ಲಾರಾ ಭೂಪತಿ ಸಂಬಂಧಕ್ಕೆ ಅಧಿಕೃತ ಮುದ್ರೆ
ಬಾಲಿವುಡ್ ಬೆಡಗಿ ಲಾರಾದತ್ತಾ ನಡುವೆ ಇದ್ದ ಗುಪ್ತ ಸಂಬಂಧಕ್ಕೆ ಅಧಿಕೃತ ಮುದ್ರೆ ಒತ್ತಿರುವ ಟೆನ್ನಿಸ್ ತಾರೆ ಮಹೇಶ್ ಭೂಪತಿ, ನಮ್ಮಿಬ್ಬರ ವಿವಾಹ ನಿಶ್ಚಿತಾರ್ಥ ಕಳೆದ ವಾರ ನಡೆದಿದೆ ಎಂದು ಟ್ವೀಟ್ ಮಾಡಿದ್ದಾರೆ.
"So Lara and me got engaged in NY last week", ಎಂದು ಮಹೇಶ್ ಟ್ವಿಟ್ಟರ್ ಸಂದೇಶ ಸಾರುತ್ತಿದೆ. ಸಾಮಾಜಿಕ ಜಾಲ ತಾಣ ಟ್ವಿಟರ್‌ನಲ್ಲಿ ಈ ವಿಷಯವನ್ನು ಬಹಿರಂಗವಾಗುತ್ತಿದ್ದಂತೆಯೆ ಅಭಿಮಾನಿಗಳಿಂದ ಶುಭಹಾರೈಕೆಗಳು ಹರಿದು ಬರುತ್ತಿವೆ. ಆಗಸ್ಟ್ ತಿಂಗಳಲ್ಲಿ ನಡೆದ ಯುಎಸ್ ಓಪನ್ ಸಂದರ್ಭದಲ್ಲಿ ಇಬ್ಬರು ನ್ಯೂಯಾರ್ಕ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಭಾರತದ ಖ್ಯಾತ ಟೆನಿಸ್ ಆಟಗಾರನಾಗಿರುವ ಮಹೇಶ್ ಭೂಪತಿ ಮತ್ತು ಪತ್ನಿ ರೂಪದರ್ಶಿ ಶ್ವೇತಾ ಜೈಶಂಕರ್ ವಿಚ್ಛೇದನಕ್ಕೆ ಇತ್ತೀಚೆಗಷ್ಟೇ ಕೋರ್ಟ್ ಅಸ್ತು ನೀಡಿತ್ತು. ಮಹೇಶ್ ಜೊತೆ ನಿಶ್ಚಿತಾರ್ಥವಾಗಿರುವುದನ್ನು ಒಪ್ಪಿಕೊಂಡ ಲಾರಾ, ಇಬ್ಬರೂ ಸದ್ಯಕ್ಕಂತೂ ಸಕತ್ ಬ್ಯುಸಿ ಬಹುಶಃ ನವೆಂಬರ್ ವೇಳೆಗೆ ಹಸೆಮಣೆ ಏರಬಹುದು ಎಂದಿದ್ದಾರೆ.
ಮಹೇಶ್ ಭೂಪತಿ ಮದುವೆ ಲಾರಾ ದತ್ತಾ ವಿಚ್ಛೇದನ ಶ್ವೇತಾ ಟೆನಿಸ್ ಬಾಲಿವುಡ್ mahesh bhupathi lara dutta marriage bollywood tennis divorce shweta


Click it and Unblock the Notifications