ವಿವೇಕ್ ಒಬೆರಾಯ್ ಮಧುಚಂದ್ರ ಸದ್ಯಕ್ಕಿಲ್ಲವಂತೆ!
ಬಾಲಿವುಡ್ ನಟ ವಿವೇಕ್ ಒಬೆರಾಯ್ ಅಕ್ಟೋಬರ್ 29ಕ್ಕೆ ಮದುವೆಯಾಗುತ್ತಿದ್ದಾರೆ. ಜೆಡಿ(ಯು) ಮುಖಂಡರಾಗಿದ್ದ ದಿ.ಜೀವರಾಜ್ ಆಳ್ವ ಅವರ ಪುತ್ರಿ ಪ್ರಿಯಾಂಕಾ ಆಳ್ವ ಅವರನ್ನು ವಿವೇಕ್ ವರಿಸಲಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಮದುವೆ ಆದ ಮೇಲೆ ಮಧುಚಂದ್ರನೂ ಇರಬೇಕಲ್ಲವೆ?
ಆದರೆ ವಿವೇಕ್ ಸದ್ಯಕ್ಕೆ ಮಧುಚಂದ್ರವಿಲ್ಲ ಎನ್ನುತ್ತಿದ್ದಾರೆ. ಒಬ್ಬ ಖ್ಯಾತ ನಟ ಹನಿಮೂನ್ ಮಾಡಿಕೊಳ್ಳಲ್ಲ ಅಂದ್ರೆ ಹೇಗೆ? ಇದೇ ಪ್ರಶ್ನೆಯನ್ನು ವಿವೇಕ್ ಒಬೇರಾಯ್‌ಗೆ ಕೇಳಲಾಗಿ, ಅವರಿಂದ ಬಂದ ಉತ್ತರ ದಂಗುಬಡಿಸುವಂತಿದೆ. ಹನಿಮೂನ್‌ಗಿಂತ ನನಗೆ ಸಿನಿಮಾನೇ ಮುಖ್ಯ ಎಂದಿದ್ದಾರೆ!
ಸದ್ಯಕ್ಕೆ ತಮ್ಮ ಹಲವಾರು ಚಿತ್ರಗಳು ತೆರೆಕಾಣಲಿವೆ. ಆ ಚಿತ್ರಗಳ ಪ್ರಚಾರ ಕಾರ್ಯದಲ್ಲಿ ಬಿಜಿಯಾಗಿದ್ದೇನೆ. ಹಾಗಾಗಿ ಸದ್ಯಕ್ಕೆ ಹನಿಮೂನ್ ಇಲ್ಲ. ನವೆಂಬರ್ ಕೊನೆ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಹನಿಮೂನ್ ಎಕ್ಸ್ ಪ್ರೆಸ್ ಹತ್ತಲಿದ್ದೇನೆ ಎನ್ನುತ್ತಾರೆ ವಿವೇಕ್.
ಇದೇ ಸಂದರ್ಭದಲ್ಲಿ ಅವರು ಮಾತನಾಡುತ್ತಾ, ನನ್ನನ್ನು ಜನ ಈಗ ಕರ್ನಾಟಕದ ಅಳಿಯ ಎಂದು ಗುರುತಿಸುತ್ತಿದ್ದಾರೆ. ಇದಕ್ಕಿಂತಲೂ ಖುಷಿ ನನಗೆ ಇನ್ನೇನು ಬೇಕು ಎಂದು ವಿವೇಕ್ ಹೇಳಿದ್ದಾರೆ. ವಿವೇಕ್ ತಮ್ಮ ಮದುವೆಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಆಹ್ವಾನಿಸಿದ್ದಾರೆ.


Click it and Unblock the Notifications











