»   » ಎದೆನೋವು : ಬಾಲಿವುಡ್‌ ತಾರೆ ಸೈಫ್‌ ಆಲಿಖಾನ್‌ ಆಸ್ಪತ್ರೆಗೆ

ಎದೆನೋವು : ಬಾಲಿವುಡ್‌ ತಾರೆ ಸೈಫ್‌ ಆಲಿಖಾನ್‌ ಆಸ್ಪತ್ರೆಗೆ

Subscribe to Filmibeat Kannada


ಮುಂಬಯಿ : ಬಾಲಿವುಡ್‌ ನಟ ಸೈಫ್‌ ಆಲಿಖಾನ್‌ಗೆ ಭಾನುವಾರ(ಫೆಬ್ರವರಿ 18) ರಾತ್ರಿ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ನಗರದ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆಸ್ಪತ್ರೆ ಉಪಾಧ್ಯಕ್ಷ ನರೇಂದ್ರ ತ್ರಿವೇದಿ, ಎದೆನೋವಿನ ಕಾರಣ ಪತ್ತೆ ಹಚ್ಚಲು ತಪಾಸಣೆಗಳು ನಡೆಯುತ್ತಿವೆ. ಆದರೆ ಈಗಲೇ ಕಾರಣ ಏನೆಂಬುದನ್ನು ಹೇಳಲಾಗದು ಎಂದು ತಿಳಿಸಿದರು.

ಓಂಕಾರ ಚಿತ್ರದಲ್ಲಿನ ಖಳನಾಯಕ ಪಾತ್ರಕ್ಕೆ ಸ್ಟಾರ್‌ಡಸ್ಟ್‌ ಪ್ರಶಸ್ತಿ ಪಡೆದಿರುವ ಅವರು, ಪ್ರಶಸ್ತಿ ಪ್ರದಾನ ಸಮಾರಂಭಕ್ಕಾಗಿ ನಡೆಯುತ್ತಿದ್ದ ನೃತ್ಯದ ತಾಲೀಮು ಕಾರ್ಯಕ್ರಮದಲ್ಲಿ ಎದೆನೋವಿಗೆ ಒಳಗಾದರು. ಆನಂತರ ಅವರನ್ನು ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ಸುದ್ದಿ ಹರಡುತ್ತಿದ್ದಂತೆ ಸೈಫ್‌ ಸೋದರಿ-ನಟಿ ಸೋಹಾ ಆಲಿಖಾನ್‌, ಪರಿಣೀತಾ ಚಿತ್ರದ ನಿರ್ದೇಶಕ ಪ್ರದೀಪ್‌ ಸರ್ಕಾರ್‌, ನಟಿ ಪ್ರೀತಿ ರಿkುಂಟಾ, ನಟ ಫರ್ದೀನ್‌ಖಾನ್‌ ಸೇರಿದಂತೆ ಹಲವಾರು ಬಾಲಿವುಡ್‌ ತಾರೆ ಆಸ್ಪತ್ರೆಯತ್ತ ಧಾವಿಸಿದರು.

ಸೈಫ್‌ ಆಲಿಖಾನ್‌, ಮಾಜಿ ಕ್ರಿಕೆಟಿಗ ಮನ್ಸೂರ್‌ ಆಲಿಖಾನ್‌ ಪಟೌಡಿ ಹಾಗೂ ಖ್ಯಾತ ಬಾಲಿವುಡ್‌ ಚಿತ್ರ ನಟಿ ಶರ್ಮಿಳಾ ಟ್ಯಾಗೋರ್‌ ದಂಪತಿಗಳ ಪುತ್ರ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಅಲ್ಲದೆ ಸೈಫ್‌ ಮಾಜಿ ಹೆಂಡತಿ ಅಮೃತಾಸಿಂಗ್‌ ಕೂಡ ಚಿತ್ರತಾರೆಯಾಗಿದ್ದನ್ನೂ ಇಲ್ಲಿ ಸ್ಮರಿಸಬಹುದು.

(ಏಜನ್ಸೀಸ್‌)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada