KGF 2 Editor: 'ಕೆಜಿಎಫ್ 2' ಸಿನಿಮಾದ ಎಡಿಟರ್‌ ಇನ್ನೂ 19 ವರ್ಷದ ಯುವಕ

'ಕೆಜಿಎಫ್ 2' ಸಿನಿಮಾದ ಕತೆ, ಯಶ್ ನಟನೆ, ರವಿ ಬಸ್ರೂರು ಸಂಗೀತ, ಭುವನ್ ಗೌಡ ಕ್ಯಾಮೆರಾ ಕೆಲಸಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದೆಲ್ಲದ ಜೊತೆಗೆ ಸಿನಿಮಾದ ಎಡಿಟಿಂಗ್ ಬಗ್ಗೆ ದೊಡ್ಡ ಮಟ್ಟದ ಪ್ರಶಂಸೆ ವ್ಯಕ್ತವಾಗುತ್ತಿದೆ.

Recommended Video

KGF Real Story | KGF ಎಂಬ ಊರು ಹುಟ್ಟಿಕೊಂಡಿದ್ದು ಹೇಗೆ ? KGF SINCE 1956

ಸಿನಿಮಾದ ಎಡಿಟಿಂಗ್ ಸುಲಭದ ಕೆಲಸವನ್ನು ಅದಕ್ಕೆ ಬಹಳ ತಾಳ್ಮೆ ಮತ್ತು ಅನುಭವ ಬೇಕು. 'ಕೆಜಿಎಫ್ 2' ಅಂತಹಾ ಭಿನ್ನ ಮಾದರಿಯ, ನಾನ್ ಲೀನಿಯರ್ ಕತೆಯುಳ್ಳ ಸಿನಿಮಾವನ್ನು ಎಡಿಟ್ ಮಾಡುವುದಂತೂ ಬೆಟ್ಟ ಅಗೆದಷ್ಟೆ ಕಷ್ಟದ ಕೆಲಸ. ಆದರೆ ಆ ಕೆಲಸ 'ಕೆಜಿಎಫ್ 2' ನಲ್ಲಿ ಅದ್ಭುತವಾಗಿ ಆದೆ.

'ಕೆಜಿಎಫ್ 2' ಸಿನಿಮಾವನ್ನು ಅತ್ಯದ್ಭುತವಾಗಿ ಎಡಿಟ್ ಮಾಡಿರುವುದು ಈಗಷ್ಟೆ ಮೀಸೆ ಚಿಗುರುತ್ತಿರುವ 19 ವರ್ಷದ ಯುವಕ ಎಂದರೆ ನಂಬಲೇ ಬೇಕು. ಸಿನಿಮಾದವನ್ನು ಅದ್ಭುತವಾಗಿ ಎಡಿಟ್ ಮಾಡಿರುವ ಉಜ್ವಲ್ ಕುಲಕರ್ಣಿಗೆ ಇನ್ನೂ 20 ವರ್ಷವೂ ಆಗಿಲ್ಲ. ಆಗಲೇ ತನ್ನ ಕೆಲಸದಿಂದ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದಾನೆ.

19 Year Old Boy Ujjwal Kulkarni Edited KGF 2 Movie, Know About Him

19 ವರ್ಷದ ಉಜ್ವಲ್ ಕುಲಕರ್ಣಿಗೆ ಎಡಿಟಿಂಗ್ ಎಂದರೆ ಪಂಚಪ್ರಾಣ. ಈ ಹಿಂದೆ ಫ್ಯಾನ್ ವಿಡಿಯೋಗಳನ್ನು ಎಡಿಟ್ ಮಾಡುತ್ತಿದ್ದರು. ಬಳಿಕ ಯೂಟ್ಯೂಬ್ ವೀಡಿಯೋಗಳನ್ನು ಎಡಿಟ್ ಮಾಡಿಕೊಡುತ್ತಿದ್ದರು. ಹೀಗೆ ಒಮ್ಮೆ 'ಕೆಜಿಎಫ್' ಸಿನಿಮಾದ ವಿಡಿಯೋ ಎಡಿಟ್ ಮಾಡಿದ್ದರು, ಅದು ಪ್ರಶಾಂತ್ ನೀಲ್ ಕಣ್ಣಿಗೆ ಬಿದ್ದು, 'ಕೆಜಿಎಫ್ 2' ಸಿನಿಮಾದ ಟೀಸರ್ ಕಟ್ ಮಾಡುವ ಅವಕಾಶವನ್ನು ಉಜ್ವಲ್‌ಗೆ ನೀಡಿದರು.

'ಕೆಜಿಎಫ್ 2' ಸಿನಿಮಾದ ಟೀಸರ್ ಯಾವ ಮಟ್ಟಿಗೆ ಹಿಟ್ ಆಯ್ತು ಎಂದರೆ, ಸಿನಿಮಾವನ್ನು ಎಡಿಟ್ ಮಾಡುವ ಅವಕಾಶವನ್ನೂ ಪ್ರಶಾಂತ್ ನೀಲ್, ಉಜ್ವಲ್‌ಗೆ ನೀಡಿದರು. ಮುಂದಿನದ್ದು ಇತಿಹಾಸ.

ಉಜ್ವಲ್, 'ಕೆಜಿಎಫ್ 2' ಸಿನಿಮಾವನ್ನು ಅತ್ಯದ್ಭುತವಾಗಿ ಎಡಿಟ್ ಮಾಡಿದ್ದಾರೆ. ಈ ಹುಡುಗನ ಪ್ರತಿಭೆಗೆ ಇಡೀ ಭಾರತೀಯ ಚಿತ್ರರಂಗವೇ ಸಲಾಮ್ ಹೊಡೆದಿದೆ. 'ಕೆಜಿಎಫ್ 2' ಸಿನಿಮಾದ ಆಕ್ಷನ್‌ ದೃಶ್ಯಗಳು ಅಷ್ಟು ಅತ್ಯದ್ಭುತವಾಗಿ ಕಾಣುತ್ತಿರುವುದರಲ್ಲಿ ಉಜ್ವಲ್ ಪಾಲು ದೊಡ್ಡದು.

'ಕೆಜಿಎಫ್ 2' ಸಿನಿಮಾದಿಂದ ದೊಡ್ಡ ಮಟ್ಟದಲ್ಲಿ ಉಜ್ವಲ್ ಗಮನ ಸೆಳೆದಿದ್ದು, ಹಲವು ಸಿನಿಮಾಗಳ ಅವಕಾಶ ಉಜ್ವಲ್ ಅನ್ನು ಅರಸಿ ಬರುವುದರಲ್ಲಿ ಅನುಮಾನವೇ ಇಲ್ಲ. ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ, ಪ್ರಭಾಸ್ ನಟನೆಯ 'ಸಲಾರ್' ಸಿನಿಮಾವನ್ನೂ ಸಹ ಉಜ್ವಲ್ ಅವರೇ ಎಡಿಟ್ ಮಾಡುವ ಸಾಧ್ಯತೆ ಇದೆ.

More from Filmibeat

English summary
19 year old boy Ujjwal Kulkarni edited KGF 2 movie. Prashanth Neel gave opertunity to Ujjwal and he proved his talent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X