For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಎಂಟ್ರಿ ಕೊಟ್ಟ ಮಲಯಾಳಂ ರಮ್ಯಾ ನಂಬೀಸನ್

  By Rajendra
  |

  ಮಲಯಾಳಂ ಚಿತ್ರರಂಗದಿಂದ ಈಗಾಗಲೆ ಸಾಕಷ್ಟು ಸಿನಿಮಾ ತಾರೆಗಳು ಕನ್ನಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಮೀರಾ ಜಾಸ್ಮಿನ್, ಭಾವನಾ, ನವ್ಯಾ ನಾಯರ್, ಊರ್ವಶಿ, ಶಕೀಲಾ...ಹೀಗೆ ಸಾಕಷ್ಟು ಮಲ್ಲು ಬೆಡಗಿಯರು ಕನ್ನಡ ಚಿತ್ರರಂಗದಲ್ಲಿ ಮಿಂಚಿದ್ದಾರೆ. ಈಗ ಈ ಸಾಲಿಗೆ ಹೊಸ ಸೇರ್ಪಡೆ ರಮ್ಯಾ ನಂಬೀಸನ್.

  ಮಲಯಾಳಂ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ರಮ್ಯಾ ನಂಬೀಸನ್ ಈಗಾಗಲೆ ತಮ್ಮ ಅಭಿನಯ ಚಾತುರ್ಯವನ್ನು ನಿರೂಪಿಸಿಕೊಂಡಿದ್ದಾರೆ. ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಎಸ್ ವಿ ಬಾಬು ಅವರು ರಮ್ಯಾ ನಂಬೀಸನ್‌ರನ್ನು ಕನ್ನಡಕ್ಕೆ ಕರೆತರುತ್ತಿದ್ದಾರೆ. ಅಜಯ್ ರಾವ್ ಜತೆ ರಮ್ಯಾ ಅಭಿನಯಿಸಲಿದ್ದಾರೆ.

  ಬಾಕ್ಸಾಫೀಸ‍ಲ್ಲಿ ಅಷ್ಟಾಗಿ ಸದ್ದು ಮಾಡದ 'ಸಂಗಮ' ಚಿತ್ರವನ್ನು ನಿರ್ದೇಶಿಸಿದ ರವಿ ವರ್ಮಾ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದೆ. ಎಸ್ ವಿ ಪಿಕ್ಚರ್ಸ್ ಲಾಂಛನದಲ್ಲಿ ಚಿತ್ರವನ್ನು ನಿರ್ದೇಶಿಸಲಾಗುತ್ತಿದೆ. ಹನಿಮೂನ್ ಎಕ್ಸ್‌ಪ್ರೆಸ್, ತೆನಾಲಿ ರಾಮ, ಸವಿ ಸವಿ ನೆನಪು, ಸಂಗಮ, ಜೋಶ್, ಅಂದಮೈನ ಮನಸುಲು (ತೆಲುಗು) ಚಿತ್ರಗಳನ್ನು ಎಸ್ ವಿ ಬಾಬು ನಿರ್ಮಿಸಿದ್ದಾರೆ.

  ;

  English summary
  Malayalam, Tamil and Telugu films actress and television anchor Remya Nambeesan debut in a Kannada with Ajay Rao. Ajay Rao and Remya Nambeesan film in the banner of SV Pictures director Ravi Verma is coming back after an average hit ‘Sangama’ Kannada film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X