ಚಾಲೆಂಜಿಂಗ್ ಸ್ಟಾರ್ ಜೊತೆ ನಲ್ಲ ಸುದೀಪ್ ಚಿತ್ರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ನಲ್ಲ ಸುದೀಪ್ ಒಟ್ಟಿಗೆ ಅಭಿನಯಿಸಿದರೆ ಹೇಗಿರುತ್ತದೆ. ಹಾಲು ಜೇನು ಒಟ್ಟಿಗೆ ಸವಿದಂತಿರುತ್ತದೆ ಎಂಬುದು ಅವರ ಅಭಿಮಾನಿಗಳ ಮನದಾಳದ ಮಾತು. ಈ ಮಾತುನಿಜವಾಗಬೇಕಾದರೆ ಸ್ವಲ್ಪ ಸಮಯ ಕಾಯಬೇಕು.
ಹೌದು ದರ್ಶನ್ ಹಾಗೂ ಸುದೀಪ್ ಒಟ್ಟಿಗೆ ಒಂದೇ ಸಿನಿಮಾದಲ್ಲಿ ಅಭಿನಯಿಸಲು ಮುಂದಾಗಿದ್ದಾರೆ. ಆದರೆ ಇದಕ್ಕೆ ಕೊಂಚ ಸಯಮ ಹಿಡಿಸುತ್ತದೆ. "ನಾವಿಬ್ಬರು ಒಟ್ಟಿಗೆ ಅಭಿನಯಿಸಲು ತಯಾರಿ ನಡೆಸಿದ್ದೇವೆ. ಯಾವುದಕ್ಕೂ ಕಾಲ ಕೂಡಿಬರಬೇಕು" ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.
ದರ್ಶನ್ ಹಾಗೂ ಸುದೀಪ್ ಇಬ್ಬರೂ ಆಪ್ತಮಿತ್ರರು. ಇವರಿಬ್ಬರು ಒಟ್ಟಿಗೆ ಅಭಿನಯಿಸಬೇಕು ಎಂಬುದು ಅವರ ಅಭಿಮಾನಿಗಳ ಒತ್ತಾಸೆ. ಇಬ್ಬರಿಗೂ ಕತೆ ಹೊಂದಾಣಿಕೆಯಾಗಬೇಕು. ನಮ್ಮಿಬ್ಬರ ಚಿತ್ರ ಎಂದರೆ ಚಿತ್ರೋದ್ಯಮದಲ್ಲಿ ಭಾರಿ ಕುತೂಹಲವಿರುತ್ತದೆ. ಅದಕ್ಕೆ ತಕ್ಕಂತೆ ಚಿತ್ರ ಇರಬೇಕು. ಇಲ್ಲ ಅಂದರೆ ಬೇಡ ಎನ್ನುತ್ತಾರೆ ದರ್ಶನ್. (ದಟ್ಸ್‌ಕನ್ನಡ ಸಿನಿವಾರ್ತೆ)
More from Filmibeat
English summary
Kannada actor Sudeep and Darshan act together in a film within a short time. Sudeep has tweeted that he and Darshan are prepared to work together for a good script. "I think time has to come for such a launch".


Click it and Unblock the Notifications











