»   » ಸೌಮ್ಯ ನೀಏನಂತಿ, ಸ್ಯಾಂಡಲ್‌ವುಡ್‌ನಲ್ಲಿ ಅಮೆರಿಕನ್ನಡತಿ

ಸೌಮ್ಯ ನೀಏನಂತಿ, ಸ್ಯಾಂಡಲ್‌ವುಡ್‌ನಲ್ಲಿ ಅಮೆರಿಕನ್ನಡತಿ

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts


  ಆ ಜಿಂಕೆ ಮರಿ ಕಂಗಳಲ್ಲಿ ಕಾಂತಿಯಿದೆ, ಕೌತುಕವಿದೆ. ದೂರದೂರಿನಿಂದ ಗಂಧದ ಗುಡಿಗೆ ಜಿಗಿದು ಜಿಗಿದು ಬಂದಿರುವ ಆ ಜಿಂಕೆಗೆ ತನ್ನನ್ನು ಗಂಧದ ಗುಡಿಯಲ್ಲಿ ಪ್ರೀತಿಯಿಂದ ಸಲಹುವರೆಂಬ ವಿಶ್ವಾಸ. ಆ ಜಿಂಕೆ ಕಂಗಳ ಚೆಲುವೆ ದೂರದ ನ್ಯೂಯಾರ್ಕ್‌ನಿಂದ ಜಿಗಿಜಿಗಿದು ಬಂದಿರುವ ಅಪ್ಪಟ ಕನ್ನಡತಿ ಸೌಮ್ಯ ಮೂರ್ತಿ. ಸೌಮ್ಯತೆಯೇ ಮೂರ್ತಿವೆತ್ತಂತಿರುವ ಅಮೆರಿಕನ್ನಡತಿ ‘ಮಿಸ್‌ ಕ್ಯಾಲಿಫೋರ್ನಿಯಾ’ ಚಿತ್ರದ ನಾಯಕಿ. ಈಗ ಕನ್ನಡ ಚಿತ್ರರಂಗದಲ್ಲಿ ಅದೃಷ್ಟವನ್ನರಸಿ ಕನ್ನಡಿಗರ ಮುಂದೆ ಕೈಕಟ್ಟಿ ನಿಂತಿದ್ದಾರೆ.

  ಪಾತ್ರವೆಂಥಾದ್ದಾದರೂ ಇರಲಿ ಪಾತ್ರವೊಂದಿರಲಿ ಎಂದು ಹಂಬಲಿಸುವ ‘ಕಲಾವಿದರು’ ಹೆಜ್ಜೆಗೊಬ್ಬರು ಸಿಗುತ್ತಾರೆ ಸ್ಯಾಂಡಲ್‌ವುಡ್‌ನಲ್ಲಿ. ಅಗತ್ಯಕ್ಕೆ ತಕ್ಕಷ್ಟು ನಟಿಸಿ, ಅಗತ್ಯಕ್ಕಿಂತ ಹೆಚ್ಚು ‘ಪ್ರತಿಭೆ’ಯನ್ನು ಪ್ರದರ್ಶಿಸುವ ಗೌರಮ್ಮಂದಿರ ನಡುವೆ ಅಷ್ಟೇನೂ ಮಡಿವಂತವಲ್ಲದ ದೇಶದಿಂದ, ಸಾಂಪ್ರದಾಯಿಕ ಕುಟುಂಬದಿಂದ ಬಂದಿರುವ ಸೌಮ್ಯ ಬೇರೆಯಾಗಿ ನಿಲ್ಲುತ್ತಾರೆ.

  ಬೆಂಗಳೂರಿನಲ್ಲಿ ಹುಟ್ಟಿದ್ದರೂ ಚಿಕ್ಕ ವಯಸ್ಸಿನಲ್ಲಿ ಅಪ್ಪ-ಅಮ್ಮನೊಡನೆ ಅಮೆರಿಕಕ್ಕೆ ನೆಗೆದ ಸೌಮ್ಯನಲ್ಲಿ ಹರಿಯುತ್ತಿರುವುದು ಕನ್ನಡದ ರಕ್ತ. ಅಮೆರಿಕದಲ್ಲಿ ಹುಟ್ಟಿ ಬೆಳೆದವರಿಗೆ ಕನ್ನಡದ ಗಂಧ ಗಾಳಿ ಇರುವುದಿಲ್ಲ ಎಂದು ಮೂಗು ಮುರಿಯುವವರಿಗೆ ಸೌಮ್ಯ ಅಪವಾದ. ಕನ್ನಡ ಓದಲು, ಬರೆಯಲು ಬರುತ್ತದೆ. ಕಂಪ್ಯೂಟರ ಸೈನ್ಸ್‌ನಲ್ಲಿ ಪದವಿಯನ್ನು ಮಾಡಿರುವ ಅವರು ಕಾಲೇಜು ದಿನಗಳಿಂದಲೂ ಮಾಡೆಲಿಂಗ್‌ನಲ್ಲಿ ಮಾರ್ಜಾಲನಡಿಗೆ ಮಾಡುತ್ತಿದ್ದಾರೆ. ಫ್ಯಾಷನ್‌ಗಾಗಿ ಪ್ರಾರಂಭವಾದ ಮಾಡೆಲಿಂಗ್‌ ನಂತರ ಪ್ಯಾಷನ್‌ ಆಯಿತು.

  ಮಿಸ್‌ ಕ್ಯಾಲಿಫೋರ್ನಿಯಾಗೆ ನಾಯಕಿಯರು ಬೇಕಾಗಿದ್ದಾರೆ ಎಂಬ ಜಾಹೀರಾತನ್ನು ದಟ್ಸಕನ್ನಡದಲ್ಲಿ ನೋಡಿಯೇ ಅವರು ಅರ್ಜಿ ಗುಜರಾಯಿಸಿದ್ದನ್ನು ನೆನಪಿಸಿಕೊಳ್ಳಲು ಅವರು ಮರೆಯುವುದಿಲ್ಲ. ಅಚ್ಚುಮೆಚ್ಚಿನ ದಟ್ಸಕನ್ನಡ ಅವರ ಪಾಲಿನ ಅದೃಷ್ಟದ ಅಂತರ್ಜಾಲ ತಾಣವಾಗಿರುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

  ಕನ್ನಡ ಕುರಿತು ಬೆಚ್ಚನೆಯ ಪ್ರೀತಿ ಹೊಂದಿರುವ ಸೌಮ್ಯ ಅವರು ಕನ್ನಡ, ಕನ್ನಡ ಚಿತ್ರರಂಗ, ಕೈಗೆತ್ತಿಕೊಂಡಿರುವ ಹೊಸ ವೃತ್ತಿ ಕುರಿತಂತೆ ಮನಸ್ಸನ್ನು ಬಿಚ್ಚಿಟ್ಟಿದ್ದಾರೆ.

  1. ಮಿಸ್‌ ಕ್ಯಾಲಿಫೋರ್ನಿಯಾ ಬಿಡುಗಡೆಯಾಗುತ್ತಿರುವ ಸಂದರ್ಭದಲ್ಲಿ ಚಿತ್ರರಂಗ ಮತ್ತು ಪ್ರೇಕ್ಷಕರಿಂದ ಏನನ್ನು ನಿರೀಕ್ಷಿಸುತ್ತೀರಿ?

  2. ಕನ್ನಡ ಚಿತ್ರರಂಗ ಮೊದಲಿನಿಂದಲೂ ಕದತಟ್ಟುವ ಪ್ರತಿ ಹೊಸಬರನ್ನು ಸ್ವಾಗತಿಸಿದೆ. ದೀರ್ಘಕಾಲ ಕಲಾಸೇವೆ ಸಲ್ಲಿಸಲು ಮತ್ತು ಛಾಪನ್ನು ಮೂಡಿಸಲು ಅನುವುಮಾಡಿಕೊಟ್ಟಿದೆ. ನಾನೂ ಕೂಡ ಚಿತ್ರರಂಗದಿಂದ ಮತ್ತು ಪ್ರೇಕ್ಷಕರಿಂದ ಇದನ್ನೇ ಬಯಸುತ್ತೇನೆ.
   ಎನ್‌ಆರ್‌ಐ ಆಗಿರುವುದರಿಂದ ಅಂಥದೇನು ವ್ಯತ್ಯಾಸ ಕಂಡುಬರುವುದಿಲ್ಲ. ಕನ್ನಡತಿಯಾಗಿ ಕನ್ನಡ ಚಿತ್ರಗಳನ್ನು ಎಂದಿನಿಂದಲೂ ಪ್ರೀತಿಸುತ್ತಿದ್ದೇನೆ. ಆದ್ದರಿಂದ ಈಗ ಕನ್ನಡ ಚಿತ್ರರಂಗದ ಭಾಗವಾಗಿರುವುದು ಹೊಸ ಹುಮ್ಮಸ್ಸನ್ನು ಮೂಡಿಸಿದೆ.
  3. ಅನಿವಾಸಿ ಭಾರತೀಯರಾಗಿರುವ ನಿಮಗೆ ಕನ್ನಡ ಚಿತ್ರರಂಗದ ಭಾಗವಾಗಿರುವುದು ಹೇಗನಿಸುತ್ತದೆ?
   ಸಿನೆಮಾದಲ್ಲಿ ನಟಿಸುವ ಕನಸು ಎಂದೂ ಕಂಡಿರಲಿಲ್ಲ. ಆದರೆ, ನನ್ನ ಮೊದಲ ಚಿತ್ರ ನನ್ನ ಮಾತೃಭಾಷೆಯಾದ ಕನ್ನಡದಲ್ಲಿರುವುದು ಹೆಚ್ಚಿನ ಸಂತೋಷ ತಂದಿದೆ.
  4. ಕನ್ನಡ ಚಿತ್ರದಲ್ಲಿ ನಟಿಸುವುದು ಎಂದಾದರೂ ನಿಮ್ಮ ಕನಸಾಗಿತ್ತಾ?
   ನಟರಾಗಿರಬಹುದು ಅಥವ ಇನ್ನೊಂದಾಗಿರಬಹುದು ಪ್ರತಿಯಾಬ್ಬನಿಗೂ ವಿಭಿನ್ನ ವ್ಯಕ್ತಿತ್ವವಿದ್ದೇ ಇರುತ್ತದೆ. ನಾನೊಬ್ಬ ಯಶಸ್ವಿ ಕಲಾವಿದೆಯಾಗುವುದು ನನ್ನನ್ನು ಚಿತ್ರಪ್ರೇಮಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದರ ಮೇಲೆ ನಿರ್ಧರಿತವಾಗಿದೆ.
  5. ಈಗಿರುವ ನಟಿಯರಿಂದ ನೀವು ಭಿನ್ನರಾಗಿರುವಿರೆಂದು ಭಾವಿಸುತ್ತೀರಾ?
   ಶೂಟಿಂಗ್‌ ಮಾಡುವಾಗಿನ ಅನುಭವ ಹೊಸದು. ಕರ್ನಾಟಕದಲ್ಲಿ ಶೂಟಿಂಗ್‌ ಮುಗಿಯುತ್ತಿದ್ದಂತೆ ಅಮೆರಿಕಕ್ಕೆ ಹಾರಿದೆ, ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಲಾಗಲಿಲ್ಲ. ಹೀಗಾಗಿ ಬೆಂಗಳೂರಿನಲ್ಲಿ ಯಾವ ಅಭಿಪ್ರಾಯವಿದೆ ಎಂದು ಗೊತ್ತಿಲ್ಲ. ಅಮೆರಿಕದಲ್ಲೂ ಹೆಚ್ಚಿನ ವ್ಯತ್ಯಾಸ ಕಂಡುಬರುತ್ತಿಲ್ಲ. ಆದರೆ, ನ್ಯೂಯಾರ್ಕ್‌ ಮತ್ತು ಸುತ್ತಲಿನ ಸ್ನೇಹಿತರು ನನ್ನ ಹೊಸ ಚಿತ್ರದ ಬಗ್ಗೆ ಅಭಿಮಾನದಿಂದ ಮಾತಾಡುತ್ತಾರೆ ಮತ್ತು ಆಶಾಭಾವನೆ ಹೊಂದಿದ್ದಾರೆ.
  6. ಚಿತ್ರನಟಿ ಎಂದು ಗುರುತಿಸಲ್ಪಟ್ಟನಂತರ ಕರ್ನಾಟಕದಲ್ಲಿ ಮತ್ತು ಅಮೆರಿಕದಲ್ಲಿ ಹೇಗೆ ಪ್ರತಿಕ್ರಿಯೆ ವ್ಯಕ್ತವಾಗಿದೆ?
   ಮಿಸ್‌ ಕ್ಯಾಲಿಫೋರ್ನಿಯಾ ಬಿಡುಗಡೆಯಾಗಿ ಚಿತ್ರರಂಗ ಮತ್ತು ಕನ್ನಡ ಪ್ರೇಕ್ಷಕರು ನಮ್ಮಂಥ ಹೊಸಬರನ್ನು ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ನನ್ನ ಈ ಹೊಸ ವೃತ್ತಿಗೆ ಅತ್ಯಂತ ಬದ್ಧನಾಗಿದ್ದೇನೆ ಮತ್ತು ಇನ್ನೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಗುವ ಭರವಸೆಯನ್ನು ಹೊಂದಿದ್ದೇನೆ.
  7. ಮತ್ತೊಬ್ಬ ಅಮೆರಿಕನ್ನಡತಿ ದೀಪಾಲಿ ಚಿತ್ರರಂಗದಲ್ಲಿ ಎಲ್ಲಯೂ ಕಂಡುಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ, ನಿಮ್ಮ ಭವಿಷ್ಯದ ಕುರಿತು ಯಾವ ನಿಲುವು ಹೊಂದಿದ್ದೀರಿ?
   ಮೊದಲ ಕೆಲ ಕ್ಷಣಗಳು ನರ್ವಸ್‌ ಆಗಿದ್ದೆ, ನಂತರ ಕೂಡಲೆ ಹೊಂದಿಕೊಂಡೆ. ಒಟ್ಟಿನಲ್ಲಿ ಶೂಟಿಂಗ್‌ನಲ್ಲಿ ಕಳೆದ ಕ್ಷಣಗಳು ಅವಿಸ್ಮರಣೀಯ. ಶೂಟಿಂಗ್‌ ತಂಡದ ಎಲ್ಲರೂ ನನಗೆ ಫ್ರೋತ್ಸಾಹ ನೀಡಿದರು ಮತ್ತು ನನ್ನ ನಟನೆಯನ್ನು ಶ್ಲಾಘಿಸಿದರು.
  8. ಕ್ಯಾಮರಾವನ್ನು ಮೊಟ್ಟ ಮೊದಲ ಬಾರಿಗೆ ಹೇಗನ್ನಿಸಿತು?
   ಅತ್ಯಂತ ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದರೂ ನನ್ನನ್ನು ಆಧುನಿಕ ವಾತಾವರಣದಲ್ಲಿ ಬೆಳೆಸಲಾಗಿದೆ. ಕನ್ನಡ ಚಿತ್ರಗಳಲ್ಲಿ ದೇಹ ಪ್ರದರ್ಶನ ಮಾಡುವುದು ಬಿಡುವುದು ಅವರವರಿಗೆ ಬಿಟ್ಟ ವಿಚಾರ. ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ.
  9. ನಾನ್‌-ಕನ್ಸರ್ವೆಟೀವ್‌ ರಾಷ್ಟ್ರದಿಂದ ಬಂದು ಮಡಿವಂತಿಕೆಗೆ ಪ್ರಾಶಸ್ತ್ಯ ನೀಡುವ ರಾಜ್ಯದಲ್ಲಿ ಪಾದಾರ್ಪಣ ಮಾಡುತ್ತಿದ್ದೀರಾ. ಇಂಥ ಸಮಯದಲ್ಲಿ ದೇಹ ಪ್ರದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯವೇನು?
   ನಟನೆ ಎನ್ನುವುದು ನಿರಂತರವಾಗಿ ಕಲಿಯುವ ಪ್ರಕ್ರಿಯೆ. ಪ್ರತಿ ದೃಶ್ಯದಿಂದ ಕಲಿಯುವುದಿರುತ್ತದೆ. ಪ್ರತಿ ಸಹನಟನಿಂದಲೂ ಏನಾದರೂ ಹೊಸದೊಂದು ಕಲಿಯುವುದು ಇದ್ದೇ ಇರುತ್ತದೆ. ಪ್ರತಿ ನಟಿಗೂ ಪಕ್ಕದ ಮನೆ ಹುಡುಗಿ ಅಥವ ಕನಸಿನ ಕನ್ಯೆಯಾಗಿ ನಟಿಸುವ ಅವಕಾಶ ಸಿಕ್ಕೇ ಸಿಗುತ್ತದೆ. ಆದರೆ, ಪ್ರತಿ ಪಾತ್ರಗಳನ್ನು ಆಯ್ದುಕೊಳ್ಳುವಾಗ ಕಾಳಜಿವಹಿಸುವುದು ಅಷ್ಟೇ ಮುಖ್ಯ. ಎಲ್ಲಕ್ಕಿಂತ ಮುಖ್ಯವಾಗಿ ಪ್ರೇಕ್ಷಕರು ಥಿಯೇಟರುಗಳಿಗೆ ಹೋಗಿ ಕಲಾವಿದರನ್ನು ಚಪ್ಪಾಳೆಗಳ ಮುಖಾಂತರ ಹುರಿದುಂಬಿಸಬೇಕು.
  10. ಚಿತ್ರರಂಗದಲ್ಲಿ ಸ್ಪರ್ಧಾತ್ಮಕ ವಾತಾವರಣ ಇರುವ ಹಿನ್ನೆಲೆಯಲ್ಲಿ ಒಬ್ಬ ನಟಿಗೆ ಇರಬೇಕಾದ ನೈಪುಣ್ಯತೆ ಏನೆಂದು ನಿಮ್ಮ ಭಾವನೆ?
   ಅದೃಷ್ಟದ ಪಾತ್ರವಿದ್ದೇ ಇರುತ್ತದೆ. ನನ್ನ ವಿಷಯದಲ್ಲಿ ಮಿಸ್‌ ಕ್ಯಾಲಿಫೋರ್ನಿಯಾ ಚಿತ್ರಕ್ಕೆ ಆಯ್ಕೆಯಾಗಿರುವುದು ಕೇವಲ ಕಾಕತಾಳೀಯ. ನನ್ನ ಚಿತ್ರ ಬದುಕಿಗೆ ನೆರವು ನೀಡಿದವರಿಗೆ ನಾನು ಕೃತಜ್ಞಳಾಗಿದ್ದೇನೆ.
  11. ಮಿಸ್‌ ಕ್ಯಾಲಿಫೋರ್ನಿಯಾಗೆ ನಿಮ್ಮ ಆಯ್ಕೆಯಲ್ಲಿ ಅದೃಷ್ಟ ಪಾತ್ರ ಎಷ್ಟಿದೆ?
   ಎಣಿಸಲಾರದಷ್ಟು. ಬಾಲ್ಯದಿಂದಲೂ ಕನ್ನಡ ಚಿತ್ರಗಳನ್ನು ನೋಡುತ್ತಲೇ ಬೆಳೆದಿದ್ದೇನೆ. ಮಿಸ್‌ ಕ್ಯಾಲಿಫೋರ್ನಿಯಾಗೆ ಆಯ್ಕೆಯಾಗಿರುವುದು ನಾನು ಎಷ್ಟು ಚಿತ್ರಗಳನ್ನು ನೋಡಿದ್ದೇನೆ ಎಂಬುದರ ಮಾನದಂಡದ ಮೇಲೆ ಅಲ್ಲ.
  12. ಈ ಚಿತ್ರಕ್ಕೆ ಆಯ್ಕೆಯಾಗುವ ಮೊದಲು ಎಷ್ಟು ಕನ್ನಡ ಚಿತ್ರಗಳನ್ನು ನೋಡಿದ್ದಿರಿ?
   ನಾನೂ ಕೂಡ ಹೊಸಬಳಾಗಿರುವುದರಿಂದ ದಿಗಂತ್‌, ಜಾನು ನಾವೆಲ್ಲ ಒಂದೇ ದೋಣಿಯಲ್ಲಿ ಪಯಣಿಸುತ್ತಿರುವ ಪಯಣಿಗರು. ಒಟ್ಟಿಗೆ ನಟಿಸುವುದು ಬಲೇ ಮಜವಾಗಿತ್ತು. ಹಿರಿಯರೊಂದಿಗೆ ನಟಿಸುವುದು ನಮಗೆಲ್ಲ ಕಲಿಕೆಯ ಮಜಲುಗಳು. ಇಂಥ ಹಿರಿಯರನ್ನು ಭೇಟಿ ಮಾಡುವುದು ಕನಸಿನ ಮಾತಾಗಿದ್ದ ಸಂದರ್ಭದಲ್ಲಿ ಇವರೊಂದಿಗೆ ನಟಿಸುವ ಅವಕಾಶ ಸಿಕ್ಕಿದ್ದು ನಮ್ಮೆಲ್ಲರ ಸೌಭಾಗ್ಯ. ನಿರ್ದೇಶಕ ಕೂಡ್ಲು ಅವರಿಗೆ ನಮ್ಮನ್ನು ಪ್ರೋತ್ಸಾಹಿಸಿದ್ದಕ್ಕೆ ವಿಶೇಷ ಧನ್ಯವಾದಗಳು.
  13. ಹೊಸಬರಾದ ದಿಗಂತ್‌, ಜಾನು ಮತ್ತು ಹಿರಿಯ ನಟರಾದ ಶರತ್‌ಬಾಬು, ದತ್ತಣ್ಣ, ಗೀತಾ, ನಿರ್ದೇಶಕ ಕೂಡ್ಲು ರಾಮಕೃಷ್ಣರೊಂದಿಗೆ ಕೆಲಸ ಮಾಡುವ ಅನುಭವ ಹೇಗಿತ್ತು?
   ಖಂಡಿತವಾಗಿ. ಅದರಲ್ಲಿ ಶಂಕೆಯೇ ಬೇಡ.
  14. ನಟಿಸಲು ಇನ್ನೂ ಹೆಚ್ಚಿನ ಅವಕಾಶಗಳು ದೊರೆತರೆ ಬೆಂಗಳೂರಿನಲ್ಲಿ ನೆಲೆಯೂರುವ ಇರಾದೆ ಇದೆಯಾ?

  ಸೌಮ್ಯ ಮೂರ್ತಿ ಗ್ಯಾಲರಿ
  ಮಿಸ್‌ ಕ್ಯಾಲಿಫೋರ್ನಿಯಾ ಗ್ಯಾಲರಿ


  ಮುಖಪುಟ / ಸ್ಯಾಂಡಲ್‌ವುಡ್‌

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more