್ಕೆ ಮಾಡುವ ಪಬ್ಲಿಸಿಟಿ ಮೆಚ್ಚುವಂತದ್ದು.

    <ul id="pagination-digg"><li class="previous"><a href="/news/19-flop-movies-kannada-2011-autopsy-aid0189.html">« Previous</a>

    English summary
    101 movies rolled out of Kannada movie industry in the year 2011. Take a look at the list of most expected movies which did poor at the box-office. This pattern is not an unusual for Kannada movie market though.
    Monday, December 19, 2011, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X