ಈ ವಾರ ನಾಗತಿ ಹೊಸ ಪ್ರಯೋಗ ನೂರು ಜನ್ಮಕು
ನಾಗತಿಹಳ್ಳಿ ಚಂದ್ರಶೇಖರ್ ಅವರ ಹೊಸ ಪ್ರಯೋಗ 'ನೂರು ಜನ್ಮಕು' ಈ ವಾರ(ಮೇ.21) ರಾಜ್ಯದಾದ್ಯಂತ ಬಿಡುಗಡೆಯಾಗುತ್ತಿದೆ. ಈ ಚಿತ್ರ ಕಣ್ಣಿಗೂ, ಮನಸ್ಸಿಗೂ ಔತಣ ನೀಡಲಿದೆ ಎನ್ನುತ್ತಿದೆ ಚಿತ್ರತಂಡ. ಮೊದಲ ವಾರ ಕಡಿಮೆ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಹಂಚಿಕೆದಾರರಾದ ರಾಜೇಶ್ವರಿ ಪ್ರೊಡಕ್ಷನ್ ಪ್ರೈ.ಲಿ ನಿರ್ಧರಿಸಿದೆ.
'ನೂರು ಜನ್ಮಕು' ಧ್ವನಿಸುರುಳಿಗೆ ಈಗಾಗಲೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರ ಸೇರಿದಂತೆ ಒಟ್ಟು 15 ಚಿತ್ರಮಂದಿರಗಳಲ್ಲಿ 'ನೂರು ಜನ್ಮಕು' ತೆರೆಕಾಣುತ್ತ್ತಿದೆ. 'ಉಂಡು ಹೋದ ಕೊಂಡು ಹೋದ' ಚಿತ್ರದಿಂದ ಹಿಡಿದು ಇಲ್ಲಿಯ ತನಕ ನನ್ನ ಚಿತ್ರಗಳ ಬಗ್ಗೆ ಪ್ರೇಕ್ಷಕರಿಗೆ ಒಲವಿದೆ ಎಂದಿದ್ದಾರೆ ನಾಗತಿಹಳ್ಳಿ.
ರು.2 ಕೋಟಿ ಬಜೆಟ್ ನಲ್ಲಿ ಚಿತ್ರವನ್ನು ಸೊಗಸಾಗಿ ನಿರ್ಮಿಸಿದ್ದಾರೆ ವಿನಯ್ ಲಾಡ್. ಆಡಿಯೋ ಹಾಗೂ ಟಿವಿ ಹಕ್ಕುಗಳಿಂದ ಈಗಾಗಲೆ ನಿರ್ಮಾಪಕರಿಗೆ ಶೇ.50ರಷ್ಟು ಬಂಡವಾಳ ಬಂದಾಗಿದೆ ಎಂದು ನಾಗತಿಹಳ್ಳಿ ಚಂದ್ರಶೇಖರ್ ತಿಳಿಸಿದ್ದಾರೆ.ಐಂದ್ರಿತಾ ರೇ ಹಾಗೂ ಸಂತೋಷ್ ಚಿತ್ರದ ಮುಖ್ಯಪಾತ್ರಧಾರಿಗಳು.
ಇಪ್ಪತ್ತು ದಿನಗಳ ಕಾಲ ಬ್ಯಾಂಕಾಕ್ ಮತ್ತು ಮಕಾವಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ. ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನವನ್ನು ಚಿತ್ರಕ್ಕೆ ಅಳವಡಿಸಲಾಗಿದೆ ಎಂದು ನಾಗತಿಹಳ್ಳಿ ಹೇಳಿದ್ದಾರೆ. ಚಿತ್ರಕ್ಕ ಸಂತೋಷ್ ರೈ ಪತಾಜೆ ಅವರ ಛಾಯಾಗ್ರಹಣವಿದೆ.ಚಿತ್ರದಲ್ಲಿ ವಾಸ್ತು ನಿಪುಣನಾಗಿ ಸಂತೋಷ್ ಕಾಣಿಸಲಿದ್ದಾರೆ.


Click it and Unblock the Notifications











