ಹಿಮಾಲಯದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್

By Rajendra

ನಟ ರಜನಿಕಾಂತ್ ಹಿಮಾಲಯದ ಸನ್ನಿಧಿಗೆ ಭೇಟಿ ನೀಡಿದ ಚಿತ್ರಗಳು ಅಂತರ್ಜಾಲ ತಾಣಗಳಿಗೆ ಲಗ್ಗೆ ಹಾಕಿವೆ. ಬಿಳಿ ಕುರ್ತಾ ಮತ್ತು ಶಾಲು ಹೊದ್ದ ಅವರ ಚಿತ್ರಗಳಿಗೆ ರಜನಿ ಅಭಿಮಾನಿಗಳು ಮುಗಿಬೀಳುತ್ತಿದ್ದಾರೆ. ಪ್ರಶಾಂತ ಮುಖಭಾವದ ರಜನಿ ಚಿತ್ರಗಳು ಎಲ್ಲೆಲ್ಲೂ ರಾರಾಜಿಸುತ್ತಿವೆ.

ಸತತ ಎರಡು ವರ್ಷಗಳಿಗೂ ಅಧಿಕ ಕಾಲ 'ಎಂಧಿರನ್' ಚಿತ್ರದ ಚಿತ್ರೀಕರಣದಿಂದ ಅವರು ತೀರಾ ಬಳಲಿದ್ದರು. ಈ ಬಳಲಿಕೆಯಿಂದ ಹೊರಬರಲು ರಜನಿ ಹಿಂದುಗಳ ಪವಿತ್ರ ತಾಣ ಹಿಮಾಲಯಕ್ಕೆ ಭೇಟಿ ನೀಡಿದ್ದಾರೆ. ಅವರ ಸತತ ಶ್ರಮದ ಫಲವೋ ಏನೋ 'ಎಂಧಿರನ್' ಚಿತ್ರವೂ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದೆ.

ಎಂಧಿರನ್ | ರಜನಿಕಾಂತ್ | ಐಶ್ವರ್ಯ ರೈ | ಎಂಧಿರನ್ ಟ್ರೈಲರ್

ಹಿಮಾಲಯದ ಸಾಧು ಸಂತರನ್ನು ಭೇಟಿ ಮಾಡಿ ಕೊಂಚ ಕಾಲ ಅಧ್ಯಾತ್ಮದಲ್ಲಿ ಮುಳುಗಲಿದ್ದಾರೆ. ರಜನಿ ಜೊತೆಗೆ ಆತ್ಮೀಯರು ಸೇರಿದಂತೆ ಅವರ ಸಂಬಂಧಿಕರು ಇದ್ದಾರೆ. ಅವರ 'ಎಂಧಿರನ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಯಶಸ್ವಿಯಾಗಿರುವುದು ಅವರ ಹಿಮಾಲಯ ಪ್ರವಾಸಕ್ಕೆ ಮತ್ತಷ್ಟು ಕಳೆತಂದಿದೆ.

ಸಾಧಾರಣವಾಗಿ 60 ವರ್ಷ ಎಂದರೆ ಸಾಕಪ್ಪಾ ಸಾಕು ಎಂದು ಎಲ್ಲರೂ ನಿವೃತ್ತಿ ಬಯಸುತ್ತಾರೆ. ಆದರೆ ರಜನಿಕಾಂತ್ ಮಾತ್ರ ಇನ್ನೂ ನಿವೃತ್ತಿ ಘೋಷಿಸಿಲ್ಲ. ಎಂಧಿರನ್ ಚಿತ್ರಕ್ಕಿಂತಲೂ ವಿಭಿನ್ನವಾದ ಕಥೆ ಸಿಕ್ಕರೆ ಮತ್ತೆ ಬಣ್ಣ ಹಚ್ಚಿಕೊಳ್ಳಲು ಸಿದ್ಧ ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X