»   » ಪ್ರೇಮ್ ಕಹಾನಿಯಲ್ಲಿ ಮಹಾಲಕ್ಷ್ಮಿಲೇಔಟ್ ಶಾಸಕ

ಪ್ರೇಮ್ ಕಹಾನಿಯಲ್ಲಿ ಮಹಾಲಕ್ಷ್ಮಿಲೇಔಟ್ ಶಾಸಕ

Subscribe to Filmibeat Kannada
Ne La Narendra Babu
ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಹಾಲಿ ಕಾಂಗ್ರೆಸ್ ಶಾಸಕ ನೆ ಲ ನರೇಂದ್ರ ಬಾಬು ಮತ್ತೆ ಬಣ್ಣ ಬಳಿದುಕೊಂಡಿದ್ದಾರೆ. ಅವರು ಕೊನೆಯದಾಗಿ ಬಣ್ಣಬಳಿದುಕೊಂಡಿದ್ದು 'ತಬ್ಬಲಿ' ಚಿತ್ರದಲ್ಲಿ. ತಾಜ್ ಮಹಲ್ ಚಂದ್ರು ನಿರ್ದೇಶಿಸುತ್ತಿರುವ 'ಪ್ರೇಮ್ ಕಹಾನಿ' ಚಿತ್ರದಲ್ಲಿ ನರೇಂದ್ರ ಬಾಬು ನಟಿಸುತ್ತಿದ್ದಾರೆ.

ನರೇಂದ್ರ ಬಾಬು ಅವರ ಹಿರಿಯ ಸಹೋದರ ನೆ ಲ ಗಿರಿಧರ್ ನಿರ್ಮಾಣದ 'ಶಿವಾನಿ'ಚಿತ್ರದಲ್ಲಿ ನಟಿಸಲು ಈ ಮುಂಚೆ ನಿರಾಕರಿಸಿದ್ದರು. ಶ್ರೀಲಕ್ಷ್ಮಿ ಬಾಲಾಜಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಕೆ ಎಂ ವಿಶ್ವನಾಥ್ ಮತ್ತ್ತು ಜಿ ರವಿಕುಮಾರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಪ್ರೇಮ್ ಕಹಾನಿ ಚಿತ್ರದ ಮುಖ್ಯ ಪಾತ್ರಧಾರಿಗಳಾಗಿ ಅಜಯ್ ಮತ್ತು ಶೀಲಾ ನಟಿಸಿದ್ದಾರೆ. ಈ ಚಿತ್ರದ ಸಾಹಸ ದೃಶ್ಯಗಳನ್ನು ಸದಾಶಿವ ನಗರದಲ್ಲಿ ರವಿವರ್ಮ ನಿರ್ದೇಶನದಲ್ಲಿ ಚಿತ್ರೀಕರಿಸಿಕೊಳ್ಳಲಾಯಿತು.

ನೆ ಲ ನರೇಂದ್ರ ಬಾಬು, ರಾಜೇಶ್, ಶುಭ ಬೆಳವಾಡಿ, ಲೋಕನಾಥ್, ಮೈಕೊ ನಾಗರಾಜ್, ಟೆನ್ನಿಸ್ ಕೃಷ್ಣ ಚಿತ್ರದ ವಿವಿಧ ಮುಖಗಳು. ಚಿತ್ರದ ತಾಂತ್ರಿಕ ವರ್ಗ ಹೀಗಿದೆ, ಕೆ ಎಂ ಪ್ರಕಾಶ್ ಸಂಕಲನ, ಕಲಾ ನಿರ್ದೇಶನ ಹೊಸಮನೆ ಮೂರ್ತಿ, ನೃತ್ಯ ಸಂಯೋಜನೆ ಮದನ್ ಹರಿಣಿ, ರಘು, ಇಮ್ರಾನ್ ಮತ್ತು ಹರ್ಷಾ ಅವರದ್ದು. ಚಿತ್ರ ಸಾಹಿತಿಗಳಾದ ಕಲ್ಯಾಣ್, ನಾಗೇಂದ್ರ ಪ್ರಸಾದ್, ಕವಿರಾಜ್ ಸಾಹಿತ್ಯ ಪ್ರೇಮ್ ಕಹಾನಿ ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada