For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾಗೆ ರಿಯಲ್ ಸ್ಟಾರ್ 'ಸೂಪರ್' ಪಯಣ

  By Rajendra
  |

  ಕರ್ನಾಟಕದಲ್ಲಿ ಭರ್ಜರಿ ವಹಿವಾಟು ನಡೆಸಿ ಈಗ ಅಮೆರಿಕಾಗೆ ಹಾರಲು ಸಿದ್ಧವಾಗಿದೆ ಉಪೇಂದ್ರ ಅಭಿನಯದ 'ಸೂಪರ್' ಚಿತ್ರ. ಮಾರ್ಚ್‌ನಲ್ಲಿ ಅಮೆರಿಕಾದಲ್ಲಿ ಚಿತ್ರ ತೆರೆಕಾಣಲಿದೆ ಎನ್ನುತ್ತದೆ ರಿಯಲ್ ಸ್ಟಾರ್ ಉಪೇಂದ್ರ ಅವರ ಫೇಸ್‌ಬುಕ್ ಪುಟ. ಎಲ್ಲಿ, ಯಾವಾಗ ಎಂಬ ವಿವರಗಳನ್ನು ನಿರೀಕ್ಷಿಸಲಾಗಿದೆ.

  ಉಪೇಂದ್ರ ಅವರ ಗೆಳೆಯ ಶಿವಮೂರ್ತಿ ಚಿತ್ರವನ್ನು ಯುಎಸ್‌‌ಎನಲ್ಲಿ ಬಿಡುಗಡೆ ಮಾಡುವ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಇದಕ್ಕೆ ಚಿತ್ರದ ನಿರ್ಮಾಪಕ ರಾಕ್‌‍ಲೈನ್ ವೆಂಕಟೇಶ್ ಗ್ರೀನ್ ಸಿಗ್ನಲ್ ಕೊಟ್ಟಾಗಿದೆ ಎನ್ನುತ್ತಾರೆ ಉಪೇಂದ್ರ. ಅಮೆರಿಕನ್ನಡಿಗರು 'ಸೂಪರ್' ಚಿತ್ರವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

  ಏತನ್ಮಧ್ಯೆ 'ಸೂಪರ್' ಚಿತ್ರ 75 ದಿನಗಳನ್ನು ಪೂರೈಸಿದೆ. ರಾಜ್ಯದಾದ್ಯಂತ 35 ಕೇಂದ್ರಗಳಲ್ಲಿ ಸೂಪರ್ 75 ದಿನಗಳನ್ನು ಪೂರೈಸಿದೆ. 'ಸೂಪರ್' ತೆಲುಗು ಅವತರಣಿಗೆ ತೆರೆಗೆ ಅಪ್ಪಳಿಸಲು ಸಿದ್ಧವಾಗಿದೆ. ಬಹುಶಃ ಫೆಬ್ರವರಿ ಕೊನೆಗೆ ಅಥವಾ ಮಾರ್ಚ್ ಮೊದಲ ವಾರದಲ್ಲಿ ತೆಲುಗು 'ಸೂಪರ್' ಬಿಡುಗಡೆಯಾಗಲಿದೆ.

  English summary
  Kannada film Super will be screened in USA from March. Meanwhile the Telugu version will also be ready to release. Upendra's Facebook page has these details. Recently Super film show has arranged in Infosys Mysore campus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X