»   » ಮಂಗಳೂರು ಅಶ್ಲೀಲ ಸಿಡಿಯಲ್ಲಿ ಮುಸ್ಲಿಂ ಜೋಡಿ

ಮಂಗಳೂರು ಅಶ್ಲೀಲ ಸಿಡಿಯಲ್ಲಿ ಮುಸ್ಲಿಂ ಜೋಡಿ

Posted By:
Subscribe to Filmibeat Kannada

ಮಂಗಳೂರಿನಲ್ಲಿ ನೀಲಿ ಚಿತ್ರವೊಂದರ ತುಣುಕುಗಳು ಪಡ್ಡೆಗಳ ಮೊಬೈಲ್ ಫೋನ್ ಗಳಲ್ಲಿ ಹರಿದಾಡುತ್ತಿವೆ. ಮುಸ್ಲಿಂ ಯುವ ಜೋಡಿಯ ಪ್ರಣಯದಾಟದ ಸೀನ್ ಗಳು ಭರ್ಜರಿ ಸುದ್ದಿ ಮಾಡುತ್ತಿದೆ. ಮಂಗಳೂರಿನ ಸ್ಥಳೀಯ ಪತ್ರಿಕೆಗಳಲ್ಲಿ ಈ ಬಗ್ಗೆ ಪುಂಖಾನುಪುಂಖ ಸುದ್ದಿಗಳು ಪ್ರಕಟವಾಗುತ್ತಿವೆ.

ಈ ಹಿಂದೆ ಮುಂಗಾರು ಮಳೆ ಹೆಸರಿನಲ್ಲೊಂದು ನೀಲಿ ಚಿತ್ರ ಸುದ್ದಿ ಮಾಡಿತ್ತು. ಈಗ ಬಂದಿರುವ ಬ್ಲೂ ಫಿಲಂ ಮುಂಗಾರು ಮಳೆಯ ದಾಖಲೆ ಮುರಿಯುತ್ತಿದೆ ಎನ್ನಲಾಗಿದೆ. ಬ್ಲೂ ಫಿಲಂ ನಲ್ಲಿ ಇದ್ದಾರೆ ಎನ್ನಲಾಗಿರುವ ಸೂರತ್ಕಲ್ ಕೃಷ್ಣರಾಜಪುರದ ಕಾರು ಚಾಲಕ ಅನ್ವರ್ (ಹೆಸರು ಬದಲಾಯಿಸಲಾಗಿದೆ) ಹಾಗೂ ಮುಸ್ಲಿಂ ಶಾಲೆಯ ಶಿಕ್ಷಕಿ ಜಬೀನಾರನ್ನು (ಹೆಸರು ಬದಲಾಯಿಸಲಾಗಿದೆ) ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

ಕಾರುನಲ್ಲಿ ಒಮ್ಮೆ ಹಾಗೂ ಕೊಠಡಿಯೊಂದರಲ್ಲಿ ಒಮ್ಮೆ ಇಬ್ಬರೂ ಕಲಾಪ ನಡೆಸಿದ ದೃಶ್ಯಗಳು ಪಡ್ಡೆಗಳಿಗೆ ರಸಗವಳ ಸಿಕ್ಕಂತಾಗಿದೆ. ಕಾಳಸಂತೆಯಲ್ಲಿ ಸಿಡಿಗಳು ಲಭ್ಯವಾಗುತ್ತಿದ್ದು, ಮುಸ್ಲಿಂ ವ್ಯಾಪಾರಿಗಳೇ ಇವನ್ನು ಬಿಕರಿ ಮಾಡುತ್ತಿದ್ದಾರೆ ಎನ್ನಲಾಗಿದೆ. ಮುಸ್ಲಿಂ ಹುಡುಗ ಹುಡುಗಿನ ರಾಸಲೀಲೆಯ ಇನ್ನ್ನೂ ಎರಡು ಸಿಡಿಗಳು ಮಾರುಕಟ್ಟೆಗೆ ಬಂದಿವೆ ಎಂಬ ಸುದ್ದಿಯೂ ಇದೆ.

ಮಂಗಳೂರು ಬೈಕಂಪಾಡಿ ಹತ್ತಿರದ ಜೋಕಟ್ಟೆಯಲ್ಲಿ ಅಶ್ಲೀಲ ಸಿಡಿ ಸುದ್ದಿಯಾಗಿರುವುದು ಹಲವರನ್ನು ಕಳವಳಕ್ಕೆ ಈಡು ಮಾಡಿದೆ. ಕೋಮುಗಲಭೆ ಸಂದರ್ಭಗಳಲ್ಲಿ ಈ ಏರಿಯಾಗಳು ಬಹು ಬೇಗ ಅಲರ್ಟ್ ಆಗುತ್ತವೆ. ಪಣಂಬೂರು ಡಿವೈಎಸ್ಪಿ ಗಿರೀಶ್ ಮತ್ತು ದಕ್ಷ ಇನ್ಸ್ ಪೆಕ್ಟರ್ ವೆಲೆಂಟೈನ್ ಡಿಸೋಜ ಅಶ್ಲೀಲ ಸಿಡಿಯನ್ನು ಚಿತ್ರೀಕರಿಸಿರುವವರ ಬೆನ್ನತ್ತಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada