»   » ಮುಂಗಾರು ಮಳೆ ಕೃಷ್ಣಪ್ಪನವರ 3ನೇ ಚಿತ್ರ ಆರಂಭ

ಮುಂಗಾರು ಮಳೆ ಕೃಷ್ಣಪ್ಪನವರ 3ನೇ ಚಿತ್ರ ಆರಂಭ

Subscribe to Filmibeat Kannada

ಕನ್ನಡ ಚಿತ್ರರಂಗದಲ್ಲಿ 'ಮುಂಗಾರು ಮಳೆ' ಸುರಿಸಿ ಮೊಗ್ಗನ್ನು ಅರಳಿಸಿದ ಈ.ಕೃಷ್ಣಪ್ಪ ಅವರು ತಮ್ಮ ಮೂರನೇ ಚಿತ್ರದ ಮುಹೂರ್ತವನ್ನು ಕಚೇರಿಯ ಆವರಣದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡುವುದರ ಮೂಲಕ ಆಗಸ್ಟ್ 15ರ ಶುಕ್ರವಾರ ವರಮಹಾಲಕ್ಷ್ಮೀ ಹಬ್ಬದ ಶುಭದಿನ ಹಾಗೂ ಸ್ವಾತಂತ್ರ್ಯೋತ್ಸವದ ಸಿಹಿದಿನ ನೆರವೇರಿಸಿದರು. ಈ ಚಿತ್ರಕ್ಕೆ ಹಿರಿಯ ಪತ್ರಕರ್ತ ಸದಾಶಿವಶೆಣೈ ನಿರ್ದೇಶನದ ಸಾರಥ್ಯ ವಹಿಸಿದ್ದಾರೆ.

ಸ್ವಾತಂತ್ರಕ್ಕೆ ಸಂಬಂಧಿಸಿದ ಕೆಲ ಸಂಗತಿಗಳು ಬರುವ ಈ ಚಿತ್ರದ ಮುಹೂರ್ತ ಆಗಸ್ಟ್ 15ರಂದು ನೆರವೇರಿದು ನನಗೆ ಸಂತಸ ತಂದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಸದ್ಯದಲೇ ತಾರಾಗಣ ಹಾಗೂ ತಾಂತ್ರಿಕವರ್ಗದ ಆಯ್ಕೆ ನಡೆಸುವುದಾಗಿ ತಿಳಿಸಿರುವ ನಿರ್ಮಾಪಕರು ಶೀಘ್ರದಲ್ಲೇ ಈ ವಿಚಾರಗಳನ್ನು ಮಾಧ್ಯಮಕ್ಕೆ ತಿಳಿಸಲಾಗುವುದು ಎಂದರು.

ಈ ಸರಳ ಮುಹೂರ್ತ ಸಮಾರಂಭದಲ್ಲಿ ಚಿತ್ರದ ಸ್ಕ್ರಿಪ್ಟನ್ನು ನಿರ್ಮಾಪಕರು ನಿರ್ದೇಶಕರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ನಿರ್ಮಾಪಕರ ಆತ್ಮೀಯರಾದ ಗಂಗಾಧರ್, 'ಮೊಗ್ಗಿನಮನಸು' ಚಿತ್ರದ ನಿರ್ದೇಶಕ ಶಶಾಂಕ್ ಹಾಗೂ ಕಚೇರಿಯ ಸಿಬ್ಬಂದಿ ಉಪಸ್ಥಿತರಿದ್ದರು.

(ದಟ್ಸ್‌ಕನ್ನಡ ಸಿನಿವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada