»   » ಸೆನ್ಸಾರ್‌ನಲ್ಲಿ ಪಾಸಾದ ರವಿಚಂದ್ರನ್ ಕ್ರೇಜಿಲೋಕ

ಸೆನ್ಸಾರ್‌ನಲ್ಲಿ ಪಾಸಾದ ರವಿಚಂದ್ರನ್ ಕ್ರೇಜಿಲೋಕ

Posted By:
Subscribe to Filmibeat Kannada

ಕ್ರೇಜಿಸ್ಟಾರ್ ರವಿಚಂದ್ರನ್ ಅವರು ನಾಯಕರಾಗಿ ನಟಿಸಿರುವ ಕ್ರೇಜಿಲೋಕ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಯು\ಎ ಅರ್ಹತಾಪತ್ರವನ್ನು ನೀಡಿದೆ. ಚಿತ್ರ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕಾನ್ಫಿಡೆಂಟ್ ಗ್ರೂಪ್ಸ್ ಅರ್ಪಿಸುವ, ಶಾಂತಾ ಪಿಕ್ಚರ್ಸ್ ಲಾಂಛನದಲ್ಲಿ ಎನ್.ರವಿಕುಮಾರ್ ನಿರ್ಮಿಸಿರುವ ಈ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.

ಕವಿತಾಲಂಕೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರದ ನಾಯಕಿಯಾಗಿ ಡೈಸಿ ಬೋಪಣ್ಣ ಅಭಿನಯಿಸಿದ್ದಾರೆ. ಭಾರತಿ ವಿಷ್ಣುವರ್ಧನ, ಹರ್ಷಿಕಾ ಪೂಣಚ್ಛ, ಅವಿನಾಶ್, ನೀನಾಸಂ ಅಶ್ವತ್ ಮುಂತಾದವರು ಕ್ರೇಜಿಲೋಕದ ತಾರಾಬಳಗದಲ್ಲಿದ್ದಾರೆ.

ಇತ್ತೀಚೆಗಷ್ಟೆ ಮದುವೆಯಾದ ಡೈಸಿ ಬೋಪಣ್ಣ ಚಿತ್ರದ ನಾಯಕಿ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಚಿತ್ರ. ಉಳಿದಂತೆ ರವಿಚಂದ್ರನ್ ಚಿತ್ರದಲ್ಲಿರುವಂತೆ ಎಲ್ಲಾ ಮಸಾಲೆಗಳು ಇರುತ್ತವೆ. ಜುಲೈ 29ರಂದು ಚಿತ್ರ ಸೆಟ್ಟೇರಿದೆ. ಕಾನ್ಫಿಡೆಂಟ್ ಗ್ರೂಪ್ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ. ಎ.ಸಿ.ಮಹೇಂದರ್ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ಜೋ.ನಿ.ಹರ್ಷರ ಸಂಕಲನವಿದೆ. ಇಮ್ರಾನ್ ನೃತ್ಯ ನಿರ್ದೇಶನ, ಕುಮಾರ್ ಕಲಾ ನಿರ್ದೇಶನ ಹಾಗೂ ರವಿಶಂಕರ್ ನಿರ್ಮಾಣ ನಿರ್ವಹಣೆ ಕ್ರೇಜಿಲೋಕ ಚಿತ್ರಕ್ಕಿದೆ. (ಒನ್‌ಇಂಡಿಯಾ ಕನ್ನಡ)

English summary
Kannada movie Crazy Loka, a love, sentiment and action has got a U/A certificate from the regional censor board. Kavitha Lankesh directed movie V Ravichandran, Daisy Boppana, Harshika Poonachcha, Dr Bharathi Vishnuvardhana are in the cast.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X