ಐವತ್ತು ಲಕ್ಷ ವಜ್ರಾಭರಣಗಳೊಂದಿಗೆ ಸಿಕ್ಕಿಬಿದ್ದ ಮಿನಿಷಾ
ಹೆಂಗಸರ ಬುದ್ಧಿ ಮೊಣಕಾಲು ಕೆಳಗೆ ಅಂತಾರಲ್ಲ ಹಾಗೆಯೇ ಈ ಸಿನಿಮಾ ತಾರೆಗಳೂ ಅಷ್ಟೆ. ಕೋಟಿ ಕೋಟಿ ಸಂಭಾವನೆ ಎಣೆಸುವ ಇವರು ಅದ್ಯಾಕೋ ಏನೋ ಸುಂಕ ಕಟ್ಟಬೇಕು ಎಂದರೆ ಸಂಕಟಪಡ್ತಾರೆ. ಒಟ್ನಲ್ಲಿ ಕದ್ದು ಮೆದ್ದರೆನೇ ಇವರಿಗೆ ಖುಷಿ. ಬಾಲಿವುಡ್ ತಾರೆ ಮಿನಿಷಾ ಲಾಂಬಾ ಸುಂಕದವರನ್ನು ಯಾಮಾರಿಸಲು ಹೋಗಿ ಸಿಕ್ಕಿಬಿದ್ದಿದ್ದಾರೆ.
ಮುಂಬೈ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಿನಿಷಾ, ಕಸ್ಟಮ್ ಅಧಿಕಾರಿಗಳಿಗೆ ರು.50 ಲಕ್ಷ ವಜ್ರಾಭರಣಗಳ ಸಮೇತ ಸಿಕ್ಕಿಬಿದ್ದಿದ್ದಾರೆ. ಈಕೆ ಫ್ರಾನ್ಸ್‌ನ ಕ್ಯಾನೆ ಚಿತ್ರೋತ್ಸವದಿಂದ ದುಬೈ ಮಾರ್ಗವಾಗಿ ಮುಂಬೈಗೆ ಹಿಂತಿರುಗುತ್ತಿದ್ದರು. ಎಮಿರೇಟ್ಸ್ ಫ್ಲೈಟ್‌ನಲ್ಲಿ ಬಂದಿಳಿದ ಈಕೆಯ ಸರಕು ಸರಂಜಾಮುಗಳನ್ನು ಪರಿಶೀಲಿಸಿದಕಸ್ಟಮ್ ಅಧಿಕಾರಿಗಳ ಕೈಗೆ ಮಿನಿಷಾ ಮಾಲು ಸಮೇತ ಸಿಕ್ಕಿಬಿದ್ದರು.
ಈಕೆ ವಜ್ರಾಭರಣಗಳನ್ನೇನು ಕದ್ದು ತಂದಿರಲಿಲ್ಲ. ಆದರೆ ಪರವಾನೆಗಿಂತಲೂ ಅಧಿಕ ಮೌಲ್ಯದ ವಜ್ರಾಭರಣಗಳನ್ನು ತಂದದ್ದೇ ಈಕೆ ಮಾಡಿದ ತಪ್ಪು. ಈಕೆಯನ್ನು ಪ್ರಶ್ನಿಸಿದ ಕಸ್ಟಮ್ ಅಧಿಕಾರಿಗಳು ಬಳಿಕ ಮಿನಿಷಾರನ್ನು ವಶಕ್ಕೆ ತೆಗೆದುಕೊಂಡರು. ಆಕೆಯ ಹೇಳಿಕೆಯನ್ನು ಪಡೆದು ಕೇಸ್ ಕೂಡ ದಾಖಲಿಸಿದ್ದಾರೆ.ಮುಂಬೈ ಏರ್‌ಪೋರ್ಟ್‌ನಲ್ಲಿ ಆಕೆ ಗ್ರೀನ್ ಚಾನಲ್ ಬಳಿ ಹಾದುಹೋಗಬೇಕಾದರೆ ಕಸ್ಟಮ್ ಅಧಿಕಾರಿಗಳು ಆಕೆಯನ್ನು ತಡೆದರು.
ಬಳಿಕೆ ಆಕೆಯ ಬ್ಯಾಗ್ ಚೆಕ್ ಮಾಡಲಾಗಿ ರು.50 ಲಕ್ಷ ಮೌಲ್ಯದ ವಜ್ರಾಭರಣಗಳು ಪತ್ತೆಯಾದವು.ಒಂದು ವೇಳೆ ರು.5 ಲಕ್ಷ ಮೌಲ್ಯದ ವಜ್ರಾಭರಣಗಳಿದಿದ್ದರೆ ಜಾಮೀನಿನ ಮೇಲೆ ಬಿಡುಗಡೆ ಮಾಡಬಹುದಿತ್ತು. ಆದರೆ ರು.50 ಲಕ್ಷದ ವಜ್ರಾಭರಣಗಳಿರುವ ಕಾರಣ ಜಾಮೀನು ನೀಡಲು ಸಾಧ್ಯವಾಗುವುದಿಲ್ಲ. ಇಂದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವುದಾಗಿ ಕಸ್ಟಮ್ಸ್ ಡೆಪ್ಯುಟಿ ಕಮೀಷನರ್ ಸಮೀರ್ ವಾಂಖೆಡೆ ತಿಳಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











