»   » ಮಹೇಶ್ ಭೂಪತಿ ಮಾಜಿ ಪತ್ನಿಗೆ ಎರಡನೇ ಮದುವೆ

ಮಹೇಶ್ ಭೂಪತಿ ಮಾಜಿ ಪತ್ನಿಗೆ ಎರಡನೇ ಮದುವೆ

Posted By:
Subscribe to Filmibeat Kannada

ಟೆನ್ನಿಸ್ ತಾರೆ ಮಹೇಶ್ ಭೂಪತಿ ತಮ್ಮ ಪತ್ನಿ ಶ್ವೇತಾ ಜಯ್‌ಶಂಕರ್ ಅವರಿಗೆ ಸೋಡಾ ಚೀಟಿ ಕೊಟ್ಟು ಬಾಲಿವುಡ್ ತಾರೆ ಲಾರಾ ದತ್ತಾರೊಂದಿಗೆ ಮದುವೆಯಾಗಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಹೊಸ ಸುದ್ದಿ ಏನೆಂದರೆ, ಭೂಪತಿ ಮಾಜಿ ಪತ್ನಿ ಶ್ವೇತಾ ಕೂಡ ಎರಡನೇ ಮದುವೆಗೆ ಸಿದ್ಧತೆ ನಡೆಸಿರುವುದು.

ಎಲ್ಲ ಅಂದುಕೊಂಡಂತೆ ನಡೆದರೆ ಫೆಬ್ರವರಿ 20ರಂದು ಶ್ವೇತಾ ಜಯ್‌ಶಂಕರ್ ಅವರು ಉದ್ಯಮಿ ರಘು ಕೈಲಾಶ್ ಕೈಹಿಡಿಯಲಿದ್ದಾರೆ. ವಿಶೇಷ ಎಂದರೆ ಈ ಮದುವೆ ಬೆಂಗಳೂರು ಅಥವಾ ಚೆನ್ನೈನಲ್ಲಿ ನಡೆಯಲಿರುವುದು. ಶ್ವೇತಾ ಅವರ ಎರಡನೆ ಮದುವೆ ನಿರ್ಧಾರಕ್ಕೆ ಆಕೆಯ ಪೋಷಕರು ಸಖತ್ ಖುಷಿಯಾಗಿದ್ದಾರಂತೆ.

ಮಹೇಶ್ ಭೂಪತಿ ಜತೆಗಿನ ಹಳೆ ಕತೆಯನ್ನೆಲ್ಲಾ ಮರೆತು ಶ್ವೇತಾ ಹೊಸ ಜೀವನ ಆರಂಭಿಸಲಿದ್ದಾರಂತೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಎರಡನೇ ಇನ್ನಿಂಗ್ಸ್ ಶುರು ಮಾಡಲಿರುವುದಾಗಿ ಶ್ವೇತಾ ಹೇಳಿಕೊಂಡಿದ್ದಾರೆ. ಹಿಂದು ಸಂಪ್ರದಾಯದಂತೆ ಮದುವೆ ನಡೆಯಲಿದೆ ಎನ್ನುತ್ತವೆ ಮೂಲಗಳು.

English summary
The buzz in the town is Shvetha Jaishankar, former wife of tennis player Mahesh Bhupathi, getting married this week. The wedding is slated for February 20 and will be held in Chennai. Other ceremonies will begin a few days earlier.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada