For Quick Alerts
  ALLOW NOTIFICATIONS  
  For Daily Alerts

  ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ರಾಜ್‌ಗೆ ಶ್ರದ್ಧಾಂಜಲಿ

  By Staff
  |

  ಬೆಂಗಳೂರು : ಡಾ.ರಾಜ್‌ ನಿಧನಕ್ಕೆ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬುಧವಾರ ನುಡಿನಮನ ಹಾಗೂ ಶ್ರದ್ಧಾಂಜಲಿ ಸಲ್ಲಿಸಲಿದೆ.

  ಸಂಜೆ 6.30ಕ್ಕೆ ಆರಂಭವಾಗುವ ಕಾರ್ಯಕ್ರಮದಲ್ಲಿ ಚಿತ್ರರಂಗದ ಹಿರಿ ಕಿರಿಯ ನಟ-ನಟಿಯರು, ತಂತ್ರಜ್ಞರು, ಕಾರ್ಮಿಕರು, ರಾಜ್‌ ಕುಟುಂಬ ವರ್ಗ, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಅಪಾರ ಅಭಿಮಾನಿಗಳು ಭಾಗವಹಿಸಲಿದ್ದಾರೆ.

  ಈ ಸಂದರ್ಭದಲ್ಲಿ ರಾಜ್‌ ಒಡನಾಡಿಗಳು ತಮ್ಮ ನೆನಪಿನ ಬುತ್ತಿ ಬಿಚ್ಚಿಡುವರು. ವಿವಿಧ ಗಾಯಕರು ಡಾ.ರಾಜ್‌ರ ಚಲನಚಿತ್ರಗೀತೆಗಳು ಹಾಗೂ ಭಕ್ತಿಗೀತೆಗಳನ್ನು ಹಾಡುವರು. ಅಲ್ಲದೆ ರಾಜ್‌ ಅಭಿನಯದ ಚಿತ್ರಗಳ ಆಯ್ದ ದೃಶ್ಯಾವಳಿಗಳನ್ನು ಪ್ರದರ್ಶಿಸಲಾಗುವುದು.

  ಸುಮಾರು 15 ಸಾವಿರ ಜನ ಸೇರಬಹುದೆಂದು ನಿರೀಕ್ಷಿಸಲಾಗಿದ್ದು, ಈ ಸಂಖ್ಯೆ ಎರಡು ಪಟ್ಟಾಗಬಹುದುದೆಂಬ ಸಂಶಯವೂ ವ್ಯಕ್ತವಾಗಿದೆ. ಕಾರ್ಯಕ್ರಮದಲ್ಲಿ ಶಿಸ್ತು ಕಾಪಾಡಲು ಸುಮಾರು ಐದು ಸಾವಿರ ಪೊಲೀಸರನ್ನು ನೇಮಿಸಲಾಗಿದೆ.

  (ದಟ್ಸ್‌ ಕನ್ನಡ ವಾರ್ತೆ)

  Post your views

  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X