ಶೂಟಿಂಗು ಶೂಟಿಂಗು ಹಾಗೂ ಶೂಟಿಂಗು !
*ಮಹೇಶ್ ದೇವಶೆಟ್ಟಿ
ನೋಡ್ತಿದೀರಲ್ಲ ಸಾರ್, ನಾನಿನ್ನೂ ಚಿಕ್ಕವನು. ಮೊನ್ನೆಯಷ್ಟೇ ಚಿತ್ರರಂಗಕ್ಕೆ ಬಂದೆ. ಎಲ್ಲರ ಹಾರೈಕೆಯಿಂದ ಒಂದಿಷ್ಟು ಬೆಳೆದಿದೀನಿ. ಹತ್ತು ಜನರ ಜೊತೆಗೆ ಹನ್ನೊಂದನೆಯವನು ಅನ್ನುವಂಥ ನಾನು ಕೂಡ ಇವತ್ತು ತುಂಬಾ ‘ಬಿಜಿ’ ಆಗ್ಬಿಟ್ಟಿದ್ದೀನಿ...
- ನಾಯಕ ನಟ ವಿಜಯ ರಾಘವೇಂದ್ರ ತಮ್ಮ ಟೈಂಪಾಸ್ ಪ್ರವರ ಪ್ರಾರಂಭಿಸಿದ್ದೇ ಹೀಗೆ .
ನಾನು ಚಿತ್ರನಟನಾಗಿದ್ದೇ ಆಕಸ್ಮಿಕವಾಗಿ. ಹಾಗೆಯೇ ನನ್ನ ಅಭಿನಯದ ಚಿತ್ರಗಳು ಒಂದರ ಹಿಂದೊಂದು ಗೆದ್ದದ್ದೂ ಒಂದು ರೀತೀಲಿ ಆಕಸ್ಮಿಕವೇ ಇರಬಹುದು. ಆದರೆ ಅದೆಲ್ಲದರಲ್ಲಿ ನನ್ನ ಶ್ರಮ ಇತ್ತು . ನನ್ನ ಶ್ರದ್ಧೆ ಇತ್ತು ಅಂತ ಮಾತ್ರ ನಾನು ಹೇಳಬಯಸುತ್ತೀನಿ.
ನಟನಾಗುವ ಮುನ್ನ ಮಾತ್ರವಲ್ಲ , ಈವಾಗ ಕೂಡಾ ಶೂಟಿಂಗ್ ಶೂಟಿಂಗ್ ಅಂತ ಕನವರಿಸೋದೆ ನನ್ನ ಟೈಂಪಾಸ್ ಆಗಿಹೋಗಿದೆ.
ಇವತ್ತು ನಾಡಿನ ಬಹುಮಂದಿ ನನ್ನನ್ನ ‘ಡ್ಯಾನ್ಸರ್’ ಅಂತ ಗುರುತಿಸಿದಾರೆ. ಅವರ ನಿರೀಕ್ಷೆ ಹುಸಿಯಾಗಬಾರದಲ್ಲ ; ಹಾಗಾಗಿ ನಾನು ಹೆಚ್ಚಾಗಿ ಎಲ್ಲ ನಾಯಕರ ನೃತ್ಯದ ಕ್ಯಾಸೆಟ್‌ಗಳನ್ನು ವೀಕ್ಷಿಸುತ್ತೀನಿ. ನನ್ನ ನಟನೆಯಲ್ಲಿ , ಡ್ಯಾನ್ಸ್‌ನಲ್ಲಿ ಆಗಿರೋ ತಪ್ಪುಗಳನ್ನು ತಿದ್ದಿಕೊಳ್ಳಲು ಸದಾ ಪ್ರಯತ್ನಿಸ್ತೀನಿ.
ಇದೆಲ್ಲದರ ಜೊತೆಗೆ ನನ್ನ ಹಳೆಯ ಗೆಳೆಯರಿದ್ದಾರಲ್ಲ - ಅಪರೂಪಕ್ಕೆ ಒಂದಿಷ್ಟು ಟೈಂ ಸಿಕ್ಕರೆ ಅವರ ಜೊತೆ ಅಡ್ಡಾಡಿ ಬರ್ತೀನಿ. ನನ್ನಿಷ್ಟದ ಹಾಡು ಕೇಳ್ತೀನಿ. ಅದು ಬಿಟ್ರೆ ಅದೇ ಹಳೆಯರಾಗ- ಶೂಟಿಂಗು ಶೂಟಿಂಗು ಶೂಟಿಂಗು !
(ವಿಜಯ ಕರ್ನಾಟಕ)
ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications