ಶೇಮ್ ಶೇಮ್ ಯಡಿಯೂರಪ್ಪ; ರಮ್ಯಾ ದಿವ್ಯ ಸ್ಪಂದನ
ಪ್ರಸ್ತುತ ರಾಜ್ಯ ರಾಜಕೀಯ ಸನ್ನಿವೇಶವನ್ನು ನೋಡುತ್ತಿದ್ದರೆ ಎಂಥವರಿಗೂ ವಾಕರಿಕೆ ಬರುತ್ತದೆ. ಇನ್ನು ಲಕ್ಕಿ ತಾರೆ ರಮ್ಯಾ ಅಕಾ ದಿವ್ಯ ಸ್ಪಂದನ ಸುಮ್ಮನಿರಲು ಸಾಧ್ಯವೆ? ಯಡಿಯೂರಪ್ಪ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಅವರು, ದಿನಕ್ಕೊಂದು ಹಗರಣಗಳಲ್ಲಿ ಸಿಕ್ಕಿಬೀಳುತ್ತಿರುವ ಭ್ರಷ್ಟ ಬಿಜೆಪಿ ಸರ್ಕಾರ ತೊಲಗಲೇಬೇಕು ಎಂದು ಆಗ್ರಹಿಸಿದ್ದಾರೆ.
ಕರ್ನಾಟಕದ ಬಿಜೆಪಿ ಸರ್ಕಾರ ಹೊಸ ಹೊಸ ಹಗರಣಗಳಿಂದ ಸುದ್ದಿಯಾಗುತ್ತಿದೆ. ಈ ಸರ್ಕಾರಕ್ಕೆ ಮತಹಾಕಿದ ನಮಗೆ ನಾಚಿಕೆಯಾಗಬೇಕು. ಯಡಿಯೂರಪ್ಪ ಶೇಮ್ ಶೇಮ್ ಎಂದು ಮೈಕ್ರೋ ಬ್ಲಾಗಿಂಗ್ ತಾಣ ಟ್ವಿಟ್ಟರ್‌ನಲ್ಲಿ ಹಿಗ್ಗಾ ಮುಗ್ಗಾ ಝಾಡಿಸಿದ್ದಾರೆ. ರಾಜ್ಯ ರಾಜಕೀಯ ನೋಡುತ್ತಿದ್ದರೆ ವಾಕರಿಕೆ ಬರುವಂತಿದೆ ಎಂದಿದ್ದಾರೆ.
ಕೇವಲ ರಾಜಕಾರಣಿಗಳನ್ನು ದೂರಿ ಪ್ರಯೋಜನವಿಲ್ಲ. ಭ್ರಷ್ಟ ರಾಜಕಾರಣಿಗಳ ಜೊತೆಗೆ ಅವರಿಗೆ ಲಂಚ ಕೊಡುವವರನ್ನು ಶಿಕ್ಷಿಸಬೇಕು ಎಂದು ರಮ್ಯಾ ಒತ್ತಾಯಿಸಿದ್ದಾರೆ. ಅವರ ಹೂವಿನಂತ ಮಾತುಗಳು ನಮ್ಮ ದಪ್ಪ ಚರ್ಮದ ರಾಜಕಾರಣಿಗಳಿಗೆ ಎಲ್ಲಿ ನಾಟುತ್ತದೆ ಹೇಳಿ.
ರಮ್ಯಾ ಯಡಿಯೂರಪ್ಪ ಟ್ವಿಟ್ಟರ್ ಬಿಜೆಪಿ ಸಂಜು ವೆಡ್ಸ್ ಗೀತಾ ramya divya spandana twitter bjp yeddyurappa sanju weds geetha


Click it and Unblock the Notifications