ಧೋನಿಗೆ ಪ್ರಕಾಶ್ ರೈ ಲೈಟ್ಸ್ ಕ್ಯಾಮೆರಾ ಆಕ್ಷನ್ ಕಟ್

By Rajendra

ಈಗಾಗಲೆ ಚಿತ್ರ ನಿರ್ದೇಶನದ ಕನಸನ್ನು ಸಾಕಾರಗೊಳಿಸಿಕೊಂಡಿರುವ ನಟ ಪ್ರಕಾಶ್ ರೈ ಈಗ ಮತ್ತೊಂದು ಚಿತ್ರವನ್ನು ಕೈಗೆತ್ತಿಕೊಂಡಿದ್ದಾರೆ. ಈ ಬಾರಿ ಅವರು 'ಧೋನಿ'ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಆದರೆ ಭಾರತದ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಅಲ್ಲ. ಅವರು ನಿರ್ದೇಶಿಸಲಿರುವ ಚಿತ್ರದ ಹೆಸರೇ 'ಧೋನಿ'.

ದುರಂತ ಅಂದರೆ ಈ ಚಿತ್ರವನ್ನು ಅವರು ಕನ್ನಡದಲ್ಲಿ ನಿರ್ದೇಶಿಸುತ್ತಿಲ್ಲ ಎಂಬುದು. 'ಧೋನಿ' ಚಿತ್ರ ದ್ವಿಭಾಷಾ ಚಿತ್ರವಾಗಿದ್ದು ತೆಲುಗು ಹಾಗೂ ತಮಿಳಿನಲ್ಲಿ ಸೆಟ್ಟೇರಲಿದೆ. ಈ ಹಿಂದೆ ಕನ್ನಡದಲ್ಲಿ ಪ್ರಕಾಶ್ ರೈ ನಿರ್ದೇಶಿಸಿದ್ದ 'ನಾನು ನನ್ನ ಕನಸು' ಚಿತ್ರ ಯಶಸ್ವಿಯಾಗಿತ್ತು. ಅದು ಅವರ ಚೊಚ್ಚಲ ನಿರ್ದೇಶನದ ಚಿತ್ರ. ಈಗ ತಮಿಳು, ತಮಿಳಿನಲ್ಲೂ ಒಂದು ಕೈ ನೋಡೇ ಬಿಡೋಣ ಎಂಬ ಹುಮ್ಮಸ್ಸಿನಲ್ಲಿದ್ದಾರೆ ರೈ.

ಈ ಚಿತ್ರದ ಸಂಪೂರ್ಣ ವಿವರಗಳು ಇನ್ನಷ್ಟೆ ಹೊರಬೀಳಬೇಕಾಗಿದೆ. ಪ್ರಕಾಶ್ ರೈ ಕೇವಲ ನಿರ್ದೇಶನಕ್ಕಷ್ಟೇ ಸೀಮಿತವಾಗಿದ್ದು, ನಿರ್ಮಾಣದ ಜವಾಬ್ದಾರಿಯನ್ನು ಮತ್ತೊಬ್ಬರು ಹೊತ್ತಿದ್ದಾರೆ. ಪೋನಿ ವರ್ಮಾರನ್ನು ಮದುವೆಯಾದ ಬಳಿಕ ಪ್ರಕಾಶ್ ರೈ ಕೈಗೆತ್ತಿಕೊಳ್ಳುತ್ತಿರುವ ಮಹತ್ವಾಕಾಂಕ್ಷಿ ಯೋಜನೆ ಇದಾಗಿದೆ. (ಏಜೆನ್ಸೀಸ್)

More from Filmibeat

English summary
Actor Prakash Raj is going to direct a bilingual film titled "Dhoni" in both Telugu and Tamil languages. Earlier he was directed a film in Kannada titled 'Naanu Nanna Kanasu'. More details about the movie is awaiting.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X