ನಿರ್ದೇಶನಕ್ಕೆ ಜಿಗಿದ ಗಾಯಕ ಎಸ್ಪಿ ಬಾಲಸುಬ್ರಮಣ್ಯಂ

ಎಸ್ ಪಿ ಬಾಲು ಕೇವಲ ಗಾಯಕ ಮಾತ್ರ ಅಲ್ಲ, ಅವರೊಂದು ಬಹುಮುಖ ಪ್ರತಿಭೆಯ ಮಹಾನ್ ವ್ಯಕ್ತಿ. ಗಾಯನ, ನಟನೆ, ಡಬ್ಬಿಂಗ್ ಸೇರಿ ಲೆಕ್ಕವಿಲ್ಲದಷ್ಟು ಪ್ರಶಸ್ತಿ, ಗೌರವಕ್ಕೆ ಅವರು ಒಡೆಯರು. ಸದ್ಯ ತೆಲುಗಿನಲ್ಲಿ 'ಗೋಪುರಂ' ಮತ್ತು 'ದೇವಸ್ಥಾನಂ' ಚಿತ್ರಗಳಲ್ಲಿ ತೆಲುಗು ಪ್ರೇಕ್ಷಕರಿಗೆ ಅಚ್ಚುಮೆಚ್ಚಾಗುವಂಥ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಈ ಮಹಾನ್ ಗಾಯಕ ಯಾವುದೇ ಕ್ಷೇತ್ರದಲ್ಲಾದರೂ ತಮ್ಮ ಪ್ರತಿಭೆಯನ್ನು ಪಣಕ್ಕಿಟ್ಟು ಯಶಸ್ಸು ಸಾಧಿಸುವ ಅಸಾಧಾರಣ ವ್ಯಕ್ತಿತ್ವ ಉಳ್ಳವರು. ಇದಕ್ಕೂ ಮೊದಲು ಸಂಗೀತ ನಿರ್ದೇಶನವನ್ನೂ ಮಾಡಿ ಸೈ ಅನ್ನಿಸಿಕೊಂಡವರು. ಅವರು ನಿರ್ದೇಶನ ಮಾಡುತ್ತಾರೆಂದರೆ ನಿರೀಕ್ಷೆ ಸಹಜ. ಬ್ಯಾನರ್, ನಾಯಕ, ನಾಯಕಿ, ಟೈಟಲ್ ಮುಂತಾದ ಚಿತ್ರಕ್ಕೆ ಸಂಬಂಧಪಟ್ಟ 'ಡೀಟೇಲ್ಸ್' ಇನ್ನಷ್ಟೇ ದೊರೆಯಬೇಕಾಗಿದೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Singer SP Balasubramaniam has decided to direct films. He revealed his intention to direct a film.


Click it and Unblock the Notifications











