»   » ಅಭಿಜಾತ ಕಲಾವಿದೆ ಬಿ. ಸರೋಜದೇವಿಗೆ, ಪ್ರೀತಿಯಿಂದ

ಅಭಿಜಾತ ಕಲಾವಿದೆ ಬಿ. ಸರೋಜದೇವಿಗೆ, ಪ್ರೀತಿಯಿಂದ

Subscribe to Filmibeat Kannada


ಇತ್ತೀಚೆಗೆ ಸಿಂಗಪುರದ ತಮಿಳಿನ ದೂರವಾಹಿನಿ ವಸಂತಂ ಸೆಂಟ್ರಲ್‌ನಲ್ಲಿ ಬಿ. ಸರೋಜಾದೇವಿ ಅವರ ಹಿಂದೆ ಸಿಂಗಪುರಕ್ಕೆ ಭೇಟಿ ಇತ್ತ ಸಂದರ್ಭದಲ್ಲಿ ನಡೆಸಿದ ಪೆಣ್‌(ಹೆಣ್ಣು) ಎಂಬ ಕಾರ್ಯಕ್ರಮ ಸಂದರ್ಶನ ಮರುಪ್ರಸಾರಗೊಂಡಿತು.

ತಮ್ಮ ಸಿನಿ ಜೀವನದ ಕೆಲವು ಅನುಭವಗಳನ್ನು ಅವರು ನಮ್ಮೊಂದಿಗೆ ಹಂಚಿಕೊಂಡದ್ದು ಹೀಗೆ..ಶಿವಾಜಿಯಾಂದಿಗೆ ನಟಿಸಿದ ಒಂದು ಚಿತ್ರದಲ್ಲಿ ‘ಶಿವಾಜಿ ತನ್ನನ್ನು ಮದುವೆ ಆಗುತ್ತೀಯ ಎನ್ನುತ್ತಾರೆ’ ನಾನು ಅವರನ್ನು ಒಲ್ಲೆ ಎನ್ನುತ್ತೇನೆ. ತಕ್ಷಣ ಸೆಟೆದು ನಿಂತ ಅವರು ‘ಏನ್‌, ಎನಕ್‌ ಅಯಹ್‌ ಇಲ್ಲೆಯಾ, ಅಂತಸ್ತ್‌ ಇಲ್ಲೆಯಾ, ಪೇರ್‌ ಇಲ್ಲೆಯಾ, ಪಡಿಪಿಲ್ಲೆಯಾ (ಏಕೆ, ನನಗೇನು ರೂಪವಿಲ್ಲವೇ, ಅಂತಸ್ತಿಲ್ಲವೇ, ವಿದ್ಯೆಯಿಲ್ಲವೇ, ಹೆಸರಿಲ್ಲವೇ) ಎನ್ನುತ್ತಾರೆ. ಈ ಮಾತನ್ನು ಕೇಳಿ ಆಕೆ ಅಂತಹಾ ಮೇರುನಟನನ್ನು ಚಿತ್ರದಲ್ಲಿ, ನಟನೆಯಲ್ಲಿ ಮದುವೆಯಾಗಲೊಲ್ಲೆ ಎಂದು ಹೇಳಲು ಬಹಳ ಕಷ್ಟ ಎಂದು ನಿರ್ದೇಶಕರ ಬಳಿ ಅತ್ತರಂತೆ.

ರಾಜ್‌ಕಪೂರನ ಸಂಗಮ್‌ ಚಿತ್ರಕ್ಕೆ ಮೊದಲ ಆಯ್ಕೆ ಬಿ. ಸರೋಜಾದೇವಿ. ಆದರೆ ‘ಬೋಲ್‌ ರಾಧ ಬೋಲ್‌ ಸಂಗಮ್‌ ಹೋತಾ ಹೈ ನಹೀ’ ಹಾಗೂ ‘ಮೈ ಕ್ಯಾಕರು ರಾಮ್‌ ಮುಜೆ ಬುಡ್ಡಾ ಮಿಲ್‌ಗಯಾ’ ಹಾಡಿಗೆ ಈಜುಡುಗೆ, ಬಿಕನಿ ತೊಡಲು ನಿರಾಕರಿಸಿದ ಕಾರಣ ನಾಯಕಿಯ ಪಟ್ಟ ವೈಜಯಂತಿಮಾಲಾ ಪಾಲಾಯ್ತೆಂದೂ ಇದರ ಬಗ್ಗೆ ಮೇರುನಟ ರಾಜ್‌ಕಪೂರ್‌ ಜೊತೆ ನಟಿಸುವ ಅವಕಾಶ ಕೈ ತಪ್ಪಿತಲ್ಲಾ ಎಂಬ ನೋವು ಕೆಲವು ದಿನ ಅವರಿಗೆ ಕಾಡಿತಂತೆ.

ಇದೇ ಸಂದರ್ಭದಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಕರುಣಾಕರನ್‌ ಅವರು ಸರೋಜದೇವಿಯವರನ್ನು ಉದ್ದೇಶಿಸುತ್ತಾ ‘ಅಂದಿನ ದಿನಗಳಲ್ಲಿ ಕನ್ನಡದ ಮುದ್ದಿನ ಗಿಳಿಯಾಂದು ತಮಿಳು ಚಿತ್ರಗಳಲ್ಲಿ ನಟಿಸಿ, ತನ್ನ ಕಲೆಯ ಮೂಲಕ ಹೆಸರು, ಹಣ, ನಟನಾ ನೈಪುಣ್ಯತೆಯಿಂದ ಪದ್ಮಶ್ರೀ, ಪದ್ಮಭೂಷಣ ಬಿರುದು ಪಡೆದಿರುವುದು ಬಹಳ ಹೆಮ್ಮೆಯ ವಿಷಯ. ನಾಡೋಡಿ ಮನ್ನನ್‌ ಎಂಬ ಚಿತ್ರದಲ್ಲಿ ಈಕೆಯನ್ನು ಎಂ.ಜಿ. ಆರ್‌ ಅವರೊಡನೆ ಮೊದಲು ಕಂಡಾಗ ಪದ್ಮಿನಿ, ವೈಜಯಂತಿಮಾಲರ ಸಂಬಂಧಿ ಎನಿಸಿತು. ರೂಪಕ್ಕೆ, ನಾಟ್ಯಕ್ಕೆ, ನಟನೆಗೆ ಹೆಸರಾಗಿದ್ದ ಅವರಂತೆಯೇ ಈಕೆಯೂ ಕಲಾರಸಿಕರಿಗೆ ಉತ್ತಮ ನಟನೆಯನ್ನು ನೀಡಿ ಚಿತ್ರರಂಗದಲ್ಲಿ ಖ್ಯಾತಿ ಪಡೆದಿದ್ದಾಳೆ ಎಂದರು.

ಇಂದು ಕಿರು ತೆರೆಯಲ್ಲಿ ಕಾಣುತ್ತಿದ್ದ ಸರೋಜಾ ದೇವಿಯವರಿಗೆ ವಯಸ್ಸು ಕಾಣುತ್ತಿತ್ತು, ಮೈ ಸ್ಥೂಲವಾಗಿತ್ತು, ಮುಖ ಸ್ವಲ್ಪ ಸುಕ್ಕುಗಟ್ಟಿತ್ತು. ಆದರೂ ಅವರ ರೂಪ, ಮಾತಿನ ವೈಖರಿ, ನಗು, ಭಾವ ಸ್ವಲ್ಪವೂ ಮಾಸಿರಲಿಲ್ಲ. ನಿಲ್ಲು ನೀ ನಿಲ್ಲು ನೀ ನೀಲವೇಣಿ, ಚೆಲುವಾಂತ ಚೆನ್ನಿಗನೆ ನಲಿದಾಡು ಬಾ, ಕಾಳಿದಾಸನ ಕಾವ್ಯ ಲಹರಿಗೆ ಕಾರಣ ಹೆಣ್ಣಿನ ಅಂದ.. ಹಾಡುಗಳು ಸ್ಮೃತಿಮತ್ತೆ ತೇಲಿಬಂದವು. ಮತ್ತೆ ಕಿವಿಯಲಿ ಮಾರ್ದನಿಸಿತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada