»   » ರಕ್ಷಿತಾ, ರಮ್ಯ, ರಾಧಿಕಾ: ಯಾರು ನಂ.1?

ರಕ್ಷಿತಾ, ರಮ್ಯ, ರಾಧಿಕಾ: ಯಾರು ನಂ.1?

Subscribe to Filmibeat Kannada

ಸ್ಯಾಂಡಲ್‌ವುಡ್‌ನಲ್ಲಿ ನಂ.1ಸ್ಥಾನಕ್ಕಾಗಿ ರಮ್ಯ ಮತ್ತು ರಕ್ಷಿತಾ ಸರ್ಕಸ್ಸು ಮಾಡುತ್ತಿದ್ದರೆ, ರಾಧಿಕಾ ಮತ್ತು ಧಾಮಿನಿ ಬಿಚ್ಚುವುದರಲ್ಲಿ ನಂ.1ಆಗಲು ಪ್ರಯಾಸ ಪಡುತ್ತಿದ್ದಾರೆ! ಹೀಗೆ ನೋಡಿದರೆ ‘ಕಲಾಸಿಪಾಳ್ಯ’ ಮತ್ತು ‘ಅಯ್ಯ’ ಚಿತ್ರದಲ್ಲಿ ರಕ್ಷಿತಾ ‘ಎದೆಗಾರಿಕೆ’ ಕಡಿಮೆಯೇನಲ್ಲ.

ಈ ಎರಡೂ ಚಿತ್ರಗಳು ಗೆಲ್ಲಲು ದರ್ಶನ್‌ಗಿಂತಲೂ ರಕ್ಷಿತಾ ಕಾಣಿಕೆಯೇ ಜಾಸ್ತಿ . ಈ ಮಾತನ್ನು ಸಾಬೀತುಪಡಿಸಲು ಪಡ್ಡೆ ಹುಡುಗರು ಪದೇಪದೇ ಚಿತ್ರಮಂದಿರಕ್ಕೆ ನುಗ್ಗುತ್ತಿದ್ದಾರಂತೆ! ಸ್ವಲ್ಪ ಡುಮ್ಮಿಯಾದಳು ರಕ್ಷಿತಾ ಎನ್ನುವಾಗಲೇ ಮೈಕರಗಿಸಿದ್ದ ರಕ್ಷಿತಾಗೆ ತೆಲುಗಿನಲ್ಲಿ ಮತ್ತೆ ಅವಕಾಶ ಸಿಕ್ಕಿದೆ. ಸರಿ ಆಕೆ ಮತ್ತೆ ಡುಮ್ಮಿಯಾಗುತ್ತಿದ್ದಾಳೆ. ಆಂಧ್ರ ಪ್ರೇಕ್ಷಕರಿಗೆ ಹಾಗಿದ್ದರೇನೇ ಚೆಂದವಂತೆ! ಆದಿ ಚಿತ್ರದ ನಂತರ ರಕ್ಷಿತಾ ಬ್ಯುಸಿಯಾಗಿದ್ದಾಳೆ.

ಇತ್ತ ಮೂಗನ್ನು ರಿಪೇರಿ(ಪ್ಲಾಸ್ಟಿಕ್‌ ಸರ್ಜರಿ ಮೂಲಕ)ಮಾಡಿಸಿಕೊಂಡಿರುವ ಕಿರಿಕ್‌ ಹುಡುಗಿ ರಮ್ಯ, ಉಪೇಂದ್ರ ನಾಯಕತ್ವದ ‘ಗೌರಮ್ಮ‘ ಚಿತ್ರದಲ್ಲಿ ಮಾಡ್ರನ್‌ ಗೌರಮ್ಮನಾಗಿ ನಟಿಸುತ್ತಿದ್ದಾಳೆ. ರಕ್ಷಿತಾ ಯಶಸ್ಸಿನಿಂದ ರಮ್ಯ ಕಂಗಾಲಾದಂತೆ ಕಂಡು ಬಂದರೂ, ನನಗೆ ನಾನೇ ಸಾಟಿ... ನನಗೆ ಪ್ರತಿಸ್ಪರ್ಧಿಯೇ ಇಲ್ಲ ಎನ್ನುತ್ತಿದ್ದಾಳೆ.

ಜೊತೆಗೆ ರಕ್ಷಿತಾ ಮತ್ತು ರಾಧಿಕಾ ಮೇಲೆ ಯುದ್ಧಕ್ಕೆ ನಿಂತಂತೆ ಮಾತನಾಡುವ ರಮ್ಯ, ಯಶಸ್ಸಿಗಾಗಿ ನಾನು ಏನನ್ನು ಬೇಕಾದರೂ ಮಾಡಲು ರೆಡಿ ಎಂದು ಘೋಷಿಸಿದ್ದಾಳೆ.

ಅದೆಲ್ಲಾ ಸರಿ, ಐಟಂ ಡ್ಯಾನ್ಸ್‌ ಸ್ಪೇಷಲಿಷ್ಟ್‌ ಭಾವನಾ ಎಲ್ಲಿ? ಈ ಪ್ರಶ್ನೆಗೆ ಗಾಂಧಿನಗರ ಕಿಸಕ್‌ ಅನ್ನುತ್ತಿದೆ. ಮುಂಬೈನ ಸ್ಟಾರ್‌ ಹೋಟೆಲ್‌ನಲ್ಲಿ ಸ್ವಾಗತಗಾರ್ತಿಯಾಗಿ ಆಕೆ ಸದ್ಯಕ್ಕೆ ಕೆಲಸಮಾಡುತ್ತಿದ್ದಾಳೆ ಎನ್ನುವ ಮಾತು ಕೇಳಿಬರುತ್ತಿದೆ. ಚಿತ್ರರಂಗದಲ್ಲಿ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ಕರಾವಳಿ ನಗುವಿನ ರಾಧಿಕಾ ‘ಗುಡ್‌ಲಕ್‌’ ಚಿತ್ರದಲ್ಲಿ ಮೈಮರೆತು ನಟಿಸಿದ್ದಾಳೆ.

ಎಕ್ಸ್‌ಪೋಸೋ ಅಥವಾ ಮಣ್ಣುಮಸಿಯೋ ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದರೆ ಸಾಕು ಎನ್ನುವ ಲೆಕ್ಕಾಚಾರ ನಮ್ಮ ನಿರ್ಮಾಪಕರಲ್ಲಿದೆ. ಕನ್ನಡದ ಹುಡುಗಿಯರು ತಾರಾಮೌಲ್ಯ ಉಳಿಸಿಕೊಳ್ಳಲು ಹೀಗೆಲ್ಲಾ ಬದಲಾದದ್ದನ್ನು ಕಂಡು ನಮ್ಮ ಎಂ.ಎಸ್‌.ಸತ್ಯು ತಲೆಕೆರೆದುಕೊಳ್ಳುತ್ತಿರಬಹುದು!

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada