»   » ‘ಅಯ್ಯ’ನಿಗೆ ರವಿಚಂದ್ರನ್‌ ರಾಗ

‘ಅಯ್ಯ’ನಿಗೆ ರವಿಚಂದ್ರನ್‌ ರಾಗ

Posted By: Staff
Subscribe to Filmibeat Kannada

'ಪ್ರೀತ್ಸೋದ್‌ ತಪ್ಪಾ"ದ್ದರಿಂದ ರವಿಚಂದ್ರನ್‌ ಸಂಗೀತ ನಿರ್ದೇಶಕರಾದ್ರೇ?

ಒಂದಂತೂ ನಿಜ. 'ಪ್ರೇಮಲೋಕ" ಜೋಡಿ ಹಂಸಲೇಖ-ರವಿಚಂದ್ರನ್‌ ಮನಸ್ತಾಪದ ಬಳಿಕ ರವಿ ಸಂಗೀತವನ್ನು ಕೈಗೆತ್ತಿಕೊಂಡರು. ಹಂಸಲೇಖ ಹಾಡಿನ ರವಿಮಾಮನ ಚಿತ್ರಲೇಪವನ್ನು ಅನುಭವಿಸಿದ ಕನ್ನಡ ಚಿತ್ರ ಪ್ರೇಮಿಗಳಿಗೆ ಆಗ ನೂರಕ್ಕೆ ನೂರರಷ್ಟು ನಿರಾಶೆಯಾಗಿತ್ತು. ಮತ್ತೆ ಹಂಸ-ರವಿ ಜೋಡಿ 'ಒಂದಾಗೋಣ ಬಾ" ಅಂದ್ರೂ, ಜನ ಕಿವಿಕೊಡಲಿಲ್ಲ. ಆ ನಡುವೆ ರವಿಮಾಮನ ಸಂಗೀತಕ್ಕೆ ಸೆಲೆ ಸಿಕ್ಕಿದ್ದು 'ಬಣ್ಣ ಬಣ್ಣದಾ ಲೋಕ... " (ಏಕಾಂಗಿ) ಹಾಡಿನ ಮೂಲಕ. ಆದರ ಯಶಸ್ಸಿನಿಂದ ಅವರ ಸಂಗೀತಕ್ಕೆ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಸಿಕ್ಕಿದೆ. ತಮ್ಮದಲ್ಲದ ಚಿತ್ರವೊಂದಕ್ಕೆ ರವಿಚಂದ್ರನ್‌ ಚೊಚ್ಚಲ ಬಾರಿಗೆ ಸಂಗೀತ ನೀಡುತ್ತಿದ್ದಾರೆ. ಚಿತ್ರ 'ಅಯ್ಯ"

ಇದು 'ಕಲಾಸಿಪಾಳ್ಯ" ಜೋಡಿ ದರ್ಶನ್‌-ರಕ್ಷಿತಾ ಅಭಿನಯದ ಮಗದೊಂದು ಚಿತ್ರ. 'ಅಯ್ಯ"ಚಿತ್ರದ ನಿರ್ದೇಶಕರೂ ಓಂ ಪ್ರಕಾಶ್‌ ರಾವ್‌. ಈ ಚಿತ್ರದಲ್ಲಿ ದರ್ಶನ್‌ ಗೆಟಪ್‌ ಬದಲಾಗಿದೆ. 'ಕಿಚ್ಚಾನೊ ಮಚ್ಚಾನೋ ... "ಕೈಗಳಿಗೆ ಬೀಡಿ ಬಂದಿದೆ. ಲುಂಗಿ ಸೊಂಟವೇರಿದರೆ, ಅದರೊಳಗೊಂದು ಪಟ್ಟಿಪಟ್ಟಿ ಚಡ್ಡಿ. ಮೀಸೆ ಕಂಡರೆ ವೀರಪ್ಪನ್‌ ನಾಚಬಹುದು. ಹೇಂಗಂದ್ರೆ ಒಬ್ಬ ಶುದ್ಧ 'ಆಯ್ಯ...! "

ಈ ಚಿತ್ರದ ಹಾಡುಗಳ ಧ್ವನಿ ಮುದ್ರಣ ಸಮಾರಂಭ ಅಶ್ವಿನಿ ಸ್ಟುಡಿಯೋದಲ್ಲಿ ನಡೆದಿದೆ. ನಿರ್ಮಾಪಕ ಎಚ್‌.ಸಿ. ಭೈರೇಗೌಡರ ಚಿತ್ರವಿದು.

ಚಿತ್ರವೊಂದರ ಯಶಸ್ಸಿನಲ್ಲಿ ಸಂಗೀತವೂ ಮುಖ್ಯ ಕಾರಣ. ಸಂಗೀತ ಚೆನ್ನಾಗಿದ್ದರೆ ಚಿತ್ರಕ್ಕೆ ಉತ್ತಮ ಪ್ರಚಾರ ಸಿಗುತ್ತದೆ ಎಂಬುದು ರವಿ ಅಭಿಮತ. 'ಮಲ್ಲ" ಇದಕ್ಕೆ ಒಂದು ಉದಾಹರಣೆ ಎನ್ನುವ ಇವರು ಈಗ ಚಿತ್ರಗಳಲ್ಲಿ ಸಂಗೀತಕ್ಕೆ ಮಹತ್ವ ನೀಡುತ್ತಿಲ್ಲ. ಹಾಗಾಗಿಯೇ 30-40 ಲಕ್ಷ ನೀಡಿ ಆಡಿಯೋ ಹಕ್ಕನ್ನು ಪಡೆಯುತ್ತಿದ್ದ ಅಡಿಯೋ ಕಂಪನಿಗಳು ಚಿತ್ರವೊಂದರ ಸಂಗೀತಕ್ಕೆ ಬರೀ 4-5 ಲಕ್ಷ ನೀಡುತ್ತಾರೆ ಎಂದು ನಿರಾಶೆಯಲ್ಲಿ ನುಡಿದರು. ರವಿಚಂದ್ರನ್‌ ಚಿತ್ರಗಳಲ್ಲಿ ಹಾಡಿಗೆ ವಿಶೇಷ ಆದ್ಯತೆ. ಅಶ್ವಿನಿ ಆಡಿಯೋಗೆ ಮೊದಲ ಹಿಟ್‌ ನೀಡಿದ್ದೇ 'ಕನಸುಗಾರ".

ಅಯ್ಯ ಸಂಗೀತಕ್ಕೆ ಮಲ್ಲನ ಸಂಭಾವನೆ ಎಷ್ಟು ಗೊತೆೇ? ಕೇವಲ ಎರಡು ರೂಪಾಯಿಗಳು ಮಾತ್ರ! ಒಂದು ಕ್ಯಾಸೆಟ್‌ ಮೇಲೆ.

English summary
Ravichandrana first time composes music for external film. Aiyya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada