»   » ಕಮಲಹಾಸನ್‌ಗೆ ಗೌರವ ಡಾಕ್ಟರೇಟ್‌

ಕಮಲಹಾಸನ್‌ಗೆ ಗೌರವ ಡಾಕ್ಟರೇಟ್‌

Subscribe to Filmibeat Kannada

ಚೆನ್ನೈ : ದಕ್ಷಿಣ ಭಾರತದ ಸೂಪರ್‌ಸ್ಟಾರ್‌ ಕಮಲ್‌ಹಾಸನ್‌ ಅವರಿಗೆ ಚೆನ್ನೈ ಮೂಲದ ಸತ್ಯಭಾಮ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿದೆ.

ಚಿತ್ರರಂಗಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರ್ತಿಸಿ, ಸೋಮವಾರ (ಜ.17)ಆಯೋಜಿಸಲಾಗಿದ್ದ ದಿ.ಎಂ.ಜಿ.ರಾಮಚಂದ್ರನ್‌ ಅವರ 88ನೇ ಹುಟ್ಟು ಹಬ್ಬದ ಸಮಾರಂಭದಲ್ಲಿ ವಿಶ್ವವಿದ್ಯಾಲಯ ಡಾಕ್ಟರೇಟ್‌ ಪದವಿಯನ್ನು ಕಮಲ್‌ ಹಾಸನ್‌ಗೆ ವಿತರಿಸಿತು.

ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಅವರು, ತಮ್ಮ ಆರನೇ ವರ್ಷದಲ್ಲಿಯೇ 1960ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ತಮಿಳಿನಲ್ಲಿ ನೆಲೆಕಂಡ ಕಮಲ್‌, ಬಾಲಿವುಡ್‌ನಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ. ಸೂಪರ್‌ ಹಿಟ್‌ ಚಿತ್ರ ಏ ದುಜೆ ಕೀ ಲಿಯೇ, ಸನಂ ತೇರಿ ಕಸಂ, ಹೇ ರಾಮ್‌ ಮತ್ತಿತರ ಚಿತ್ರಗಳಲ್ಲಿ ಕಮಲ್‌ ಮಿಂಚಿದ್ದಾರೆ.

ಮೊನಿಷಾ ಕೊಯಿರಾಲರೊಂದಿಗಿನ ಹಿಂದಿ-ತಮಿಳಿನ ಮುಂಬೈ ಎಕ್ಸ್‌ಪ್ರೆಸ್‌ ಚಿತ್ರ ತೆರೆ ಕಾಣ ಬೇಕಾಗಿದೆ. ಅಲ್ಲದೇ ಕನ್ನಡ-ತೆಲುಗು, ಮಳಯಾಳಂ ಭಾಷೆಗಳಲ್ಲೂ ಕಮಲ್‌ ನಟಿಸಿದ್ದಾರೆ. ಮಾತೇ ಇಲ್ಲದ ಚಿತ್ರ ‘ಪುಷ್ಪಕ ವಿಮಾನ’ ಕಮಲ್‌ ಹಾಸನ್‌ ಅವರ ಅಭಿನಯ ಚಾತುರ್ಯವನ್ನು ಸಮರ್ಥವಾಗಿ ಬಿಂಬಿಸಿದೆ.

(ಏಜನ್ಸೀಸ್‌)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada