»   » ಐಶ್ವರ್ಯಾ ರೈ ಲಂಡನ್‌ಗೆ ವಲಸೆ ?

ಐಶ್ವರ್ಯಾ ರೈ ಲಂಡನ್‌ಗೆ ವಲಸೆ ?

Posted By:
Subscribe to Filmibeat Kannada
  • ದಟ್ಸ್‌ಕನ್ನಡ ಡೆಸ್ಕ್‌
ಸುರಸುಂದರಿ ಐಶ್ವರ್ಯಾ ರೈ ಇಂಗ್ಲೆಂಡ್‌ಗೆ ವಲಸೆ ಹೋಗುತ್ತಾರಾ?

ಬ್ರಿಟನ್ನಿನ ಸ್ಥಳೀಯ ದೈನಿಕವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ , ಲಂಡನ್‌ನಲ್ಲಿ ನೆಲೆಸುವ ಚಿಂತನೆ ಹೊಂದಿರುವುದಾಗಿ ಐಶ್ವರ್ಯಾ ತಿಳಿಸಿದ್ದಾರೆ. ಹೃತಿಕ್‌ ರೋಷನ್‌, ಲಾರಾ ದತ್ತ ಹಾಗೂ ಸೆಲೀನಾ ಜೇಟ್ಲಿ ಅವರೊಂದಿಗೆ ಬರ್ಮಿಂಗ್‌ಹ್ಯಾಂ, ಮ್ಯಾಂಚೆಸ್ಟರ್‌, ಲಂಡನ್‌, ಮುಂತಾದೆಡೆ ನೀಡುತ್ತಿರುವ ತಾರಾ ಪ್ರದರ್ಶನದ ಸಂದರ್ಭದಲ್ಲಿ ರೈ ಈ ಸಂದರ್ಶನ ನೀಡಿದ್ದಾರೆ.

ನನ್ನ ಭವಿಷ್ಯ ಎತ್ತ ಒಯ್ಯುತ್ತದೋ ಅತ್ತ ಸಾಗಲು ನಿರ್ಧರಿಸಿದ್ದೇನೆ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಲಂಡನ್‌ನಲ್ಲಿ ನೆಲೆಸುವ ವಿಷಯವೂ ಪರಿಗಣನೆಯಲ್ಲಿದೆ. ಈ ಕುರಿತು ನಾನು ಮುಕ್ತ ಮನಸ್ಸು ಹೊಂದಿದ್ದೇನೆ. ವಿದೇಶಗಳಲ್ಲಿ ಕೆಲಸ ಮಾಡುವುದು ಹಾಗೂ ನೆಲೆಸಲಿಕ್ಕೆ ಅಡ್ಡಿಯೇನೂ ಇಲ್ಲ . ಇತ್ತೀಚೆಗಂತೂ ಕಾರ್ಯಕಾರಣ ವಿದೇಶಗಳಲ್ಲೇ ಹೆಚ್ಚಿನ ಸಮಯ ಕಳೆಯುವಂತಾಗಿದೆ ಎಂದು ಐಶ್ವರ್ಯಾ ಹೇಳಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಅನೇಕ ಅಂತರರಾಷ್ಟ್ರೀಯ ಯೋಜನೆಗಳಲ್ಲಿ ಭಾಗಹಿಸಲು ಆಹ್ವಾನ ಬಂದಿದೆ. ಅವುಗಳನ್ನು ಪರಿಶೀಲಿಸುತ್ತಿದ್ದೇನೆ. ಜೇಮ್ಸ್‌ಬಾಂಡ್‌ ಚಿತ್ರ ಈಗಾಗಲೇ ಪಕ್ಕಾ ಆಗಿದೆ ಎಂದು ರೈ ಸಂದರ್ಶನದಲ್ಲಿ ತಿಳಿಸಿದ್ದಾರೆ. ನಟ ವಿವೇಕ್‌ ಒಬೇರಾಯ್‌ ಜೊತೆಗಿನ ತಮ್ಮ ಪ್ರೇಮದ ಗುಲ್ಲಿನ ಕುರಿತು ಪ್ರತಿಕ್ರಿಯಿಸಿರುವ ಐಶ್ವರ್ಯಾ- ಇದೊಂದು ಖಾಸಗಿ ಸಮಾಚಾರ. ನಾನು ಇಷ್ಟು ಮಾತ್ರ ಹೇಳಬಲ್ಲೆ . ಪ್ರೇಮದಲ್ಲಿ ನನಗೆ ನಂಬಿಕೆಯಿದೆ. ನನ್ನ ಪ್ರೇಮ ಈ ಜಮಾನದ ಇತರ ಹುಡುಗಿಯರಂತೆಯೇ ಇದೆ.

*

ಸಂದರ್ಶನದಲ್ಲಿನ ವಿಷಯಗಳನ್ನು ನಂಬುವುದಾದರೆ ಐಶ್ವಯಾ ರೈ ಲಂಡನ್‌ಗೆ ಹಾರುವುದು ಖಚಿತವಾ? ಖಚಿತ ಉತ್ತರ ಹೇಳುವುದು ಕಷ್ಟ . ಆದರೆ, ಕೇನ್ಸ್‌ ಚಿತ್ರೋತ್ಸವ ಸೇರಿದಂತೆ ಅನೇಕ ಅಂತರರಾಷ್ಟ್ರೀಯ ಚಿತ್ರೋತ್ಸವಗಳು ಹಾಗೂ ಪ್ರದರ್ಶನಗಳಿಗೆ ಕೇಂದ್ರವಾಗಿರುವ ಲಂಡನ್‌ ಅಂತರರಾಷ್ಟ್ರೀಯ ಖ್ಯಾತಿಯ ಕಲಾವಿದರನ್ನು ಆಕರ್ಷಿಸುತ್ತಿದೆ.

ಹಾಲಿವುಡ್‌ನ ಮಡೋನಾ ಅಂಥವರಿಗೂ ಲಂಡನ್‌ ಆಯ್ಕೆಯ ಕೇಂದ್ರವಾಗಿದೆ. ಈ ಹಿನ್ನೆಲೆಯಲ್ಲಿ ಐಶ್ವರ್ಯಾ ವಲಸೆ ಹೋದರೂ ಆಶ್ಚರ್ಯವಿಲ್ಲ . ಎಷ್ಟೇ ಆಗಲಿ ಆಕೆ ವಿಶ್ವ ಸುಂದರಿಯಲ್ಲವೇ ? ವಿಶ್ವ ಸುಂದರಿಯರಿಗೆಲ್ಲಿಯದು ಭೇದಭಾವ ?

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada