»   » ಜಮೀನ್ದಾರ್ರು ಮೀಸೆಗೆ ನೆರೆ ಹೊರೆಯಿಂದ ಭಾರೀ ಬೇಡಿಕೆ

ಜಮೀನ್ದಾರ್ರು ಮೀಸೆಗೆ ನೆರೆ ಹೊರೆಯಿಂದ ಭಾರೀ ಬೇಡಿಕೆ

Posted By: Staff
Subscribe to Filmibeat Kannada

ರಿಮೇಕ್‌ ಹಕ್ಕಿಗಾಗಿ ತೆಲುಗು ಹಾಗೂ ತಮಿಳು ನಿರ್ಮಾಪಕರು ಬೆನ್ನು ಬಿದ್ದಿದ್ದಾರೆ. ತಮಿಳಿಗೆ 18 ಲಕ್ಷ ರುಪಾಯಿಗೆ ಚಿತ್ರದ ಹಕ್ಕು ಮಾರಾಟವಾಗಿದೆ ಎಂದು ಖುಷಿಯಲ್ಲಿ ಹೇಳುತ್ತಿದ್ದಾರೆ ನಿರ್ಮಾಪಕ ಮಂಜು, ಮೀಸೆಯಡಿಯಲ್ಲಿ ನಗುತ್ತಾ .

ಜಮೀನ್ದಾರ್ರು ಚಿತ್ರ ನೋಡಿದ ತಮಿಳು ನಿರ್ಮಾಪಕರು ಬೆಟ್ಟಪ್ಪನ ಪಾತ್ರವನ್ನು ತುಂಬಾನೇ ಇಷ್ಟ ಪಟ್ಟಿದ್ದಾರೆ. ತಮಿಳು ಅವತರಣಿಕೆಯನ್ನು ನಿರ್ಮಿಸಲು ಸ್ವತಃ ಮಂಜು ಅವರಿಗೆ ಆಸಕ್ತಿಯಿದ್ದರೂ, ತಮಿಳಿನ ನಿರ್ಮಾಪಕರು ಪಟ್ಟು ಹಿಡಿದಿದ್ದರಿಂದ ತಮ್ಮ ಪಟ್ಟು ಸಡಿಲಿಸಬೇಕಾಯಿತು ಎನ್ನುತ್ತಾರೆ. ತಮಿಳಿಗೆ ರೀಮೇಕ್‌ ಪಡೆದಿರುವ ರವಿರಾಜ್‌ ಪಿಂಶೆಟ್ಟಿ 'ನಾಟ್ಟಾಮೈ" ಚಿತ್ರ ನಿರ್ದೇಶಿಸಿದ ಖ್ಯಾತಿಯ ನಿರ್ದೇಶಕ. ವಿಷ್ಣು ಪಾತ್ರವನ್ನು ತಮಿಳಿನಲ್ಲಿ ವಿಜಯಕಾಂತ್‌ ನಿರ್ವಹಿಸುವ ನಿರೀಕ್ಷೆಯಿದೆ.

ಮೂರ್ನಾಲ್ಕು ತೆಲುಗು ನಿರ್ಮಾಪಕರು ಕೂಡ ಜಮೀನ್ದಾರ್ರು ಹಕ್ಕಿಗಾಗಿ ಮಂಜುವನ್ನು ಕಾಡುತ್ತಿದ್ದಾರಂತೆ. ತೆಲುಗಿನಲ್ಲಿ ಡಾ.ರಾಜಶೇಖರ್‌ ಅಥವಾ ಮೋಹನ್‌ಬಾಬು ಜಮೀನ್ದಾರ್ರು ಆಗಿ ಮೀಸೆ ಹೊರಬಹುದು. ಈ ನಡುವೆ ತೆಲುಗಿನ 'ಆದಿ" ಚಿತ್ರದ ನಿರ್ಮಾಪಕರು ಕೂಡ ಜಮೀನ್ದಾರ್ರು ಹಕ್ಕು ಪಡೆಯಲು ಆಸಕ್ತಿ ತೋರಿದ್ದಾರೆ. ವ್ಯಾಪಾರ ಇನ್ನೂ ಕುದುರಿಲ್ಲ .

ಇದಿಷ್ಟೂ ರಿಮೇಕ್‌ ಕಥೆಯಾದರೆ- ಕರ್ನಾಟಕದಲ್ಲಿ ಜಮೀನ್ದಾರ್ರು ದಿನೇದಿನೇ ಜನಪ್ರಿಯತೆ ಕುದುರಿಸಿಕೊಳ್ಳುತ್ತಿರುವ ಕುರಿತು ಮಂಜುಗೆ ಅಪಾರ ಸಂತೋಷ. ಹುಬ್ಬಳ್ಳಿ, ತುಮಕೂರು, ಮೈಸೂರಿನಲ್ಲಿ ಜಮೀನ್ದಾರ್ರು ಯಶಸ್ವಿಯಾಗಿದೆ. ಎಚ್‌ಟುಒ ಹಾಗೂ ಏಕಾಂಗಿ ಸ್ಪರ್ಧೆಯ ನಡುವೆಯೂ ಜಮೀನ್ದಾರ್ರು ಯಶಸ್ಸು ಗಮನಾರ್ಹ ಎನ್ನುತ್ತಾರೆ ಮಂಜು. ಈ ನಡುವೆ ಮೀಸೆ ಸರಣಿಯ ಹೊಸ ಚಿತ್ರ 'ಸಿಂಹಾದ್ರಿಯ ಸಿಂಹ" ತೆರೆಗಪ್ಪಳಿಸಲು ಸಜ್ಜಾಗಿದೆ.

English summary
Kannada Film world : Jamindarru remake rights sold to Tamil and Telugu
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada