ಜೂನ್ 1ನೇ ತಾರೀಕು ಬೆಂಗಳೂರಲ್ಲಿ ರಿಸಪ್ಷನ್
ಧರ್ಮಸ್ಥಳ : ಕನ್ನಡ ಚಲನಚಿತ್ರ ರಂಗದ ಉದಯೋನ್ಮುಖ ನಟ ದರ್ಶನ್ ತೂಗುದೀಪ ಸೋಮವಾರ (ಮೇ 19) ಇಲ್ಲಿನ ಮಂಜುನಾಥ ದೇವರ ಸನ್ನಿಧಿಯಲ್ಲಿ ವಿಜಯಲಕ್ಷ್ಮಿ ಎಂಬಾಕೆಯ ಕೈ ಹಿಡಿದರು.
ಬೆಳಗ್ಗೆ 9.10ಗಂಟೆಯ ಮುಹೂರ್ತದಲ್ಲಿ ದರ್ಶನ್, ಎಂಜಿನಿಯರಿಂಗ್ ವಿದ್ಯಾರ್ಥಿನಿ ವಿಜಯಲಕ್ಷ್ಮಿಯನ್ನು ಸಾಂಪ್ರದಾಯಿಕ ವಿಧಿ- ವಿಧಾನಗಳೊಂದಿಗೆ ಮದುವೆಯಾದರು. ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ನಡೆದ ಮದುವೆ ತೀರಾ ಖಾಸಗಿಯಾಗಿತ್ತು. ಅಭಿಮಾನಿಗಳ ದಂಡು ದರ್ಶನ್‌ರನ್ನು ಸುತ್ತುವರಿದಾರೆಂಬ ಕಾರಣಕ್ಕೆ ಅಲ್ಲಲ್ಲಿ ಪೊಲೀಸರು ಗಸ್ತು ಹೊಡೆಯುತ್ತಿದ್ದರು.
ಅಂದಹಾಗೆ, ಜೂನ್ 1ನೇ ತಾರೀಕು ಬೆಂಗಳೂರಿನಲ್ಲಿ ದರ್ಶನ್- ವಿಜಯಲಕ್ಷ್ಮಿ ಜೋಡಿಯ ಆರತಕ್ಷತೆ ಇದೆ. ಅಲ್ಲಿ ಚಿತ್ರೋದ್ಯಮದ ದಂಡು ಒಂದೆಡೆ ಸೇರುವ ನಿರೀಕ್ಷೆಯಿದೆ.
ಇಂದ್ರಜಿತ್ ನಿರ್ದೇಶನದ ಮುಖಪುಟ / ಸ್ಯಾಂಡಲ್‌ವುಡ್


Click it and Unblock the Notifications