»   » ಡಾ.ರಾಜ್‌ ಹುಟ್ಟುಹಬ್ಬದಂದು ವಯೋವೃದ್ಧರಿಗೆ ವಸ್ತ್ರ ವಿತರಣೆ

ಡಾ.ರಾಜ್‌ ಹುಟ್ಟುಹಬ್ಬದಂದು ವಯೋವೃದ್ಧರಿಗೆ ವಸ್ತ್ರ ವಿತರಣೆ

Posted By: Staff
Subscribe to Filmibeat Kannada

ಪುನಿತ್‌ ರಾಜ್‌ ಕುಮಾರ್‌ ಹುಟ್ಟುಹಬ್ಬದ ದಿನದಂದು ರಾಶಿರಾಪು ಅಭಿಮಾನಿಗಳ ಸಂಘದವರು ಅನ್ನ ಸಂತರ್ಪಣೆ ವಿಶೇಷ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದರು. ಇದೀಗ ಏಪ್ರಿಲ್‌ 24 ರಂದು ವರನಟ, ಪದ್ಮಭೂಷಣ ಡಾ. ರಾಜ್‌ ಕುಮಾರ್‌ ಅವರ ಜನ್ಮದಿನ.

ಡಾ. ರಾಜ್‌ ಕುಮಾರ್‌ ಹುಟ್ಟುಹಬ್ಬದ ದಿನದಂದು ಅಖಿಲ ಕರ್ನಟಕ ಶಿವರಾಜ್‌ ಕುಮಾರ್‌ ಸೇನಾ ಸಮಿತಿಯು ಮಹಾಲಕ್ಷ್ಮೀಪುರದ ವಯೋವೃದ್ಧರಿಗೆ ಹೊದಿಕೆ ಮತ್ತು ಉಡುಪು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ರಾಜ್‌ ಕುಮಾರ್‌ ಅವರ ಕಿರಿಯ ಮತ್ತು ಮುದ್ದಿನ ಮಗ ಪುನಿತ್‌ ರಾಜ್‌ ಕುಮಾರ್‌ ಅಂದು ಸಂಜೆ 4 ಗಂಟೆಗೆ ವಹಾಲಕ್ಷ್ಮೀಪುರದ ತುಂಗಭದ್ರಾ ವೃದ್ಧಾಶ್ರಮದಲ್ಲಿನ ವೃದ್ಧರಿಗೆ ವಿತರಣೆ ಮಾಡಲಿದ್ದಾರೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಟಿ ನಾರಾಯಣ್‌ ತಿಳಿಸಿದ್ದಾರೆ.

ರಾಜ್‌ ಅಭಿಮಾನಿಗಳೆಲ್ಲ ಸೇರಿಬಿಟ್ಟರೆ ಅಭಿಮಾನಿ ಮಹಾಪೂರವೇ ಆದೀತು. ಇನ್ನೂ ಲಕ್ನೋದ ಸೀರೆ ವಿತರಣೆಯ ಕಾರ್ಯಕ್ರಮದಿಂದಾದ ಸಾವು ನೋವಿನ ಆರ್ತನಾದ, ಪ್ರತಿಭಟನೆಯ ಕಾವಾರಿಲ್ಲ. ಹೀಗಾಗಿ ಸಂಘಟಕರು ಮುಂಜಾಗ್ರತಾ ಕ್ರಮ ವಹಿಸಿ ರಾಜ್‌ ಹುಟ್ಟುಹಬ್ಬವನ್ನು ಯಶಸ್ವಿಯಾಗಿ ಆಚರಿಸುವಲ್ಲಿ ಸಫಲವಾಗಲಿ ಎಂದು ರಾಜ್‌ ಅಭಿಮಾನಿಗಳ ಪರವಾಗಿ ಆಶಿಸುತ್ತೇವೆ.

English summary
Dr Raj birthday : cloth distribution to the poor and needy
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada