ನಟಿ ರಾಧಿಕಾಗೆ ಕುಮಾರಸ್ವಾಮಿ ಏನಾಗಬೇಕು?

By Rajendra
<ul id="pagination-digg"><li class="previous"><a href="/news/19-writ-petition-filed-against-hdk-accuses-bigamy-aid0052.html">« Previous</a>

Actress Radhika Kumaraswamy
ಕನ್ನಡ ಚಿತ್ರರಂಗದಲ್ಲಿ ತಂಗಿ ಪಾತ್ರಗಳಿಂದ ಮನೆಮಾತಾದ ನಟಿ ರಾಧಿಕಾ ತನ್ನ ಗಂಡನ ಹೆಸರನ್ನು ಲಕ್ಕಿ ಚಿತ್ರದ ಮೂಲಕ ಢಾಣಾಡಂಗುರ ಮಾಡಿದ್ದರು. ಈಗಾಗಲೆ ಚಿತ್ರೀಕರಣ ಭರದಿಂದ ಸಾಗುತ್ತಿರುವ 'ಲಕ್ಕಿ' ಚಿತ್ರದ ನಾಯಕಿ ರಮ್ಯಾ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಆ ಚಿತ್ರದ ಜಾಹೀರಾತಿನಲ್ಲಿ ತನ್ನ ಹೆಸರೊಂದಿಗೆ ತನ್ನ ಗಂಡನ ಹೆಸರನ್ನೂ ಸೇರಿಸಿ ಪ್ರಕಟಿಸಿದ್ದಾರೆ, ರಾಧಿಕಾ ಕುಮಾರಸ್ವಾಮಿ ಎಂದು.

ರಾಧಿಕಾರಿಗೆ ಮಗುವಾಗಿದ್ದು, ಆ ಮಗುವಿಗೆ ಶಮಿತಾ ಕುಮಾರಸ್ವಾಮಿ ಎಂದು ನಾಮಕರಣ ಮಾಡಿದ್ದು. ಈ ಫೋಟೋಗಳು ಪತ್ರಿಕೆಗಳಲ್ಲಿ ಜಗಜ್ಜಾಹೀರಾಗಿದ್ದು ಗೊತ್ತೆ ಇದೆ. ಇಷ್ಟೆಲ್ಲಾ ಆದರೂ ತನ್ನ ಗಂಡನ ಹೆಸರನ್ನು ಮಾತ್ರ ಹೇಳಿರಲಿಲ್ಲ. 'ಲಕ್ಕಿ' ಚಿತ್ರದ ಪೋಸ್ಟರ್‌ಗಳಲ್ಲಿ ತನ್ನ ಹೆಸರಿನೊಂದಿಗೆ ಗಂಡನ ಹೆಸರನ್ನೂ ಸೇರಿಸಿ ಪ್ರಕಟಿಸಿದ್ದಾರೆ ರಾಧಿಕಾ.

ಈ ಮೂಲಕ ರಾಧಿಕಾ ಅಧಿಕೃತವಾಗಿ ತನ್ನ ಗಂಡ ಯಾರೆಂದು ಹೇಳಿದಂತಾಗಿದೆ. ರಾಧಿಕಾ ಇನ್ನು ಮುಂದೆ ಬರೀ ರಾಧಿಕಾ ಅಲ್ಲ ರಾಧಿಕಾ ಕುಮಾರಸ್ವಾಮಿ. ಅಂದಹಾಗೆ 'ಲಕ್ಕಿ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಡಾ.ಸೂರಿ (ದುನಿಯಾ ಸೂರಿ ಅಲ್ಲ). ಚಿತ್ರೀಕರಣ ಇನ್ನೇನು ಶೀಘ್ರದಲ್ಲೆ ಮುಗಿಯಲಿದ್ದು, ಲಕ್ಕಿ ತೆರೆಗೆ ಅಪ್ಪಳಿಸುವ ದಿನಗಳು ಸಮೀಪದಲ್ಲೆ ಇವೆ. ಆದರೆ ಕಡೆಗೂ ಕಾಡುತ್ತಿರುವ ಪ್ರಶ್ನೆ ಈ ಕುಮಾರಸ್ವಾಮಿ ಯಾರು ಎಂಬುದು? (ಒನ್‌ಇಂಡಿಯಾ ಕನ್ನಡ)

<ul id="pagination-digg"><li class="previous"><a href="/news/19-writ-petition-filed-against-hdk-accuses-bigamy-aid0052.html">« Previous</a>

More from Filmibeat

English summary
What is the name of Kannada actress Radhika's hubby? Recently Radhika herself has announced his name as Kumaraswamy, when she has her home banner movie 'Lucky' has been launched.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X