»   » ‘ಅಣ್ಣಾವ್ರ ಕ್ಯಾಸೆಟ್‌ ಹಾಕದ್ದಕ್ಕೆ ನನ್ನ ನಾಲಿಗೆ ಕತ್ತರಿಸಿದರು’

‘ಅಣ್ಣಾವ್ರ ಕ್ಯಾಸೆಟ್‌ ಹಾಕದ್ದಕ್ಕೆ ನನ್ನ ನಾಲಿಗೆ ಕತ್ತರಿಸಿದರು’

Posted By:
Subscribe to Filmibeat Kannada

ಬೆಂಗಳೂರು : ರಾಜ್‌ಕುಮಾರ್‌ ನಿಧನದ ನಂತರ ಸಂಭವಿಸಿದ ಅತಿರೇಕ ಇನ್ನೂ ಜನರ ಮನಸ್ಸಿನಲ್ಲಿ ಹಸಿಯಾಗಿದೆ. ಈ ಮಧ್ಯೆ ರಾಜ್‌ ಮೇಲಿನ ಅಭಿಮಾನದ ನೆಪದಲ್ಲಿ ಕಿಡಿಗೇಡಿಗಳು, ವ್ಯಕ್ತಿಯಾಬ್ಬನ ನಾಲಿಗೆ ಕತ್ತರಿಸಿದ ಅಮಾನುಷ ಘಟನೆ ಬೆಳಕಿಗೆ ಬಂದಿದೆ.

ನಗರದ ಗೊರಗುಂಟೆಪಾಳ್ಯದಲ್ಲಿ ಏಪ್ರಿಲ್‌ 17ರಂದು ಈ ಘಟನೆ ನಡೆದಿದ್ದು, ಎನ್‌.ಎಂ.ಮಂಜುನಾಥ್‌ ಎಂಬುವವನೇ ಈ ಕೃತ್ಯಕ್ಕೆ ಬಲಿಯಾದ ದುರ್ದೈವಿ.

ಘಟನೆ ವಿವರ : ಶಿರಾ ತಾಲ್ಲೂಕು ನಿಡಗಟ್ಟೆ ಗ್ರಾಮದ ಮಂಜುನಾಥ ಲಾರಿಯಾಂದರ ಕ್ಲೀನರ್‌. ಲಾರಿಯಲ್ಲಿ ಅಂದು ಹಾಡು ಕೇಳುತ್ತಾ ಕುಳಿತಿದ್ದ ಈತನೆಡೆಗೆ ಬಂದ ಅಪರಿಚಿತರು, ರಾಜ್‌ಕುಮಾರ್‌ ಹಾಡು ಹಾಕು ಎಂದು ಗದರಿಸಿದ್ದಾರೆ. ರಾಜ್‌ಕುಮಾರ್‌ ಕ್ಯಾಸೆಟ್‌ ಇಲ್ಲ ಎಂದಿದ್ದಕ್ಕೆ ಬಲವಾಗಿ ಹೊಡೆದು, ಅರೆಪ್ರಜ್ಞಾವಸ್ಥೆಯಲ್ಲಿದ್ದ ಮಂಜುನಾಥನನ್ನು ಎತ್ತಲೋ ಎತ್ತಿಕೊಂಡು ಹೋಗಿದ್ದಾರೆ. ಅಲ್ಲಿ ಚಾಕುವಿನಿಂದ ಅವನ ನಾಲಿಗೆ ತುದಿ ಕತ್ತರಿಸಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಂಜುನಾಥ್‌ ಪೊಲೀಸರಿಗೆ ದೂರು ಸಲ್ಲಿಸಿದ್ದು, ತನಿಖೆ ಮುಂದುವರಿದಿದೆ. ಅಭಿಮಾನದ ಹೆಸರಿನಲ್ಲಿ ನಡೆಯುವ ಇಂತಹ ಅತಿರೇಕಗಳಿಗೆ ಕೊನೆ ಯಾವಾಗ ಎಂಬುದು ಪ್ರಜ್ಞಾವಂತರ ಚಿಂತೆ.

(ದಟ್ಸ್‌ ಕನ್ನಡ ವಾರ್ತೆ)

Post your views

ಮುಖಪುಟ / ಸ್ಯಾಂಡಲ್‌ವುಡ್‌

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada