»   » ಈ ಹುಡುಗಿ- ವಿಜಿ ಮಾಯವಾದಳೊ? ಮಾಜಿಯಾದಳೊ?

ಈ ಹುಡುಗಿ- ವಿಜಿ ಮಾಯವಾದಳೊ? ಮಾಜಿಯಾದಳೊ?

Posted By: ರಾಜು
Subscribe to Filmibeat Kannada

ಕನ್ನಡದಲ್ಲಿ ನಾಯಕಿಯರಿಲ್ಲ.ಇದು ಹಳೇ ಸುದ್ದಿ. ಅಪರೂಪಕ್ಕೆ ಒಬ್ಬ ನಾಯಕಿ ಕಣ್ಣು ತೆರೆದರೂ ಆಕೆ ಬಹಳ ದಿನ ಬಾಳಿಕೆ ಇರುವುದಿಲ್ಲ. ಇನ್ನೇನು ಸ್ಟಾರ್‌ ಆಗಬೇಕು ಅನ್ನುವಾಗ ತಾಳಿಭಾಗ್ಯ ಕೂಡಿರುತ್ತದೆ. ಅಲ್ಲಿಗೆ ಅವಳ ವೃತ್ತಿ ಬದುಕು ಖಲಾಸ್‌.
ಉದಾಹರಣೆ ಅನು ಪ್ರಭಾಕರ್‌.

ಮದುವೆಯಾಗಲಿಲ್ಲ ಅಂತಾನೇ ಇಟ್ಟುಕೊಳ್ಳೋಣ. ಆಗ ಆಕೆಗೆ ಕನ್ನಡದ ಮೈದಾನ ಸಾಕಾಗುವುದಿಲ್ಲ, ತಮಿಳು ಮಾರ್ಕೆಟ್ಟು ಮತ್ತು ರೇಟು ಇವೆರಡರ ಆಕರ್ಷಣೆಯನ್ನು ತಾಳಲಾರೆ ಅನ್ನುತ್ತಾ ಅಲ್ಲಿಗೆ ಹಾರಿಹೋಗುತ್ತಾಳೆ.
ಉದಾಹರಣೆ ವಿಜಯಲಕ್ಷ್ಮಿ.

'ನಾಗಮಂಡಲ" ಚಿತ್ರದಿಂದ ಸುದ್ದಿಮಾಡಿದ ಈ ಕನ್ನಡದ ಕೂಸು ಈಗ ತಮಿಳಿನಲ್ಲಿ ತಿಪ್ಪರಲಾಗ ಹಾಕುತ್ತಿದೆ. ಈಕೆ ಕನ್ನಡದಲ್ಲೇ ಇದ್ದರೆ ನಂಬರ್‌ ವನ್‌ ನಟಿಯಾಗಬಹುದಿತ್ತು. ಆದರೆ ತಮಿಳಿನಲ್ಲಿ ಕೇಳುವವರೇ ಇಲ್ಲ. ತಮಿಳಿನಲ್ಲಿ ಈಕೆ ನಟಿಸಿದ ಮೊದಲ ಚಿತ್ರ 'ಫ್ರೆಂಡ್ಸ್‌" ತೋಪಾಗಿದೆ. ಮತ್ತೊಂದು ಚಿತ್ರ ಬಿಡುಗಡೆಯಾಗಿಲ್ಲ. ಕಳೆದ ಒಂದು ವರ್ಷದಲ್ಲಿ ವಿಜಿ ನಟಿಸಿದ್ದು ಒಂದೇ ಕನ್ನಡ ಚಿತ್ರ. ಅದೇ 'ಡ್ಯಾಡಿ ನಂಬರ್‌ ವನ್‌". ಒಂದೇ ವಾರಕ್ಕೆ ಚಿತ್ರ ಥಿಯೇಟರ್‌ನಿಂದ ಮಾಯವಾಯಿತು. ಈಗ 'ಲಕ್ಷ್ಮಿ" ಎಂಬ ಇನ್ನೊಂದು ಚಿತ್ರ ಚಿತ್ರೀಕರಣದ ಹಂತದಲ್ಲಿದೆ. ಇದು ಬಿಡುಗಡೆಯಾಗುವ ಬಗ್ಗೆ ಗಾಂಧಿನಗರ ಗ್ಯಾರಂಟಿ ಕೊಡುವುದಿಲ್ಲ.

ಇನ್ನೊಂದು ವರ್ಷ ಕಳೆದರೆ ವಿಜಿ ಮಾಜಿ ನಾಯಕಿಯಾಗುತ್ತಾಳೆ. ಅಲ್ಲಿ ತನಕ ನನ್ನ ಸಂಭಾವನೆ ಮೂರು ಲಕ್ಷ ಅನುತ್ತಾ ಕಾಲ ಕಳೆಯುವುದಕ್ಕೆ ಅಡ್ಡಿಯಿಲ್ಲ.

ವಿಜಯಲಕ್ಷ್ಮಿ ನಟಿಸದಿದ್ದರೆ ನಷ್ಟವಾಗೋದು ಯಾರಿಗೆ? ಪತ್ರಿಕೆಗಳಿಗೆ ಎನ್ನುವವರಿದ್ದಾರೆ, ಯಾಕೆಂದರೆ ಆಕೆ ಇಲ್ಲಿದ್ದಷ್ಟೂ ದಿನ ವಿವಾದಗಳಿಗೆ ಬರವಿರಲಿಲ್ಲ. ಈಗಿನ ಹೀರೋಯಿನ್‌ಗಳಿಗೆ ಕಾಂಟ್ರವರ್ಸಿ ಮಾಡೋದು ಗೊತ್ತಿಲ್ಲ.

English summary
Is Nagamandala Vijayalakshmi vanished?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada