ಕನ್ನಡದಲ್ಲಿ ಮತ್ತೊಮ್ಮೆ ಕಿಚ್ಚೆಬ್ಬಿಸಲಿರುವ ಸುದೀಪ್

ಸದ್ಯಕ್ಕೆ ಸುದೀಪ್ ತೆಲುಗಿನ 'ಈಗ' ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಮತ್ತೊಂದು ಕಡೆ ಕನ್ನಡದ 'ವರದನಾಯಕ' ಚಿತ್ರದ ಶೂಟಿಂಗ್ ಮುಗಿಸಿಕೊಡಬೇಕಾಗಿದೆ. ಏತನ್ಮಧ್ಯೆ ನಿರ್ದೇಶನದ ಜವಾಬ್ದಾರಿ ಬಂದಿದೆ. ಸುದೀಪ್ ಈ ಹಿಂದೆ ಮೈ ಆಟೋಗ್ರಾಫ್, ನಂ.73 ಶಾಂತಿನಿವಾಸ, ವೀರ ಮದಕರಿ, ಜಸ್ಟ್ ಮಾತ್ ಮಾತಲ್ಲಿ, ಕೆಂಪೇಗೌಡ ಚಿತ್ರಗಳನ್ನು ನಿರ್ದೇಶಿಸಿ ಸೈ ಅನ್ನಿಸಿಕೊಂಡಿದ್ದಾರೆ.
ಇನ್ನು ನಿರ್ಮಾಪಕ ಚಂದ್ರಶೇಖರ್ ವಿಚಾರಕ್ಕೆ ಬಂದರೆ, 'ಬಿಂದಾಸ್' (ಪುನೀತ್ ಮತ್ತು ಹಂಸಿಕಾ ಮೋತ್ವಾನಿ) ಚಿತ್ರದ ಮೂಲಕ ಏನೋ ಒಂದಷ್ಟು ದುಡ್ಡು ಕಾಸು ನೋಡಿದ್ದರು. ಬಳಿಕ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ 'ಏನೋ ಒಂಥರಾ' ಮಾಡಿ ರು.3 ಕೋಟಿ ಸಾಲದಲ್ಲಿ ಬಿದ್ದರು.
ಚಂದ್ರಶೇಖರ್ ಪಾಲಿಗೆ ಈಗ ಸುದೀಪ್ ಶ್ರೀಕೃಷ್ಣ ಪರಮಾತ್ಮನಂತೆ ಕಾಣಿಸುತ್ತಿದ್ದಾರೆ. ಸಾಲದ ಸುಳಿಯಿಂದ ತಾವು ಬಚಾವ್ ಆದರೆ ಸಾಕು ಎಂದು ಸುದೀಪ್ ಅವರನ್ನು ಸಂಪರ್ಕಿಸಿದ್ದಾರಂತೆ. ಇನ್ನು ಸುದೀಪ್ ಗ್ರೀನ್ ಸಿಗ್ನಲ್ ಕೊಡುವುದೊಂದು ಬಾಕಿ ಇದೆ. ಈ ಚಿತ್ರಕ್ಕೆ ಅನುಷ್ಕಾ ಶೆಟ್ಟಿ, ಕಾಜಲ್ ಅಗರವಾಲ್ ಅಥವಾ ತಮನ್ನಾರನ್ನು ಕರೆತರುವ ಬಗ್ಗೆಯೂ ಚಿಂತನೆ ನಡೆದಿದೆ. (ಏಜೆನ್ಸೀಸ್)


Click it and Unblock the Notifications











