»   » ‘ಭೂತ’ ಕಾಟದಿಂದ ಸತ್ತ ದೆಹಲಿ ಪ್ರೇಕ್ಷಕ

‘ಭೂತ’ ಕಾಟದಿಂದ ಸತ್ತ ದೆಹಲಿ ಪ್ರೇಕ್ಷಕ

Posted By: Staff
Subscribe to Filmibeat Kannada
bhoot
ನವದೆಹಲಿ : ಜೂನ್‌ 16ನೇ ತಾರೀಕು ಸೋಮವಾರ ರಾತ್ರಿ ಇಲ್ಲಿನ ಚಿತ್ರಮಂದಿರವೊಂದರ ಸೆಕೆಂಡ್‌ ಷೋನಲ್ಲಿ 'ಭೂತ್‌" ಹಿಂದಿ ಸಿನಿಮಾ ನೋಡಿದ ಸುಮಾರು 50 ವರ್ಷದ ಪ್ರೇಕ್ಷಕ ಸತ್ತಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರೇಕ್ಷಕ ಸತ್ತ ಮರುದಿನ ಚಿತ್ರಮಂದಿರದ ಕಸ ಗುಡಿಸುವವರು ಆತನ ಕಳೇಬರವನ್ನು ನೋಡಿದ್ದಾರೆ. ಪೊಲೀಸರು ಶವವನ್ನು ವೈದ್ಯಕೀಯ ಪರೀಕ್ಷೆಗೆ ಕಳಿಸಿದ ನಂತರ, ಆತ ನರಗಳು ಕುಸಿದು ಬಿದ್ದ ಕಾರಣ ಸತ್ತಿರಬಹುದು ಎಂಬ ವಿಷಯ ಪತ್ತೆಯಾಗಿದೆ.

ರಾಮ್‌ಗೋಪಾಲ್‌ ವರ್ಮಾ ತೆಗೆದಿರುವ 'ಭೂತ್‌" ಚಿತ್ರ ಭಯ ಹುಟ್ಟಿಸುವ ಅಂಶಗಳಿಂದ ಕೂಡಿದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ. ಮುಂಬಯಿಯ ಅಪಾರ್ಟ್‌ಮೆಂಟೊಂದರಲ್ಲಿ ಭೂತದ ಕಾಟದಿಂದ ನರಳುವ ಗೃಹಿಣಿಯಾಬ್ಬಳ ಕಥಾ ವಸ್ತುವಿರುವ ಚಿತ್ರದ ಮೊದಲರ್ಧ ನೋಡಿದ ನಂತರ ಪ್ರೇಕ್ಷಕ ಸತ್ತಿರಬಹುದು ಎಂದು ಆತನ ಅಕ್ಕ- ಪಕ್ಕ ಕೂತಿದ್ದ ಮಂದಿ ಹೇಳಿದ್ದಾರೆ.

ಸಿನಿಮಾ ಶುರುವಾಗುವ ಮೊದಲೇ 'ಹೃದಯ ಸಂಬಂಧಿ ಕಾಯಿಲೆಯಿರುವವರು ಹಾಗೂ ಗರ್ಭವತಿಯರು ಈ ಸಿನಿಮಾ ನೋಡುವುದು ತ್ರಾಸು" ಎಂಬ ಎಚ್ಚರಿಕೆಯ ಶರಾ ಕೂಡ ತೆರೆ ಮೇಲೆ ಮೂಡುತ್ತಿದೆ.

ಸೋತು ಸೊರಗಿದ್ದ ಬಾಲಿವುಡ್‌ನಲ್ಲಿ ಭಾರೀ ದುಡ್ಡು ಮಾಡುತ್ತಿರುವ 'ಭೂತ್‌" ಸಿನಿಮಾದ ವೇಗಕ್ಕೆ ಈ ಸಾವು ಅಡಚಣೆಯಾದೀತೆ?(ಇನ್ಫೋ ವಾರ್ತೆ)

English summary
A man was found dead in his seat at a cinema in the Indian capital after the latenight screening of a horror film, Bhoot, which the director has warned could pose a health risk to those of a nervous disposition.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada