»   » ಲಗೋರಿ ಆಡಲು ಬರುವಳೇ ಬೆಡಗಿ ತ್ರಿಷಾ

ಲಗೋರಿ ಆಡಲು ಬರುವಳೇ ಬೆಡಗಿ ತ್ರಿಷಾ

Subscribe to Filmibeat Kannada

ಲಗೋರಿ ಚಿತ್ರ ಪ್ರಾರಂಭಿಸಿದಾಗಿನಿಂದ ದಿನದಿಂದ ದಿನಕ್ಕೆ ಅದರ ಬಗ್ಗೆ ಜನರಲ್ಲಿ ಕುತೂಹಲ ಮೂಡುತ್ತಿದೆ. ಮೊದಲಬಾರಿಗೆ ಕಾಡು- ಮೇಡು. ಹೊಳೆ-ತೊರೆ, ಮುಂಗಾರು, ಮಳೆ, ನಿಸರ್ಗವನ್ನು ತೊರೆದು, ನಾಗರೀಕ ಜೀವನದ ಅದ್ಭುತಗಳನ್ನು ತೆರೆಯ ಮೇಲೆ ತರಲು ಯೋಗರಾಜ್ ಭಟ್ ಪ್ರಯತ್ನಿಸುತ್ತಿದ್ದಾರೆ.

ಚಿತ್ರಕ್ಕೆ ಪುನೀತ್ ಅವರು ಅಭಿನಯಿಸುತ್ತಿರುವುದು ವಿಶೇಷ ಎಂದು ಎನಿಸಿದರೆ, ಇನ್ನೊಂದು ವಿಶೇಷ ಕಾದಿದೆ ಎನ್ನುತ್ತಾರೆ ಭಟ್ಟರು. ಈ ಚಿತ್ರದಲ್ಲಿ ಛೋಟಾ ಪುನೀತ್ ಕಾಣಿಸಲಿದ್ದಾನೆ. ಅದೇ ಕಣ್ಣು ಚಿತ್ರದಲ್ಲಿ ಕಾಣಿಸಿದ ಪುನೀತ್ ಅವರನ್ನು ಮತ್ತೆ ತೆರೆಗೆ ತರಲಿದ್ದಾರಂತೆ. ವಿದೇಶದಲ್ಲಿ ಚಿತ್ರೀಕರಣಕ್ಕೆ ಪೂರ್ತಿ ಯೋಜನೆ ಹಾಕಿಕೊಂಡಿದ್ದಾರೆ.

ಇನ್ನೊಂದು ಸುದ್ದಿಯಂತೆ, ಚಿತ್ರದ ನಾಯಕಿ ಸ್ಥಾನಕ್ಕೆ ಪ್ರಿಯಾಮಣಿ ಅಥವಾ ತ್ರಿಷಾ ಆಯ್ಕೆಯಗುವ ಸಾಧ್ಯತೆಯಿದೆ. ಇತ್ತೀಚೆಗೆ ರಾಷ್ಟ್ರ ಪ್ರಶಸ್ತಿ ಗಳಿಸಿದ ಬೆಂಗಳೂರು ಹುಡುಗಿ ಪ್ರಿಯಾಮಣಿಯನ್ನು ಹಿಂದೊಮ್ಮೆ ನಮ್ಮ ಗಾಂಧಿನಗರದ ಮಂದಿ ಆಕೆಗೆ ರೂಪವಿಲ್ಲ, ನಾಯಕಿಯಾಗಲು ಲಾಯಕ್ಕಿಲ್ಲ ಎಂದು ಹೇಳಿ ದೂರವಿಟ್ಟಿದ್ದರು. ಆದರೂ ಭಟ್ಟರ ಸಿನಿಮಾ ಎಂದರೆ ಬರುವ ಸಾಧ್ಯತೆಯಿದೆ. ಆದರೆ ಆಕೆಗೆ ಈಗ ಮಲಯಾಳಂನಲ್ಲಿ ಹೆಚ್ಚಿನ ಬೇಡಿಕೆ ಬಂದಿದ್ದು, ಪುನೀತ್ ಜತೆ ಅಭಿನಯಿಸುವುದು ಸದ್ಯಕ್ಕೆ ದೂರದ ಮಾತು.

ಇನ್ನು ತಮಿಳು, ತೆಲುಗು ಚಿತ್ರರಂಗದ ಬಹುಚಾಲ್ತಿಯ ನಟಿ ತ್ರಿಷಾ ಅವರನ್ನು ಕರೆತರಲು ನಮ್ಮ ನಿರ್ಮಾಪಕರು ಕಮ್ಮಿಯಂದರೂ ಅರ್ಧ ಕೋಟಿ ಖರ್ಚು ಮಾಡಬೇಕು. ಭಟ್ಟರ ಆಹ್ವಾನವನ್ನು ಮನ್ನಿಸಿರುವ ತ್ರಿಷಾ, ನಿರ್ಧಾರ ತಿಳಿಸಲು ಮೂರು ತಿಂಗಳ ಕಾಲಾವಕಾಶ ಕೋರಿದ್ದಾರಂತೆ. ಒಟ್ಟಿನಲ್ಲಿ ಕನ್ನಡದ ನಾಯಕಿಯರು ಪುನೀತ್ ಜತೆ ನಟನೆಯ ಭಾಗ್ಯವಿಲ್ಲ.

(ದಟ್ಸ್ ಸಿನಿವಾರ್ತೆ)

ಪುನೀತ್ ಲಗೋರಿ ಆಡೋಣ ಬಾ

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada