For Quick Alerts
  ALLOW NOTIFICATIONS  
  For Daily Alerts

  'ಮಗಧೀರ'ಐವತ್ತರ ಸಂಭ್ರಮದಲ್ಲಿ ಶಿವಣ್ಣ!

  By Staff
  |

  'ಅಪ್ಪಾಜಿ ಹಾಗೂ ಚಿರಂಜೀವಿ ಕುಟುಂಬಕರು ಸಂಬಂಧಿಗಳಲ್ಲದಿದ್ದರೂ ನಮ್ಮಲ್ಲಿ ನಮ್ಮಲ್ಲಿ ಉತ್ತಮ ಬಾಂಧವ್ಯವಿದೆ. ನಮ್ಮದೆಲ್ಲಾ ಒಂದೇ ಕುಟುಂಬ'' ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹೇಳಿದರು. 'ಮಗಧೀರ' ಚಿತ್ರ ಕರ್ನಾಟಕದಲ್ಲಿ ಯಶಸ್ವಿ ಐವತ್ತು ದಿನ ಪೂರೈಸಿದ ಕಾರಣ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಮಾತನಾಡುತ್ತಿದ್ದರು.

  ಕರ್ನಾಟಕದ 13 ಚಿತ್ರಮಂದಿರಗಳಲ್ಲಿ ಮಗಧೀರ ಅರ್ಧ ಶತಕ ಪೂರೈಸಿರುವುದು ಖುಷಿ ಕೊಟ್ಟಿದೆ. ಕನ್ನಡ ಅಭಿಮಾನಿಗಳ ಮೇಲೆ ಚಿರಂಜೀವಿ ಅವರಿಗೆ ಅಪಾರ ಅಭಿಮಾನವಿತ್ತು. ಹಾಗಾಗಿ ಅವರು ಕನ್ನಡ ಚಿತ್ರದಲ್ಲಿ ಅಭಿನಯಿಸಿದರು. ಅವರ ಕುಟುಂಬದ ಯಾವುದೇ ಕಾರ್ಯಕ್ರಮವಿರಲಿ ನಮ್ಮನ್ನು ಆಹ್ವಾನಿಸುತ್ತಾರೆ ಎಂದು ಶಿವರಾಜ್ ಕುಮಾರ್ ಹೇಳಿದರು.ಚಿರಂಜೀವಿ ಅಭಿಮಾನಿಗಳ ಆಶೀರ್ವಾದದಿಂದ ರಾಮ್ ಚರಣ್ ತೇಜ ಮತ್ತಷ್ಟು ಎತ್ತರಕ್ಕೆ ಏರಲಿ ಎಂದು ಶಿವರಾಜ್ ಕುಮಾರ್ ಹಾರೈಸಿದರು.

  ಇದೇ ಸಂದರ್ಭದಲ್ಲಿ ಚಿತ್ರದ ನಿರ್ಮಾಪಕ ಅಲ್ಲು ಅರವಿಂದ್ ಮಾತನಾಡುತ್ತಾ, ರಾಜ್ ಕುಮಾರ್ ಅವರೊಂದಿಗೆ ಚಿತ್ರ ನಿರ್ಮಿಸಲು ಸಾಧ್ಯವಾಗಲಿಲ್ಲ. ಅವರ ಕುಟುಂಬದವರು ಕಾಲ್ ಶೀಟ್ ಕೊಟ್ಟರೆ 'ಮಗಧೀರ' ಚಿತ್ರದಂತಹ ಸೂಪರ್ ಡೂಪರ್ ಚಿತ್ರ ತೆಗೆಯುವುದಾಗಿ ತಿಳಿಸಿದರು. ಕೂಡಲೇ ಪ್ರತಿಕ್ರಿಯಿಸಿದ ಶಿವರಾಜ್ ಕುಮಾರ್, ನಿಮ್ಮಂತಹ ನಿರ್ಮಾಪಕರ ಚಿತ್ರದಲ್ಲಿ ಅಭಿನಯಿಸುವುದು ನಮ್ಮ ಅದೃಷ್ಟ ಎಂದರು.

  ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ಮಾತನಾಡುತ್ತಾ, ಕನ್ನಡಿಗರಿಗೆ ವರನಟ ರಾಜ್ ಕುಮಾರ್ ಅಣ್ಣನಾದರೆ...ಆಂಧ್ರಪ್ರದೇಶದ ಅಭಿಮಾನಿಗಳಿಗೆ ಚಿರಂಜೀವಿ ಅಣ್ಣನಿದ್ದಂತೆ. ಇವರಿಬ್ಬರೂ ಅಭಿಮಾನಿಗಳ ಎರಡು ಕಣ್ಣುಗಳಿದ್ದಂತೆ. ಚಿರಂಜೀವಿಯ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ನೋಡಿದ್ದೇನೆ ಎಂದರು.

  ಮಾಜಿ ಸಚಿವ ಡಿ.ಎಚ್.ಶಂಕರಮೂರ್ತಿ ಮಾತನಾಡುತ್ತಾ, 500 ವರ್ಷಗಳ ಹಿಂದೆ ಕೃಷ್ಣದೇವರಾಯ ಆಳ್ವಿಕೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ ಎರಡೂ ಒಂದೇ ಆಗಿದ್ದವು. ಈಗಲೂ ಎರಡೂ ರಾಜ್ಯಗಳು ಆ ಸಂಬಂಧವನ್ನು ಮುಂದುವರಿಸುತ್ತಿರುವುದು ಸಂತೋಷ ಉಂಟು ಮಾಡುತ್ತಿದೆ ಎಂದರು.

  ಮಗಧೀರ ಚಿತ್ರದ ವಿತರಕ ವಿಜಯ್ ಕುಮಾರ್ ಮಾತನಾಡುತ್ತಾ, ಅಲ್ಲು ಅರವಿಂದ್ ಅವರ ಮುಂಬರುವ ಚಿತ್ರಗಳ ವಿತರಣೆ ಹಕ್ಕುಗಳನ್ನು ತಾವು ಕರ್ನಾಟಕದಲ್ಲಿ ಪಡೆಯುವುದಾಗಿ ತಿಳಿಸಿದರು. ಇದುವರೆಗೂ ಅವರ ಬಹುತೇಕ ಚಿತ್ರಗಳನ್ನು ತಾವು ಕರ್ನಾಟಕದಾದ್ಯಂತ ವಿತರಿಸಿದ್ದೇವೆ. ಮುಂದೆಯೂ ವಿತರಿಸುವುದಾಗಿ ತಿಳಿಸಿದರು.

  (ದಟ್ಸ್ ಕನ್ನಡ ಚಿತ್ರವಾರ್ತೆ)

  Friday, September 25, 2009, 10:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X