»   » ‘ಅಪ್ಪು’ ಜೊತೆ ನಟಿಸುವುದು ಪವನ್‌ ಕಲ್ಯಾಣ್‌ ಹಂಬಲ!

‘ಅಪ್ಪು’ ಜೊತೆ ನಟಿಸುವುದು ಪವನ್‌ ಕಲ್ಯಾಣ್‌ ಹಂಬಲ!

Subscribe to Filmibeat Kannada


ಕನ್ನಡ ‘ಪವರ್‌ ಸ್ಟಾರ್‌’ ಮತ್ತು ತೆಲುಗಿನ ‘ಪವರ್‌ ಸ್ಟಾರ್‌’ ಒಂದೆಡೆ ಸೇರಿದರೆ ಏನಾಗುತ್ತದೆ? -ಮಸ್ತು ಮಸ್ತು ಸಿನಿಮಾ ಆಗುತ್ತದೆ! ಎಲ್ಲವೂ ಕೂಡಿ ಬಂದರೆ ಆ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ!

ಲಕ್ಷಾಂತರ ಅಭಿಮಾನಿಗಳಿಂದ ‘ಪವರ್‌ ಸ್ಟಾರ್‌’ ಎಂದು ಕರೆಸಿಕೊಳ್ಳುವ ತೆಲುಗಿನ ಪವನ್‌ ಕಲ್ಯಾಣ್‌ಗೆ, ಕನ್ನಡ ಸಿನಿಮಾಗಳಲ್ಲಿ ಅಭಿನಯಿಸುವುದು ಮಹತ್ವಾಕಾಂಕ್ಷೆ. ಅದರಲ್ಲೂ ಪವರ್‌ ಸ್ಟಾರ್‌ ಪುನೀತ್‌ ಜೊತೆ ನಟಿಸುವ ಬಯಕೆ ಮೊದಲಿನಿಂದಲೂ ಇದೆಯಂತೆ. ಈ ವಿಷಯವನ್ನು ಅವರು ಇತ್ತೀಚೆಗೆ ಮಾಧ್ಯಮಗಳ ಮುಂದೆ ವ್ಯಕ್ತಪಡಿಸಿದ್ದಾರೆ. ದುಡ್ಡಿರುವ ನಿರ್ಮಾಪಕರು ಈ ಕಾಂಬಿನೇಷನ್‌ ನಂಬಿ ಹಣ ಸುರಿಯಬಹುದು.

ಇತ್ತೀಚೆಗಷ್ಟೇ ಪವನ್‌ ಕಲ್ಯಾಣ್‌ ಮತ್ತು ಅವರ ಸಹೋದರ ನಟ ಮತ್ತು ನಿರ್ಮಾಪಕ ನಾಗೇಂದ್ರ ಬಾಬು, ರಾಜ್‌ ಸಮಾಧಿಗೆ ಭೇಟಿ ನೀಡಿದ್ದರು. ನಂತರ ಸದಾಶಿವನಗರದಲ್ಲಿರುವ ರಾಜ್‌ ನಿವಾಸಕ್ಕೆ ತೆರಳಿ, ರಾಜ್‌ ಪರಿವಾರವನ್ನು ಭೇಟಿ ಮಾಡಿದ್ದರು. ರಾಜ್‌ ಬಗ್ಗೆ ಪವನ್‌ಗೆ ಅಪಾರ ಅಭಿಮಾನ.

ತೆಲುಗಿನಲ್ಲಿ ಸಕತ್ತು ಹೆಸರು ಮಾಡಿರುವ ಪವನ್‌ ಕಲ್ಯಾಣ್‌ ಕಣ್ಣು, ಸ್ಯಾಂಡಲ್‌ವುಡ್‌ ಮೇಲೆ ಬಿದ್ದಿದೆ. ಅಂದ ಹಾಗೇ, ಅವರ ಸಹೋದರರಾದ ಚಿರಂಜೀವಿ ಮತ್ತು ನಾಗೇಂದ್ರ ಬಾಬು, ಈಗಾಗಲೇ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಪವನ್‌ರ ಹಿರಿಯಣ್ಣ ಚಿರಂಜೀವಿ, ರವಿಚಂದ್ರನ್‌ ಜೊತೆ ‘ಸಿಪಾಯಿ’ಯಲ್ಲಿ ನಟಿಸಿದ್ದಾರೆ. ಅಲ್ಲದೇ ‘ಶ್ರೀಮಂಜುನಾಥ’ ಚಿತ್ರದಲ್ಲಿ ಶಿವನ ಪಾತ್ರವನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ನಿರ್ದೇಶಕರು ಕೆ.ರಾಘವೇಂದ್ರ ರಾವ್‌.

ಇನ್ನು ಪವನ್‌ರ ಇನ್ನೊಬ್ಬ ಸಹೋದರ ನಾಗೇಂದ್ರ ಬಾಬು ‘ಹಬ್ಬ’ ಚಿತ್ರದಲ್ಲಿ ಖಳನಾಯಕ ಪಾತ್ರದಲ್ಲಿ ಮಿಂಚಿದ್ದರು.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada