»   » ಮಹೇಶ್ ಬಾಬು, ಕಾಜಲ್ ಜೋಡಿಗೆ ಮತ್ತೆ ವೆಲ್ ಕಮ್

ಮಹೇಶ್ ಬಾಬು, ಕಾಜಲ್ ಜೋಡಿಗೆ ಮತ್ತೆ ವೆಲ್ ಕಮ್

Posted By:
Subscribe to Filmibeat Kannada

ಯಶಸ್ವಿ ಚಿತ್ರ 'ದಿ ಬಿಸಿನೆಸ್ ಮನ್' ಜೋಡಿ ಮಹೇಶ್ ಬಾಬು ಹಾಗೂ ಕಾಜಲ್ ಅಗರವಾಲ್ ಹೊಸ ಚಿತ್ರ ಸೆಟ್ಟೇರಲಿದೆ. ಇದೇ ತಿಂಗಳು, ಏಪ್ರಿಲ್ 23 ಕ್ಕೆ ಸೆಟ್ಟೇರಲಿರುವ ಈ ಚಿತ್ರದ ನಿರ್ದೇಶಕರು ಸುಕುಮಾರ್. ಮಹೇಶ್ ಹಾಗೂ ಕಾಜಲ್ ಇಬ್ಬರೂ ಸದ್ಯ ಬೇರೆ ಬೇರೆ ಪ್ರಾಜೆಕ್ಟ್ ಗಳಲ್ಲಿ ಬ್ಯುಸಿಯಾಗಿದ್ದಾರೆ.

ಮುಹೂರ್ತ ನಡೆದ ತಕ್ಷಣ ಚಿತ್ರದ ಮೊದಲ ಶೂಟಿಂಗ್ ಶೆಡ್ಯೂಲ್, ಅನ್ನಪೂರ್ಣ ಸ್ಟುಡಿಯೋದಲ್ಲಿ ಈಗಾಗಲೇ ನಿರ್ಮಿಸಲಾಗಿರುವ ಭವ್ಯ ಸೆಟ್ ನಲ್ಲಿ ಪ್ರಾರಂಭವಾಗಲಿದೆ. ದೇವಿ ಸೂರಿ ಪ್ರಸಾದ್ ಸಂಗೀತ ಸಂಯೋಜನೆಯ ಹಾಡಿಗೆ ಪ್ರೇಮ್ ರಕ್ಷಿತ್ ನೃತ್ಯ ಸಂಯೋಜನೆ ಇರುವ ರೋಮ್ಯಾಂಟಿಕ್ ಹಾಡೊಂದು ಆ ಭವ್ಯ ಸೆಟ್ ನಲ್ಲಿ ಚಿತ್ರೀಕರಣಗೊಳ್ಳಲಿದೆ.

ಮಹೇಶ್ ಬಾಬು ಮತ್ತು ಕಾಜಲ್ ಅಗರವಾಲ್ 'ದಿ ಬಿಸಿನೆಸ್ ಮನ್' ಚಿತ್ರದಲ್ಲಿ ಮೊದಲ ಬಾರಿಗೆ ಜೋಡಿಯಾಗಿದ್ದರೂ ಎಲ್ಲಾ ವರ್ಗದ ಪ್ರೇಕ್ಷಕರಿಂದ ಈ ಜೋಡಿಯ ಕೆಮೆಸ್ಟ್ರಿಗೆ ಬಹಳಷ್ಟು ಪ್ರಶಂಸೆ ವ್ಯಕ್ತವಾಗಿತ್ತು. ಹಾಗಾಗಿ, ಇದೇ ಜೋಡಿಯನ್ನು ಮತ್ತೆ ತೆರೆಗೆ ತರಲು ಸುಕುಮಾರ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಮತ್ತೆ ಈ ಜೋಡಿ ಮೋಡಿ ಮಾಡಲಿದ್ದಾರಾ ಎಂಬುದನ್ನು ಕಾದುನೋಡಬೇಕಾಗಿದೆ. (ಏಎನ್ಸೀಸ್)

English summary
After the movie Businessman, actor Mahesh Babu and actress Kajal Aggarwal are teaming up again and will start shooting for their new venture on April 23.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada