For Quick Alerts
  ALLOW NOTIFICATIONS  
  For Daily Alerts

  ಪುನರ್ಜನ್ಮದ ನಿರೀಕ್ಷೆಯಲ್ಲಿ ‘ರಣಚಂಡಿ’ ಪ್ರೇಮಾ

  By Staff
  |
  • ಹೊಸ ಇಮೇಜಿನೊಂದಿಗೆ ಪ್ರೇಮಾ ಚಿತ್ರರಂಗದಲ್ಲಿ ಪುನರ್ಜನ್ಮದ ನಿರೀಕ್ಷೆಯಲ್ಲಿದ್ದಾರೆ. ಪ್ರೇಮಾ ಅಭಿನಯದ ರಣಚಂಡಿ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆಯಂತೆ. ಚಿತ್ರ ಗೆದ್ದರೆ ಪ್ರೇಮಾಗೆ ರಣಚಂಡಿ ಇಮೇಜ್‌ ಗ್ಯಾರಂಟಿ.
  • ಸಿನಿಮಾ ರಂಗದಲ್ಲಿಯೇ ಬದುಕು, ಭವಿಷ್ಯವನ್ನು ಕಾಣಬೇಕು ಎಂಬ ಜ್ಞಾನೋದಯ ಸುದೀಪ್‌ಗಾಗಿದೆ. ಹೀಗಾಗಿಯೇ ಕಾಶಿ ಫ್ರಮ್‌ ವಿಲೇಜ್‌ ಚಿತ್ರದ ಸೆಟ್‌ನಲ್ಲಿ ಎಂಥ ಪಾತ್ರವಾದರೂ ಪರವಾಗಿಲ್ಲ, ನಿರ್ಮಾಪಕರು ಉಳಿದರಷ್ಟೆ ಸಾಕು ಎಂದಿದ್ದಾರೆ.
  • ತಮಿಳಿನಲ್ಲಿ ಜನಪ್ರಿಯವಾಗಿರುವ ಆಟೋಗ್ರಾಫ್‌ ಚಿತ್ರವನ್ನು ಈಗ ಕನ್ನಡದಲ್ಲಿ ಸುದೀಪ್‌ ನಾಯಕತ್ವದಲ್ಲಿ ತಯಾರಿಸಲಾಗುತ್ತಿದೆ. ಚಿತ್ರದ ನಿರ್ದೇಶನ ಡಿ.ರಾಜೇಂದ್ರ ಬಾಬು ಅವರದು.
  • ಅಯ್ಯ ಚಿತ್ರ ನಿರ್ಮಿಸಿದ ಎಚ್‌.ಸಿ. ಬೈರೆಗೌಡ್ರು‘ಗೋಪಿ’ ಎಂಬ ಚಿತ್ರಕ್ಕೆ ಕೈಹಾಕಿದ್ದಾರೆ. ಲವ್‌ ಚಿತ್ರದ ನಂತರ ಮಾಯವಾಗಿದ್ದ ರಾಜೇಂದ್ರ ಸಿಂಗ್‌ ಬಾಬು ಮಗ ಆದಿತ್ಯ ಈ ಚಿತ್ರದ ನಾಯಕ. ತೆಲುಗಿನ ‘ಮುರಾರಿ’ ಚಿತ್ರದ ರಿಮೇಕ್‌ ಆಗಿರುವ ಈ ಚಿತ್ರವನ್ನು ಜಿ.ಕೆ.ಮುದ್ದುರಾಜ್‌ ನಿರ್ದೇಶಿಸುತ್ತಿದ್ದಾರೆ.
  • ಎಕ್ಸ್‌ಕ್ಯೂಸ್‌ಮಿ ಚಿತ್ರದ ನಿರ್ಮಾಪಕ ಎನ್‌.ಎಂ.ಸುರೇಶ್‌ ಅವರ ‘ಚಪ್ಪಾಳೆ ’ ನಿರೀಕ್ಷೆಯಷ್ಟು ಯಶಸ್ಸನ್ನು ಕಾಣಲಿಲ್ಲ. ಅತ್ತ ಅವರೇ ನಿರ್ಮಿಸಿದ ತೆಲುಗು ಚಿತ್ರವೂ ಸೋತಿದೆ. ಬೇಸರದಲ್ಲಿರುವ ಅವರು, ಚಿತ್ರರಂದದಲ್ಲಿ ತಮ್ಮ ಅಳಿವು ಉಳಿವಿನ ಪ್ರಶ್ನೆಯಾಗಿ 7 oclocks ಎಂಬ ಚಿತ್ರ ತೆಗೆಯಲು ಸಜ್ಜಾಗಿದ್ದಾರೆ.
  • ಕರಿಯ ಮತ್ತು ಎಕ್ಸ್‌ಕ್ಯೂಸ್‌ ಮಿ ಖ್ಯಾತಿಯ ನಿರ್ದೇಶಕ ಪ್ರೇಮ್‌ ‘ಜೋಗಿ’ ಚಿತ್ರದಲ್ಲಿ ಮಗ್ನರಾಗಿದ್ದಾರೆ. ಅಲ್ಲದೇ ‘ಪ್ರೀತಿ ಏಕೆ ಭೂಮಿ ಮೇಲಿದೆ’ ಎಂಬ ಚಿತ್ರ ನಿರ್ದೇಶಿಸಲು ಸಿದ್ಧರಾಗುತ್ತಿದ್ದಾರೆ.
  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X