»   » ಬಾಲಿವುಡ್‌ ತಾರೆಗಳಿಗೆ ಪಾಕಿಸ್ತಾನದ ‘ಲಾಲಿವುಡ್‌’ ಹಸಿರು ಹಾಸು

ಬಾಲಿವುಡ್‌ ತಾರೆಗಳಿಗೆ ಪಾಕಿಸ್ತಾನದ ‘ಲಾಲಿವುಡ್‌’ ಹಸಿರು ಹಾಸು

Posted By: Super
Subscribe to Filmibeat Kannada

ಭಾರತ-ಪಾಕ್‌ ಭಾಂದವ್ಯ ಅಭಿವೃದ್ಧಿಗಾಗಿ ಹಲವು ಕ್ಷೇತ್ರಗಳು ಹಾತೊರೆಯುತ್ತಿವೆ. ಮಾನವ ಸಂಬಂಧದಿಂದ ಆರಂಭಿಸಿ ಸಕ್ಕರೆ, ಅಡಿಕೆ, ಕ್ರಿಕೆಟ್‌... ಈಗ ಪಾಕಿಸ್ಥಾನದ ಚಿತ್ರರಂಗ 'ಲಾಲಿವುಡ್‌' ಭಾರತದ 'ಬಾಲಿವುಡ್‌' ನತ್ತ ಕಣ್ಣು ನೆಟ್ಟಿದೆ.

ಪಾಕ್‌ನ ನಿರ್ಮಾಪಕರು ಭಾರತದ ನಿರ್ಮಾಪಕರ ಜೊತೆ ಬಾಂಧವ್ಯ ಬೆಳೆಸಿ ಚಿತ್ರ ತಯಾರಿಸಲು ತಯಾರಾಗಿದ್ದಾರೆ. ಪಾಕ್‌ ನೆಲದಲ್ಲಿ ಇಂದಿಗೂ ಬಾಲಿವುಡ್‌ ತಾರೆಯರು ಖ್ಯಾತಿಯಲ್ಲಿ ಮುಂದು. ನೆಚ್ಚಿನ ಅಭಿನೇತ್ರಿಗಳನ್ನು ತಮ್ಮ ಚಿತ್ರಕ್ಕೆ ಕೊಂಡೊಯ್ಯುವ ಹಂಬಲ ಅವರದ್ದು .

ಈ ಕುರಿತು ಮಾತುಕತೆ ನಡೆಸಲು 25 ಮಂದಿಯನ್ನು ಒಳಗೊಂಡ ಪಾಕ್‌ನ ಮೊದಲ ನಿಯೋಗವೊಂದು ಫಿಕ್ಕಿ(ಭಾರತೀಯ ಕೈಗಾರಿಕಾ ಒಕ್ಕೂಟ) ಆಯೋಜಿಸಿದ FRAMES ನಲ್ಲಿ ಪಾಲ್ಗೊಂಡಿದೆ. ಬಾಲಿವುಡ್‌ನ 'ಬಡಾ' ವ್ಯಕ್ತಿಗಳೊಡನೆ ಮುಂದಿನ ಹೆಜ್ಜೆಯ ಕುರಿತು ನಕ್ಷೆ ಬರೆಯಲು ಚರ್ಚಿಸಿದೆ. ಭಾರತದ ಕಲಾವಿದರನ್ನು ಅತ್ತ ಸೆಳೆಯವ ಕುರಿತು ನಿರ್ಮಾಪಕರಾದ ಶ್ಯಾಮ್‌ ಶ್ರಾಪ್‌ ಮತ್ತು ಯಶ್‌ ಚೋಪ್ರ ಜೊತೆ ಒಪ್ಪಂದ ಮಾಡಿಕೊಂಡಿದೆ. ಸದ್ಯಕ್ಕೆ ಪಾಕಿಸ್ಥಾನದ ಅಧಿಕಾರಿ ವಲಯದ ಹಸಿರು ನಿಶಾನೆಗಾಗಿ ಕಾಯುತ್ತಿದೆ.

ಕಟ್‌ ಆಗಿದ್ದ ರೀಲ್‌ ಬೆಸೆಯುವ ಕಾಲ ಪಕ್ವವಾಗಿದೆ ಎಂಬುದು ಅವರ ನಂಬಿಕೆ. ಶ್ಯಾಮ್‌ ಶ್ರಾಪ್‌ ಜೊತೆ 'ಇಶಾನ್‌' ಚಿತ್ರ ವನ್ನು ನಿರ್ಮಿಸಲು ಪಾಕ್‌ ನಿರ್ಮಾಪಕ ಜಮ್‌ಶೆಡ್‌ ಜಾಫರ್‌ ಸಿದ್ಧತೆ ನಡೆಸಿದ್ದಾರೆ. ನಮ್ಮ ಚಿತ್ರಕ್ಕೆ ನಾಯಕಿ ಯಾರು ಎಂದು ನಿರ್ಧರಿಸಿಲ್ಲ. ಆದರೆ ಸೋನಾಲಿ ಬೇಂದ್ರೆ ಸೂಕ್ತವೆಂದು ಆಲೋಚಿಸಿದ್ದೇವೆ. ಲಂಡನ್‌ನಲ್ಲಿ ಚಿತ್ರೀಕರಣಗೊಳ್ಳುವ ಚಿತ್ರದಲ್ಲಿ ಪಾಕ್‌ ನಟಿ ಈಶಾನ್‌ ಪ್ರಮುಖ ಪಾತ್ರ ವಹಿಸಲಿದ್ದಾರೆ.

ಭಾರತೀಯ ಚಿತ್ರಗಳು ಅಲ್ಲಿ ತತೆರೆ ಕಾಣದಿದ್ದರೂ ಭಾರತೀಯ ಚಿತ್ರತಾರೆಗಳು ಬಹಳ ಪ್ರಸಿದ್ಧಿ ಪಡೆದಿದ್ದಾರೆ. ಸಿನಿಮಾ ನಕಲಿ ತಯಾರಿಸಿ ಚೌರ್ಯ ಮಡುವುದು ಹೆಚ್ಚಾಗಿ ನಡೆಯುತ್ತದೆ. ಆದ್ದರಿಂದ ಅವರು ಬಾಲಿವುಡ್‌ ಚಿತ್ರಗಳನ್ನೆ ನೋಡುತ್ತಾರೆ. ಇದು ಲಾಲಿವುಡ್‌ಗೆ ಬಹು ದೊಡ್ಡ ಹೊಡೆತವಾಗಿದೆ. ಬಾಲಿವುಡ್‌ ಚಿತ್ರವೊಂದಕ್ಕೆ 50 ಕೋಟಿ ವಿನಿಯೋಗಿಸಿದರೆ ನಾವು 1ರಿಂದ 1.5 ಕೋಟಿಯಷ್ಟೆ ಬಳಸುತ್ತೇವೆ.

ಪಾಕ್‌ಗೆ ತೆರಳಿದ ಬಳಿಕ ಈ ಕುರಿತು ಸರಕಾರದ ಅನುಮತಿ ಪಡೆದು 'ಬಾಲಿ-ಲಾಲಿ' ಸಿನಿಮಾ ರಂಗದಲ್ಲಿ ಹೊಸ ಅಧ್ಯಾಯ ಬರೆಯುವ ಆಶಯ ಹೊಂದಿದ್ದೇವೆ. ಎರಡು ದೇಶಗಳ ಮಧ್ಯದ ಮುಚ್ಚಿದ ಬಾಗಿಲು ಆ ಮೂಲಕ ತೆರೆಯಲಿದೆ. ಇಬ್ಬರ ಮಧ್ಯೆ ಮುಸುಕಿದ ಮಂಜು ಕರಗಲಿದೆ ಎಂದು ಆಶಿಸಿದರು.(ಪಿಟಿಐ)

English summary
Pakistan keen to rope in Indian films stars

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada