ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ವಿಸ್ಮಯ ಪ್ರಣಯ!
ರಾಜ್‌ಸಾಗರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ವಿಸ್ಮಯ ಪ್ರಣಯ' ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಕಾಲೇಜಿನಲ್ಲಿ ಕ್ಯಾಂಟೀನ್ ನಡೆಸುತ್ತಿದ ನಾಯಕ ತನ್ನ ಗೆಳೆಯರೊಂದಿಗೆ ಸಂಭಾಷಿಸುವ ಸನ್ನಿವೇಶವನ್ನು ಯಲಹಂಕದ ಬಳಿಯ ನಿಟ್ಟೆ ಮೀನಾಕ್ಷಿ ಕಾಲೇಜಿನಲ್ಲಿ ನಿರ್ದೇಶಕ ಮೋಹನ್ ಮಲ್ಲಪಳ್ಳಿ ಚಿತ್ರೀಕರಿಸಿಕೊಂಡರು. ರಾ
ಜಸಾಗರ್, ಅಪೂರ್ವ ಹಾಗೂ ಇಂದ್ರನ್ ಈ ಭಾಗದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.ನಾಯಕನಾಗಿ ನಟಿಸುತ್ತಿರುವ ರಾಜ್‌ಸಾಗರ್ ಚಿತ್ರಕ್ಕೆ ಕಥೆ ಬರೆದಿರುವುದಲ್ಲದೆ, ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದಾರೆ. ಮಯೂರಿ ಹಾಗೂ ಕಾವ್ಯಶ್ರೀ ಚಿತ್ರದಲ್ಲಿ ನಾಯಕಿಯರಾಗಿ ನಟಿಸಿದ್ದಾರೆ. ಹೇಮಾಚೌಧರಿ, ಇಂದ್ರನ್, ರಾಮಿರೆಡ್ಡಿ, ಅಪೂರ್ವ, ಕರಿಬಸವಯ್ಯ, ರೇಖಾದಾಸ್, ಮಿಮಿಕ್ರಿ ರಾಜ್‌ಗೋಪಾಲ್ ಮುಂತಾದವರು ಚಿತ್ರದ ತಾರಾಬಳಗದಲಿದ್ದಾರೆ.
ಬಹಳ ವರ್ಷಗಳ ನಂತರ ಮೋಹನ್ ಮಲ್ಲಪಳ್ಳಿ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿ ಬಂದಿದ್ದಾರೆ. ಇವರೇ ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಕೆ.ವಿಶ್ವನಾಥ್ ಸಂಗೀತ, ಮ್ಯಾಥ್ಯೂರಾಜನ್ ಛಾಯಾಗ್ರಹಣ, ಗಿರೀಶ್‌ಕುಮಾರ್ ಸಂಕಲನ, ಡಿಫ಼ರೆಂಟ್ ಡ್ಯಾನಿ ಸಾಹಸ ಹಾಗೂ ಬಿ.ಕೃಷ್ಣ ಅವರ ನಿರ್ಮಾಣ ನಿರ್ವಹಣೆ 'ವಿಸ್ಮಯ ಪ್ರಣಯ' ಚಿತ್ರಕ್ಕಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)


Click it and Unblock the Notifications











